ರೈತ ID ಇಲ್ಲದಿದ್ದರೆ ಸರ್ಕಾರದ ಹಣ ನಿಲ್ಲುತ್ತದೆ – ಈಗಲೇ ಮಾಡಿಕೊಳ್ಳಿ, ಹೇಗೆ ಗೊತ್ತಾ..?

ನಮಸ್ಕಾರ ಸ್ನೇಹಿತರೆ, ಸರ್ಕಾರದ ಸೌಲಭ್ಯಗಳು, ಅದರಲ್ಲೂ ಪಿಎಂ ಕಿಸಾನ್‌ನಂತಹ ಯೋಜನೆಗಳ ಹಣ ನೇರವಾಗಿ ನಿಮ್ಮ ಅಕೌಂಟ್‌ಗೆ ಜಮಾ ಆಗಬೇಕು ಅಂದ್ರೆ ಒಂದು ಮುಖ್ಯ ಅಪ್ಡೇಟ್ ಇದೆ.

ಹೌದು, ಕೇಂದ್ರ ಸರ್ಕಾರದಿಂದ ಹೊಸ ರೈತ ಐಡಿ ಪರಿಕಲ್ಪನೆ ಜಾರಿಗೆ ಬಂದಿದೆ. ನೀವು ಮುಂದಿನ ಕಂತುಗಳ ಹಣ ತಡೆರಹಿತವಾಗಿ ಪಡೆಯಲು ಈ ‘ವಿಶಿಷ್ಟ ರೈತ ಗುರುತಿನ ಚೀಟಿ’ ಕಡ್ಡಾಯ.

ಇದನ್ನ ಮಾಡಿಸಿಲ್ಲ ಅಂದ್ರೆ ನಿಮ್ಮ ಬ್ಯಾಂಕ್ ಖಾತೆಗೆ ಸರ್ಕಾರದಿಂದ ಹಣ ಬರೋದು ಕಷ್ಟ ಆಗಬಹುದು.

ಹಾಗಿದ್ರೆ, ಏನಿದು ರೈತ ಐಡಿ, ಇದರಿಂದ ರೈತರಿಗೆ ಆಗುವ ಲಾಭಗಳೇನು, ಯಾರು ಅರ್ಹರು ಮತ್ತು ಇದನ್ನ ಹೇಗೆ ಪಡೆಯಬೇಕು ಅಂತ ಡೀಟೇಲ್ ಆಗಿ ನೋಡೋಣ. ಈ ಮಾಹಿತಿಯನ್ನು ಮಿಸ್ ಮಾಡ್ಕೋಬೇಡಿ.

ರೈತ ಐಡಿ ಅಂದ್ರೆ ಏನು?

ರೈತ ಐಡಿ ಅಂದ್ರೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಒಂದು ಡಿಜಿಟಲ್ ಐಡೆಂಟಿಫಿಕೇಶನ್ ನಂಬರ್.

ಪಿಎಂ ಕಿಸಾನ್‌ನಂತಹ ಯೋಜನೆಗಳಲ್ಲಿ ಪಾರದರ್ಶಕತೆ ಹೆಚ್ಚಿಸಲು ಇದನ್ನು ಅಗ್ರಿ ಸ್ಟ್ಯಾಕ್ ಯೋಜನೆ ಅಡಿಯಲ್ಲಿ ನೀಡಲಾಗ್ತಿದೆ. ಇದು ರೈತರ ಆಧಾರ್ ಕಾರ್ಡ್, ಭೂ ದಾಖಲೆಗಳಾದ ಆರ್‌ಟಿಸಿ ಮತ್ತು ಬ್ಯಾಂಕ್ ಖಾತೆ ಡೀಟೇಲ್ಸ್ ಜೊತೆ ನೇರವಾಗಿ ಲಿಂಕ್ ಆಗಿರುತ್ತೆ. ನಮ್ಮ ಕರ್ನಾಟಕದಲ್ಲಿ ಈಗಾಗಲೇ ಇರುವ FRUITS (ಫ್ರೂಟ್ಸ್) ಐಡಿ ಮಾದರಿಯಲ್ಲಿ, ಈಗ ದೇಶಾದ್ಯಂತ ಈ ರೈತ ಐಡಿಯನ್ನು ಕಡ್ಡಾಯ ಮಾಡಲಾಗ್ತಿದೆ.

ರೈತ ಐಡಿ ಯಾಕೆ ಕಡ್ಡಾಯ?

ಈ ರೈತ ಐಡಿ ಕಡ್ಡಾಯ ಮಾಡಿರೋದಕ್ಕೆ ಮುಖ್ಯ ಕಾರಣ ನಕಲಿ ಅಥವಾ ಫೇಕ್ ಫಲಾನುಭವಿಗಳನ್ನು ಗುರುತಿಸಿ, ಸರ್ಕಾರಿ ಯೋಜನೆಗಳ ಲಾಭವನ್ನು ನಿಜವಾದ ರೈತರಿಗೆ ತಲುಪಿಸುವುದು.

ಕೆಲವೊಮ್ಮೆ ಸರ್ಕಾರ ರೈತರಿಗಾಗಿ ಉತ್ತಮ ಯೋಜನೆಗಳನ್ನು ತಂದರೂ, ಅವು ಅನರ್ಹರ ಪಾಲಾಗುವ ಸಾಧ್ಯತೆ ಇರುತ್ತೆ. ಇದನ್ನು ತಪ್ಪಿಸಿ, ಅರ್ಹ ರೈತರಿಗೆ ಮಾತ್ರ ಸೌಲಭ್ಯಗಳು ಸಿಗುವಂತೆ ಮಾಡುವುದು ಈ ರೈತ ಐಡಿ ಉದ್ದೇಶ. ಇದರಿಂದ ಸರ್ಕಾರದ ಹಣ ಸದುಪಯೋಗ ಆಗುತ್ತೆ, ಮಧ್ಯವರ್ತಿಗಳ ಕಾಟವೂ ಇರೋದಿಲ್ಲ.

‘ಒಂದು ರಾಷ್ಟ್ರ, ಒಂದು ರೈತ ಐಡಿ’ ಪರಿಕಲ್ಪನೆ

ರೈತ ಐಡಿ ಪರಿಕಲ್ಪನೆಯಲ್ಲಿ ‘ಒಂದು ರಾಷ್ಟ್ರ, ಒಂದು ರೈತ ಐಡಿ’ ಅನ್ನೋ ನಿಯಮ ಬಹಳ ಮುಖ್ಯ. ಅಂದ್ರೆ, ಒಬ್ಬ ರೈತ ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಜಮೀನು ಹೊಂದಿದ್ದರೂ, ಅವರಿಗೆ ಒಂದೇ ಯುನಿಕ್ ರೈತ ಐಡಿ ಇರುತ್ತೆ.

ಇದರಿಂದ ಏನಾಗುತ್ತೆ ಅಂದ್ರೆ, ರೈತರು ಬೇರೆ ಬೇರೆ ರಾಜ್ಯಗಳಲ್ಲಿ ಜಮೀನು ತೋರಿಸಿ ಒಂದೇ ಯೋಜನೆ ಅಡಿಯಲ್ಲಿ ಡಬಲ್ ಬೆನಿಫಿಟ್ ಪಡೆಯೋದಕ್ಕೆ ಬ್ರೇಕ್ ಬೀಳುತ್ತೆ.

ಇದು ಯೋಜನೆಯಲ್ಲಿ ಪಾರದರ್ಶಕತೆ ತರುವುದಲ್ಲದೆ, ಸರ್ಕಾರಿ ಹಣದ ದುರ್ಬಳಕೆಯನ್ನು ತಡೆಯುತ್ತೆ.

ನಕಲಿ ಫಲಾನುಭವಿಗಳ ಪತ್ತೆ ಹಾಗೂ ನೇರ ಹಣ ವರ್ಗಾವಣೆ

ಈ ರೈತ ಐಡಿ ವ್ಯವಸ್ಥೆಯಿಂದ ನಕಲಿ ಫಲಾನುಭವಿಗಳನ್ನು ಸುಲಭವಾಗಿ ಪತ್ತೆ ಹಚ್ಚಬಹುದು.

ಉದಾಹರಣೆಗೆ, ಒಂದೇ ಕುಟುಂಬದಲ್ಲಿ ಗಂಡ ಮತ್ತು ಹೆಂಡತಿ ಇಬ್ಬರೂ ಪಿಎಂ ಕಿಸಾನ್ ಹಣ ಪಡೆಯುತ್ತಿದ್ದರೆ, ನಿಯಮದ ಪ್ರಕಾರ ಒಂದು ಕುಟುಂಬಕ್ಕೆ ವರ್ಷಕ್ಕೆ 6000 ರೂಪಾಯಿ ಮಾತ್ರ ಸಿಗಬೇಕಾಗಿರುವುದರಿಂದ, ಒಬ್ಬರ ಖಾತೆಯನ್ನು ರದ್ದು ಮಾಡಲಾಗುತ್ತೆ. ಇದರಿಂದ ಅರ್ಹರಿಗೆ ಮಾತ್ರ ಲಾಭ ಸಿಗುತ್ತೆ.

ಅಷ್ಟೇ ಅಲ್ಲ, ಯಾವುದೇ ಮಧ್ಯವರ್ತಿಗಳ ತೊಂದರೆ ಇಲ್ಲದೆ ಸರ್ಕಾರದ ಹಣ ನೇರವಾಗಿ ನಿಮ್ಮ ಬ್ಯಾಂಕ್ ಅಕೌಂಟಿಗೆ DBT ಮೂಲಕ ಬರೋದಕ್ಕೂ ಇದು ಹೆಲ್ಪ್ ಮಾಡುತ್ತೆ.

ಕರ್ನಾಟಕದ FRUITS ಮಾದರಿ ಹಾಗೂ ಅನರ್ಹ ಖಾತೆಗಳ ತಡೆ

ನಮ್ಮ ಕರ್ನಾಟಕದ FRUITS (ಫಾರ್ಮರ್ ರಿಜಿಸ್ಟ್ರೇಷನ್ ಅಂಡ್ ಯೂನಿಫೈಡ್ ಬೆನಿಫಿಷಿಯರಿ ಇನ್ಫಾರ್ಮೇಷನ್ ಸಿಸ್ಟಮ್) ಐಡಿ ಮಾದರಿ ಇಡೀ ದೇಶಕ್ಕೆ ಒಂದು ಆದರ್ಶವಾಗಿದೆ.

ಈ ಡಿಜಿಟಲ್ ತಪಾಸಣೆಯಿಂದಾಗಿ ರಾಜ್ಯದಲ್ಲಿ ಈಗಾಗಲೇ ಲಕ್ಷಾಂತರ ಅನರ್ಹ ಖಾತೆಗಳನ್ನು ಬಂದ್ ಮಾಡಲಾಗಿದೆ.

ಕರ್ನಾಟಕದಲ್ಲೇ 52 ಲಕ್ಷದಿಂದ 41 ಲಕ್ಷಕ್ಕೆ ರೈತರ ಸಂಖ್ಯೆ ಇಳಿದಿದೆ, ಅಂದರೆ ಸುಮಾರು 11 ಲಕ್ಷಕ್ಕೂ ಹೆಚ್ಚು ಅನರ್ಹ ಖಾತೆಗಳು ಪತ್ತೆಯಾಗಿವೆ. ಇನ್ನು ದೇಶಾದ್ಯಂತ ಬರೋಬ್ಬರಿ 50 ಲಕ್ಷಕ್ಕೂ ಹೆಚ್ಚು ಅನರ್ಹ ಖಾತೆಗಳನ್ನು ವ್ಯವಸ್ಥೆಯಿಂದ ಹೊರಹಾಕಲಾಗಿದ್ದು, ನಿಜವಾದ ರೈತರಿಗೆ ಮಾತ್ರ ಸರ್ಕಾರದ ಸೌಲಭ್ಯ ಸಿಗುವಂತಾಗಿದೆ.

ರೈತ ಐಡಿ ಪಡೆಯಲು ಅರ್ಹತೆಗಳು

  • ಕನಿಷ್ಠ ಒಂದು ಅಥವಾ ಎರಡು ಎಕರೆ ಸ್ವಂತ ಕೃಷಿ ಜಮೀನು ಹೊಂದಿರಬೇಕು.
  • ನಿಮ್ಮ ಹೆಸರಿನಲ್ಲಿ ಆರ್‌ಟಿಸಿ ಅಥವಾ ಪಹಣಿ ದಾಖಲೆಗಳು ಕಡ್ಡಾಯವಾಗಿ ಇರಬೇಕು.
  • ತಿಂಗಳಿಗೆ 10 ಸಾವಿರಕ್ಕಿಂತ ಹೆಚ್ಚು ಪಿಂಚಣಿ (pension) ಬರುತ್ತಿರಬಾರದು.
  • ನೀವು ಇನ್‌ಕಮ್ ಟ್ಯಾಕ್ಸ್ (income tax) ಕಟ್ಟುವವರಾಗಿರಬಾರದು.
  • ಮುಖ್ಯವಾಗಿ, ನಿಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಆಗಿರಬೇಕು ಹಾಗೂ eKYC ಪ್ರಕ್ರಿಯೆ ಮುಗಿದಿರಬೇಕು.

ಯಾರು ರೈತ ಐಡಿ ಪಡೆಯಲು ಅನರ್ಹರು?

  • ಸರ್ಕಾರಿ ನೌಕರರು ಮತ್ತು ನಿವೃತ್ತ ಸರ್ಕಾರಿ ನೌಕರರಿಗೆ ಇದು ಅನ್ವಯಿಸುವುದಿಲ್ಲ.
  • ಜಿಎಸ್‌ಟಿ (GST) ಪಾವತಿಸುವವರು ಈ ಯೋಜನೆಯ ಲಾಭ ಪಡೆಯಲು ಅರ್ಹರಲ್ಲ.
  • ಸಾಂಸ್ಥಿಕ ಭೂಮಿ (institutional land) ಹೊಂದಿರುವವರಿಗೆ ಇದು ಅಪ್ಲೈ ಆಗಲ್ಲ.
  • ಒಂದೇ ಕುಟುಂಬದಲ್ಲಿ ಒಬ್ಬರಿಗಿಂತ ಹೆಚ್ಚು ಸದಸ್ಯರು ಈ ಐಡಿಗಾಗಿ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.

ರೈತ ಐಡಿ ಪಡೆಯಲು ನೋಂದಣಿ ಹೇಗೆ?

  • ಮೊದಲು pmkisan.gov.in ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
  • ಅಲ್ಲಿ ‘New Farmer Registration’ ಅನ್ನೋ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
  • ನಂತರ ನಿಮ್ಮ ಆಧಾರ್ ನಂಬರ್ ಮತ್ತು ಮೊಬೈಲ್ ನಂಬರ್ ಎಂಟರ್ ಮಾಡಿ.
  • ಬರುವ OTP ಹಾಕಿ ವೆರಿಫೈ ಮಾಡಿ.
  • ನಿಮ್ಮ ಜಮೀನಿನ ವಿವರ, RTC (ಪಹಣಿ) ಮತ್ತು ಬ್ಯಾಂಕ್ ಅಕೌಂಟ್ ಡೀಟೇಲ್ಸ್ ಅಪ್ಲೋಡ್ ಮಾಡಿ.
  • ನೀವು ಕೊಟ್ಟ ಮಾಹಿತಿ ಸರಿಯಾಗಿದ್ದರೆ, ಅಧಿಕಾರಿಗಳು ಪರಿಶೀಲಿಸಿ ನಿಮಗೆ ವಿಶಿಷ್ಟ ರೈತ ಐಡಿಯನ್ನು ನೀಡ್ತಾರೆ.

ಕೊನೆಯ ಮಾತು:

ಕೊನೆಯದಾಗಿ, ಮುಂದಿನ ಕಂತಿನ ಸರ್ಕಾರಿ ಹಣ ನಿಮ್ಮ ಅಕೌಂಟಿಗೆ ನೇರವಾಗಿ ಬರಬೇಕೆಂದರೆ ಇವತ್ತೇ ನಿಮ್ಮ eKYC ಮಾಡಿಸಿ. ನಿಮ್ಮ ರೈತ ಐಡಿ ಅಪ್ಡೇಟ್ ಆಗಿದೆಯಾ ಅಂತ ಚೆಕ್ ಮಾಡ್ಕೊಳ್ಳಿ, ಆಗಿಲ್ಲ ಅಂದ್ರೆ ತಕ್ಷಣ ಅಪ್ಡೇಟ್ ಮಾಡಿಸಿ.

ಕರ್ನಾಟಕದ ರೈತರು ಈಗಾಗಲೇ FRUITS ಐಡಿ ಹೊಂದಿದ್ದರೂ, ಒಮ್ಮೆ ಸ್ಟೇಟಸ್ ಪರಿಶೀಲಿಸಿಕೊಳ್ಳೋದು ಒಳ್ಳೆಯದು. ಈ ರೈತ ಐಡಿ ಸರ್ಕಾರಿ ಯೋಜನೆಗಳ ಹಣವನ್ನು ಸುಲಭವಾಗಿ ತಲುಪಿಸಲು ಸಹಾಯ ಮಾಡುತ್ತೆ.

ಈ ಮಾಹಿತಿ ನಿಮಗೆ ಯೂಸ್ ಆಗಿದೆ ಅನ್ಕೊಂಡಿದ್ದೀನಿ..

ಇದನ್ನು ಓದಿ:

2026 ಹೊಸ ತೆರಿಗೆ ನಿಯಮ: ಹಿರಿಯ ನಾಗರಿಕರಿಗೆ ಎಷ್ಟು ತೆರಿಗೆ ವಿನಾಯಿತಿ ಸಿಗುತ್ತದೆ – ಸಂಪೂರ್ಣ ಮಾಹಿತಿ..!

ಮದುವೆಗಾಗಿ ಸಾಲ ಮಾಡಬೇಡಿ – ಮಧ್ಯಮ ವರ್ಗದ ಕುಟುಂಬಗಳು ತಿಳಿದಿರಲೇಬೇಕಾದ ಸತ್ಯ..!

Leave a Comment