2026 ಹೊಸ ತೆರಿಗೆ ನಿಯಮ: ಹಿರಿಯ ನಾಗರಿಕರಿಗೆ ಎಷ್ಟು ತೆರಿಗೆ ವಿನಾಯಿತಿ ಸಿಗುತ್ತದೆ – ಸಂಪೂರ್ಣ ಮಾಹಿತಿ..!

ನಮಸ್ಕಾರ, ನಿಮ್ಮ ಮನೆಯಲ್ಲಿ 60 ವರ್ಷ ಮೇಲ್ಪಟ್ಟವರು ಇದ್ದಾರಾ? ಹಾಗಿದ್ರೆ ಈ ಮಾಹಿತಿ ನಿಮಗೆ ಬಹಳ ಮುಖ್ಯ.

ಕೇಂದ್ರ ಸರ್ಕಾರ 2026ರಿಂದ ಜಾರಿಗೆ ತಂದಿರುವ ಹೊಸ ಇನ್ಕಮ್ ಟ್ಯಾಕ್ಸ್ ರೂಲ್ಸ್ ಹಿರಿಯ ನಾಗರಿಕರ ಮೇಲೆ ನೇರ ಪರಿಣಾಮ ಬೀರಲಿದೆ. ಪಿಂಚಣಿ, ಬ್ಯಾಂಕ್ ಬಡ್ಡಿ, ಬಾಡಿಗೆ ಆದಾಯ ಅಥವಾ ಬೇರೆ ಯಾವುದೇ ಹೂಡಿಕೆಗಳಿಂದ ಆದಾಯ ಪಡೆಯುವವರಿಗೆ ಏನೆಲ್ಲಾ ಬದಲಾವಣೆಗಳಾಗಿವೆ, ಎಷ್ಟು ತೆರಿಗೆ ಕಟ್ಟಬೇಕು ಮತ್ತು ಏನೆಲ್ಲಾ ಪ್ರಯೋಜನಗಳು ಸಿಗುತ್ತವೆ ಅನ್ನೋದನ್ನ ವಿವರವಾಗಿ ನೋಡೋಣ.

ನಿಮ್ಮ ಆರ್ಥಿಕ ಯೋಜನೆಗೆ ಇದು ಹೆಲ್ಪ್ ಆಗಬಹುದು.

ಹಿರಿಯ ನಾಗರಿಕರು ಅಂದ್ರೆ ಯಾರು?

ಹಿರಿಯ ನಾಗರಿಕರು ಅಂದ್ರೆ ಯಾರು ಅನ್ನೋ ಬಗ್ಗೆ ಕನ್ಫ್ಯೂಷನ್ ಇದೆ. ತೆರಿಗೆ ಇಲಾಖೆ ಪ್ರಕಾರ, 60-79 ವರ್ಷದೊಳಗಿನವರು ಹಿರಿಯ ನಾಗರಿಕರು.

80 ವರ್ಷ ಮೇಲ್ಪಟ್ಟವರು ಅತಿ ಹಿರಿಯ ನಾಗರಿಕರು.

ಈ ವಿಂಗಡಣೆ ತುಂಬಾ ಮುಖ್ಯ, ಯಾಕಂದ್ರೆ ತೆರಿಗೆ ವಿನಾಯಿತಿಗಳು ಮತ್ತು ಸಿಗುವ ಸೌಲಭ್ಯಗಳು ಅವರ ವಯಸ್ಸಿನ ಮೇಲೆ ನಿರ್ಧಾರವಾಗುತ್ತವೆ. ಈ ವ್ಯತ್ಯಾಸವನ್ನ ಅರ್ಥ ಮಾಡಿಕೊಂಡ್ರೆ ಉತ್ತಮ.

ಇಂತಹ ನಿಯಮಗಳು ನಿಮ್ಮ ಹಿರಿಯರಿಗೆ ತಿಳಿದಿರೋದು ಬಹಳ ಅಗತ್ಯ.

2026ರ ಹೊಸ ತೆರಿಗೆ ನಿಯಮಗಳು: ಪ್ರಮುಖ ಬದಲಾವಣೆಗಳು

2026ರಿಂದ ಜಾರಿಗೆ ಬಂದಿರುವ ಹೊಸ ತೆರಿಗೆ ಪದ್ಧತಿಯಲ್ಲಿ ಹಿರಿಯ ನಾಗರಿಕರಿಗೆ ಪ್ರಮುಖ ಬದಲಾವಣೆಗಳಿವೆ. ಹಿಂದೆ, ಹಿರಿಯ ನಾಗರಿಕರಿಗೆ 3 ಲಕ್ಷ, ಅತಿ ಹಿರಿಯರಿಗೆ 5 ಲಕ್ಷದವರೆಗೆ ತೆರಿಗೆ ವಿನಾಯಿತಿ ಇತ್ತು.

ಆದರೆ ಹೊಸ ನಿಯಮದಂತೆ, 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಒಟ್ಟಾಗಿ 4 ಲಕ್ಷದವರೆಗೆ ಆದಾಯದ ಮೇಲೆ ತೆರಿಗೆ ಇರೋದಿಲ್ಲ. ಇದು ಅನೇಕ ಹಿರಿಯರಿಗೆ ದೊಡ್ಡ ರಿಲೀಫ್ ಆಗಲಿದೆ. ತೆರಿಗೆ ಪಾವತಿ ಬಗ್ಗೆ ಯಾವುದೇ ಗೊಂದಲ ಬೇಡ.

ತೆರಿಗೆ ವಿನಾಯಿತಿ ಲೆಕ್ಕಾಚಾರ: 4 ಲಕ್ಷ vs 12 ಲಕ್ಷ?

“12 ಲಕ್ಷದವರೆಗೆ ತೆರಿಗೆ ಕಟ್ಟಬೇಕಾಗಿಲ್ಲ” ಎನ್ನುವುದು ಒಂದು ಜನಪ್ರಿಯ ಮಾಹಿತಿ.

ಇದು ನಿಜ, ಆದರೆ ಹೊಸ ಸ್ಲ್ಯಾಬ್ ಪ್ರಕಾರ 4 ಲಕ್ಷದವರೆಗೆ ಮಾತ್ರ 0% ತೆರಿಗೆ.

12 ಲಕ್ಷ ಆದಾಯ ಇದ್ದರೂ ತೆರಿಗೆ ಇರೋದಿಲ್ಲ, ಯಾಕಂದ್ರೆ 75,000 ರೂ. ಸ್ಟ್ಯಾಂಡರ್ಡ್ ಡಿಡಕ್ಷನ್ ಸಿಗುತ್ತೆ.

ಅಂದರೆ, 12.75 ಲಕ್ಷದವರೆಗೆ ಯಾವುದೇ ತೆರಿಗೆ ಇಲ್ಲ. ಆದ್ರೆ, 13 ಲಕ್ಷ ಆದಾಯ ದಾಟಿದರೆ, 4 ಲಕ್ಷದ ಸ್ಲ್ಯಾಬ್ ಇಂದಲೇ ತೆರಿಗೆ ಶುರುವಾಗಲಿದೆ. ಈ ಲೆಕ್ಕಾಚಾರವನ್ನ ಅರ್ಥಮಾಡಿಕೊಂಡರೆ ಸುಲಭವಾಗುತ್ತೆ.

ಆರೋಗ್ಯ ಮತ್ತು ಹಣಕಾಸು ಸುರಕ್ಷತೆ: ಡಿಟ್ಟೋ ಹೆಲ್ತ್ ಇನ್ಶೂರೆನ್ಸ್ ಸಲಹೆ

60 ವರ್ಷ ದಾಟಿದ ಮೇಲೆ ಆರೋಗ್ಯ ಸಮಸ್ಯೆಗಳು ಸಾಮಾನ್ಯ. ಆಸ್ಪತ್ರೆ ಖರ್ಚಿಗೆ ಉಳಿಸಿದ ದುಡ್ಡು ಹೋಗಬಾರದು ಅಂದ್ರೆ ಉತ್ತಮ ಹೆಲ್ತ್ ಇನ್ಶೂರೆನ್ಸ್ ಅಗತ್ಯ.

ಆದರೆ ಯಾವ ಇನ್ಶೂರೆನ್ಸ್ ಬೆಸ್ಟ್, ಕ್ಲೇಮ್ ರೇಶಿಯೋ ನೋಡೋದು ಹೇಗೆ ಅಂತ ಕನ್ಫ್ಯೂಷನ್ ಇರಬಹುದು.

Ditto ಪ್ಲಾಟ್‌ಫಾರ್ಮ್ ನಿಮಗೆ ಇಲ್ಲಿ ಸಹಾಯ ಮಾಡುತ್ತದೆ. ಅವರು ನಿಮ್ಮ ಅಗತ್ಯಗಳಿಗೆ ತಕ್ಕಂತೆ ಸೂಕ್ತ ಹೆಲ್ತ್ ಇನ್ಶೂರೆನ್ಸ್ ಆಯ್ಕೆ ಮಾಡಲು ಉಚಿತ ಅಡ್ವೈಸ್ ಕೊಡುತ್ತಾರೆ.

ಜರೋಧಾ ಬೆಂಬಲಿತ ಸಂಸ್ಥೆಯಾಗಿದ್ದು, ಇವರ ಸಲಹೆ ಪಡೆಯಬಹುದು.

ಯಾವಾಗ IT ರಿಟರ್ನ್ ಫೈಲ್ ಮಾಡ್ಬೇಕು?

  • ಆದಾಯ ಮಿತಿ: ನಿಮ್ಮ ಆದಾಯ 4 ಲಕ್ಷಕ್ಕಿಂತ ಕಡಿಮೆ ಇದ್ದರೂ ಸಹ ಕೆಲವು ವಿಶೇಷ ಸಂದರ್ಭಗಳಲ್ಲಿ ಐಟಿಆರ್ ಫೈಲ್ ಮಾಡುವುದು ಅಗತ್ಯವಿರುತ್ತದೆ.
  • ದೊಡ್ಡ ಮೊತ್ತದ ಠೇವಣಿ: ನಿಮ್ಮ ಸೇವಿಂಗ್ಸ್ ಅಥವಾ ಕರೆಂಟ್ ಅಕೌಂಟ್‌ನಲ್ಲಿ ದೊಡ್ಡ ಮೊತ್ತದ ಹಣವನ್ನು ಡೆಪಾಸಿಟ್ ಮಾಡಿದ್ದರೆ ಐಟಿಆರ್ ಸಲ್ಲಿಸಬೇಕು.
  • ವಿದೇಶಿ ಪ್ರವಾಸ: ವಿದೇಶ ಪ್ರವಾಸಕ್ಕಾಗಿ ಹೆಚ್ಚಿನ ಮೊತ್ತದ ಹಣವನ್ನು ಖರ್ಚು ಮಾಡಿದ್ದಲ್ಲಿ ತೆರಿಗೆ ರಿಟರ್ನ್ಸ್ ಸಲ್ಲಿಸುವುದು ಕಡ್ಡಾಯ.
  • ವಿದೇಶಿ ಆಸ್ತಿ: ನೀವು ವಿದೇಶದಲ್ಲಿ ಯಾವುದೇ ರೀತಿಯ ಆಸ್ತಿಯನ್ನು ಹೊಂದಿದ್ದರೆ ಆದಾಯ ಕಡಿಮೆ ಇದ್ದರೂ ಐಟಿಆರ್ ಫೈಲ್ ಮಾಡಬೇಕು.
  • ಜೀವನಶೈಲಿ ಆಧಾರಿತ ತಪಾಸಣೆ: ಸರ್ಕಾರವು ಕೇವಲ ಆದಾಯವನ್ನಷ್ಟೇ ಅಲ್ಲದೆ, ವ್ಯಕ್ತಿಯ ಜೀವನಶೈಲಿ ಮತ್ತು ಆಸ್ತಿಪಾಸ್ತಿಗಳನ್ನೂ ಸಹ ಗಮನಿಸುತ್ತದೆ.

ಮುಂಗಡ ತೆರಿಗೆ ಮತ್ತು 75+ ವಯಸ್ಸಿನವರಿಗೆ ವಿಶೇಷ ನಿಯಮ

60 ವರ್ಷ ಮೇಲ್ಪಟ್ಟವರು ಮುಂಗಡ ತೆರಿಗೆ (Advance Tax) ಕಟ್ಟಬೇಕಾ? ಪಿಂಚಣಿ ಅಥವಾ ಬ್ಯಾಂಕ್ ಬಡ್ಡಿಯಿಂದ ಆದಾಯವಿದ್ದರೆ ಕಟ್ಟಬೇಕಾಗಿಲ್ಲ. ಬಿಸಿನೆಸ್ ಇನ್ಕಮ್ ಇದ್ದರೆ ಮಾತ್ರ ಮುಂಗಡ ತೆರಿಗೆ ಕಡ್ಡಾಯ.

75 ವರ್ಷ ಮೇಲ್ಪಟ್ಟವರಿಗೆ ವಿಶೇಷ ನಿಯಮವಿದೆ: ಆದಾಯ ಕೇವಲ ಪಿಂಚಣಿ ಮತ್ತು ಬ್ಯಾಂಕ್ ಬಡ್ಡಿಯಿಂದ ಬಂದಿದ್ದರೆ, ಬ್ಯಾಂಕ್ ಆ ತೆರಿಗೆಯನ್ನ ಮೂಲದಲ್ಲೇ ಕಡಿತಗೊಳಿಸಿ ಪಾವತಿಸುತ್ತದೆ.

ಆಗ ಐಟಿಆರ್ ಫೈಲ್ ಮಾಡುವ ಅಗತ್ಯವಿಲ್ಲ. ಈ ರೂಲ್ಸ್ ನಿಮಗೆ ಅನುಕೂಲ ಮಾಡಿಕೊಡುತ್ತೆ.

TDS ತಪ್ಪಿಸಲು ಹೊಸ ಫಾರ್ಮ್: 121

ಎಫ್‌ಡಿ (FD) ಅಥವಾ ಪೋಸ್ಟ್ ಆಫೀಸ್ ಇನ್ವೆಸ್ಟ್‌ಮೆಂಟ್ ಮೇಲೆ ಟಿಡಿಎಸ್ (TDS) ಆಗಬಾರದು ಅಂದ್ರೆ, ಈಗ ಹೊಸ ಫಾರ್ಮ್ 121 ಅನ್ನ ಸಲ್ಲಿಸಬೇಕು. ಹಿಂದೆ 60 ವರ್ಷದ ಕೆಳಗಿನವರು 15G, ಮೇಲ್ಪಟ್ಟವರು 15H ಸಲ್ಲಿಸುತ್ತಿದ್ದರು.

ಈಗ ಈ ಎರಡರ ಬದಲಿಗೆ ಫಾರ್ಮ್ 121 ಜಾರಿಗೆ ಬಂದಿದೆ. ಇದು ನಿಮ್ಮ ಆದಾಯ ತೆರಿಗೆ ಮಿತಿಯನ್ನು ದಾಟಿಲ್ಲ ಎಂದು ಬ್ಯಾಂಕ್‌ಗೆ ನೀಡುವ ಡಿಕ್ಲರೇಷನ್. ಸರಿಯಾಗಿ ಫಿಲ್ ಮಾಡಿ ಸಲ್ಲಿಸಿ, ಟಿಡಿಎಸ್ ತಪ್ಪಿಸಿ, ನಿಮ್ಮ ಹಣ ಉಳಿಸಿಕೊಳ್ಳಿ.

ಪ್ರಮುಖ ತೆರಿಗೆ ಸ್ಲ್ಯಾಬ್‌ಗಳು ಮತ್ತು ಬದಲಾದ ನಿಯಮಗಳು

  • ತೆರಿಗೆ ದರಗಳು (Tax Slabs): 4 ಲಕ್ಷದವರೆಗಿನ ಆದಾಯಕ್ಕೆ 0% ತೆರಿಗೆ ಇರುತ್ತದೆ.
  • ಮಧ್ಯಮ ಆದಾಯ: 4 ರಿಂದ 8 ಲಕ್ಷಕ್ಕೆ 5% ಮತ್ತು 8 ರಿಂದ 12 ಲಕ್ಷಕ್ಕೆ 10% ತೆರಿಗೆ ವಿಧಿಸಲಾಗುತ್ತದೆ.
  • ಉನ್ನತ ಆದಾಯ: 12 ರಿಂದ 16 ಲಕ್ಷಕ್ಕೆ 15% ಮತ್ತು 16 ಲಕ್ಷಕ್ಕಿಂತ ಹೆಚ್ಚಿನ ಆದಾಯಕ್ಕೆ 20% ತೆರಿಗೆ ಅನ್ವಯಿಸುತ್ತದೆ.
  • ತೆರಿಗೆ ಏರಿಕೆ: ಆದಾಯ ಹೆಚ್ಚಾದಂತೆ ಅದಕ್ಕೆ ತಕ್ಕಂತೆ ತೆರಿಗೆಯ ಪ್ರಮಾಣವೂ ಸಹ ಹೆಚ್ಚುತ್ತಾ ಹೋಗುತ್ತದೆ.
  • ಪರಿಭಾಷೆಯ ಬದಲಾವಣೆ: ಈ ಹಿಂದೆ ಬಳಸುತ್ತಿದ್ದ ‘Assessment Year’ ಬದಲಿಗೆ ಈಗ ‘Tax Year’ (ಉದಾ: 2026-27 Tax Year) ಎಂದು ಸರಳೀಕರಿಸಲಾಗಿದೆ.

ಆಸ್ತಿ ಮತ್ತು ಬಾಡಿಗೆ ಆದಾಯದ ಮೇಲಿನ ನಿಯಮಗಳು

ಹೊಸ ನಿಯಮದ ಪ್ರಕಾರ, ಹಿರಿಯ ನಾಗರಿಕರು ಎರಡು ಸ್ವಂತ ಮನೆಗಳನ್ನು (Self-Occupied Houses) ತೆರಿಗೆ ವಿನಾಯಿತಿಗೆ ಕ್ಲೇಮ್ ಮಾಡಬಹುದು. ಹಿಂದೆ ಇದು ಕೇವಲ ಒಂದು ಮನೆಗೆ ಸೀಮಿತವಾಗಿತ್ತು.

ಇದು ನಿವೃತ್ತರಾದವರಿಗೆ ಅನುಕೂಲ ನೀಡುತ್ತದೆ. ಬಾಡಿಗೆ ಆದಾಯದ (Rental Income) ವಿಷಯದಲ್ಲಿ, ತಿಂಗಳಿಗೆ 50,000 ರೂಪಾಯಿವರೆಗೆ ಬಾಡಿಗೆ ಬಂದರೆ, ಅದರ ಮೇಲೆ ಯಾವುದೇ ಟಿಡಿಎಸ್ (TDS) ಕಡಿತ ಆಗುವುದಿಲ್ಲ.

ಇದು ಹಿರಿಯ ನಾಗರಿಕರಿಗೆ ಒಂದು ಉತ್ತಮ ಪ್ರಯೋಜನ. ಈ ಮಾಹಿತಿ ನಿಮಗೆ ಖಂಡಿತ ಹೆಲ್ಪ್ ಆಗುತ್ತೆ.

ITR ಸಲ್ಲಿಸುವ ಕೊನೆಯ ದಿನಾಂಕಗಳು

ತೆರಿಗೆ ಪಾವತಿಯ ಜೊತೆಗೆ, ನಿಗದಿತ ಸಮಯದೊಳಗೆ ಐಟಿಆರ್ (Income Tax Returns) ಸಲ್ಲಿಸುವುದು ಅಷ್ಟೇ ಮುಖ್ಯ. ಇಲ್ಲದಿದ್ದರೆ ಪೆನಾಲ್ಟಿ ಬೀಳಬಹುದು:

ವಿವರ (Category)ಗಡುವು (Deadline)
ಸಾಮಾನ್ಯ ವ್ಯಕ್ತಿಗಳುಜುಲೈ 31
ವ್ಯಾಪಾರ ಸಂಸ್ಥೆಗಳುಆಗಸ್ಟ್ 31
ಆಡಿಟ್ ಕೇಸ್‌ಗಳುಅಕ್ಟೋಬರ್ 31

ಈ ಡೆಡ್‌ಲೈನ್‌ಗಳನ್ನು ಸರಿಯಾಗಿ ನೆನಪಿನಲ್ಲಿಟ್ಟುಕೊಳ್ಳಿ ಮತ್ತು ಅದಕ್ಕೂ ಮುಂಚೆಯೇ ನಿಮ್ಮ ಐಟಿಆರ್ ಅನ್ನು ಫೈಲ್ ಮಾಡಿ ಯಾವುದೇ ಕೊನೆಯ ನಿಮಿಷದ ಗಡಿಬಿಡಿಯನ್ನ ತಪ್ಪಿಸಿಕೊಳ್ಳಿ.

ಕೊನೆಯ ಮಾತು:

ಹಿರಿಯ ನಾಗರಿಕರಿಗೆ ತೆರಿಗೆ ನಿಯಮಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಇವುಗಳಲ್ಲಿ ಕೆಲವು ಅವರಿಗೆ ದೊಡ್ಡ ರಿಲೀಫ್ ನೀಡಿದರೆ, ಮತ್ತೆ ಕೆಲವು ಹೊಸ ನಿಯಮಗಳ ಬಗ್ಗೆ ತಿಳುವಳಿಕೆ ಮುಖ್ಯ.

ಈ ಮಾಹಿತಿಯನ್ನ ನಿಮ್ಮ ಮನೆಯಲ್ಲಿರುವ ಹಿರಿಯರಿಗೆ ಅಥವಾ ಸಂಬಂಧಿಕರಿಗೆ ಶೇರ್ ಮಾಡಿ.

ಇದರಿಂದ ಅವರಿಗೆ ಹಣ ಉಳಿಸಲು, ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಸಹಾಯವಾಗುತ್ತದೆ.

ಇದ್ದನು ಓದಿ:

ದಿನಕ್ಕೆ ಕೇವಲ ₹7 ಹೂಡಿ ತಿಂಗಳಿಗೆ ₹5,000 ಪಿಂಚಣಿ ಪಡೆಯಿರಿ – ಅಟಲ್ ಪೆನ್ಷನ್ ಯೋಜನೆ ಸಂಪೂರ್ಣ ಮಾಹಿತಿ..!

ಗೃಹಲಕ್ಷ್ಮಿ 29ನೇ ಕಂತು: ಈ ಜಿಲ್ಲೆಗಳಿಗೆ ಹಣ ಬಿಡುಗಡೆ – ನಿಮ್ಮ ಜಿಲ್ಲೆ ಇದೆಯೇ ಚೆಕ್ ಮಾಡಿ..!

ಪ್ಯಾನ್ ಕಾರ್ಡ್ ಹೊಸ ರೂಲ್ಸ್ 2026: ಏಪ್ರಿಲ್ 1 ರಿಂದ ಜಾರಿ! ಏನೆಲ್ಲಾ ಬದಲಾವಣೆ?

Leave a Comment