US ಸ್ಟಾಕ್‌ಗಳಲ್ಲಿ ಹೂಡಿಕೆ: ಭಾರತದಿಂದಲೇ ಲಾಭ ಗಳಿಸಿ!

ನಿಮಗೆ ಗೊತ್ತಾ, ಕಳೆದ ಮೂರು ವರ್ಷಗಳಲ್ಲಿ ಅಮೆರಿಕದ US ಸ್ಟಾಕ್ ಮಾರುಕಟ್ಟೆ ಭಾರತಕ್ಕಿಂತ ದುಪ್ಪಟ್ಟು ರಿಟರ್ನ್ಸ್ ಕೊಟ್ಟಿದೆ! ಅಂದರೆ, ಒಂದು ಲಕ್ಷ ಹೂಡಿದ್ದರೆ ಅದು 1.75 ಲಕ್ಷ ಆಗುತ್ತಿತ್ತು.

ಇವತ್ತು ವಿಶ್ವದ ದೊಡ್ಡ ದೊಡ್ಡ ಟೆಕ್ ಕಂಪನಿಗಳು, AI ಕ್ರಾಂತಿಯ ನಾಯಕರೆಲ್ಲ ಇರೋದು ಅಮೆರಿಕಾದಲ್ಲೇ.

ಪ್ರತಿದಿನ ನಾವು ಅವರ ಪ್ರಾಡಕ್ಟ್‌ಗಳನ್ನು ಬಳಸ್ತೀವಿ.

ಆದರೆ, ಅವರ ಬೆಳವಣಿಗೆಯ ಲಾಭ ನಮಗೆ ಸಿಗ್ತಿಲ್ಲ.

ಗ್ರಾಹಕರಾಗಿರೋದು ಬಿಟ್ಟು, ಮಾಲೀಕರಾಗೋದು ಹೇಗೆ ಅನ್ನೋದು ಈಗಿನ ಪ್ರಶ್ನೆ. ಭಾರತದಿಂದಲೇ ಯುಎಸ್ ಸ್ಟಾಕ್‌ಗಳಲ್ಲಿ ಹೂಡಿಕೆ ಮಾಡೋದು ಎಷ್ಟು ಸುಲಭ, ಯಾಕೆ ಇದು ಮುಖ್ಯ ಅಂತ ಇವತ್ತು ನೋಡೋಣ.

ಏನಿದು ಅಮೆರಿಕನ್ ಮಾರುಕಟ್ಟೆಯ ಅದ್ಭುತ ಬೆಳವಣಿಗೆ

ಕಳೆದ ಮೂರು ವರ್ಷಗಳ ಡೇಟಾ ನೋಡಿದ್ರೆ, ಅಮೆರಿಕನ್ ಮಾರುಕಟ್ಟೆ ಸುಮಾರು 75.4% ರಿಟರ್ನ್ಸ್ ಕೊಟ್ಟಿದೆ.

ಅದೇ ಸಮಯದಲ್ಲಿ, ನಮ್ಮ ಭಾರತೀಯ ಮಾರುಕಟ್ಟೆ ಸುಮಾರು 38.3% ರಿಟರ್ನ್ಸ್ ನೀಡಿದೆ.

ಇದರ ಅರ್ಥ ಸ್ಪಷ್ಟ, ಮೂರು ವರ್ಷಗಳ ಹಿಂದೆ ನೀವು ಒಂದು ಲಕ್ಷ ರೂಪಾಯಿ ಅಮೆರಿಕನ್ ಮಾರ್ಕೆಟ್‌ನಲ್ಲಿ ಹೂಡಿದ್ದರೆ, ಅದು 1.75 ಲಕ್ಷ ಆಗಿರುತ್ತಿತ್ತು.

ಅದೇ ಭಾರತದಲ್ಲಿ ಹೂಡಿದ್ದರೆ, ಅದು ಕೇವಲ 1.38 ಲಕ್ಷ ರೂಪಾಯಿ ಆಗಿರುತ್ತಿತ್ತು.

ಈ ವ್ಯತ್ಯಾಸ ನಮಗೆ ಬಹಳ ಮುಖ್ಯ.

ಜಾಗತಿಕ ಟೆಕ್ ದಿಗ್ಗಜರು ಮತ್ತು ಯುಎಸ್ ಮಾರುಕಟ್ಟೆ

ಇವತ್ತು ವಿಶ್ವದ ಬಹುತೇಕ ದೊಡ್ಡ ಟೆಕ್ ಕಂಪನಿಗಳು, ಎಐ ಕ್ರಾಂತಿಯ ಮುಂದಾಳುಗಳು ಅಮೆರಿಕದಲ್ಲೇ ನೆಲೆಯೂರಿವೆ.

  • NVIDIA
  • Google
  • Amazon
  • Meta
  • Netflix
  • Apple
  • Microsoft

ನಂತಹ ಕಂಪನಿಗಳು ಜಾಗತಿಕವಾಗಿ ಭವಿಷ್ಯವನ್ನು ರೂಪಿಸುತ್ತಿವೆ.

ನಾವು ಪ್ರತಿದಿನ ಅವರ ಪ್ರಾಡಕ್ಟ್‌ಗಳನ್ನು ಬಳಸ್ತೇವೆ – ಐಫೋನ್, ನೆಟ್‌ಫ್ಲಿಕ್ಸ್, ಅಮೆಜಾನ್, ಇನ್‌ಸ್ಟಾಗ್ರಾಮ್… ಇವೆಲ್ಲವೂ ನಮ್ಮ ಜೀವನದ ಭಾಗ.

ಈ ಕಂಪನಿಗಳು ನಮ್ಮಿಂದ ಕೋಟಿಗಟ್ಟಲೆ ಹಣ ಗಳಿಸ್ತಾ ಇವೆ, ಆದರೆ ನಾವು ಅವರ ಬೆಳವಣಿಗೆಯ ಭಾಗವಾಗಿದ್ದೇವೆಯೇ?

ಗ್ರಾಹಕರಿಂದ ಮಾಲೀಕತ್ವದ ಕಡೆಗೆ ಹೇಗೆ?

ಸಾಮಾನ್ಯವಾಗಿ ನಾವು ಈ ಕಂಪನಿಗಳ ಕೇವಲ ಗ್ರಾಹಕರಾಗಿ, ಕನ್ಸ್ಯೂಮರ್ಸ್ ಆಗಿ ಭಾಗವಹಿಸುತ್ತೇವೆ. ಶೇರ್‌ಹೋಲ್ಡರ್‌ಗಳಾಗಿ ಅವರ ಬೆಳವಣಿಗೆಯಿಂದ ಲಾಭ ಗಳಿಸೋದು ನಮಗೆ ಸಾಧ್ಯವಾಗ್ತಿಲ್ಲ.

ಇವರ ಪ್ರಾಡಕ್ಟ್‌ಗಳು ಬೆಳೆಯೋದಕ್ಕೆ ನಾವು ಸಹಾಯ ಮಾಡ್ತೇವೆ, ಆದರೆ ಆ ಬೆಳವಣಿಗೆಯ ಭಾಗಶಃ ಮಾಲೀಕರಾಗೋದಕ್ಕೆ ಮನಸ್ಸು ಮಾಡ್ತಿಲ್ಲ.

ಈ ಮೈಂಡ್‌ಸೆಟ್ ಈಗ ಬದಲಾಗಬೇಕು. ಕೇವಲ ಗ್ರಾಹಕರಾಗಿರೋದನ್ನ ನಿಲ್ಲಿಸಿ, ಈ ಕಂಪನಿಗಳ ಮಾಲೀಕರಾಗಿ, ಅವರ ಯಶಸ್ಸಿನ ಒಂದು ಭಾಗವಾಗಿ ನೀವು ಬೆಳೆಯಬೇಕು.

ಡೈವರ್ಸಿಫಿಕೇಶನ್‌ ಮಹತ್ವ: ಭಾರತ vs US

ಭಾರತದ ಮಾರುಕಟ್ಟೆ ಇವತ್ತಿಗೂ ದೀರ್ಘಾವಧಿಯ ಸಂಪತ್ತು ಸೃಷ್ಟಿಗೆ ಅತ್ಯಂತ ಶಕ್ತಿಶಾಲಿಯಾಗಿದೆ.

ಭಾರತ ದೊಡ್ಡ ಬೆಳವಣಿಗೆಯ ಸಾಮರ್ಥ್ಯ ಹೊಂದಿದೆ. ಆದರೆ, ಬುದ್ಧಿವಂತ ಹೂಡಿಕೆ ಎಂದರೆ ನಿಮ್ಮ ಎಲ್ಲಾ ಹಣವನ್ನು ಒಂದೇ ದೇಶದಲ್ಲಿ ಇಡೋದಲ್ಲ. ಜಾಗತಿಕ ಡೈವರ್ಸಿಫಿಕೇಶನ್ ನಿಮ್ಮ ರಿಸ್ಕ್ ಅನ್ನು ಕಡಿಮೆ ಮಾಡುತ್ತೆ. ಒಂದು ಮಾರುಕಟ್ಟೆ ಕುಸಿದರೆ, ಇನ್ನೊಂದು ಮಾರುಕಟ್ಟೆ ನಿಮ್ಮ ಪೋರ್ಟ್‌ಫೋಲಿಯೋವನ್ನು ಬ್ಯಾಲೆನ್ಸ್ ಮಾಡುತ್ತೆ. ಬುದ್ಧಿವಂತ ಹೂಡಿಕೆದಾರರು ಯಾವತ್ತೂ ಹೀಗೆ ಯೋಚಿಸುತ್ತಾರೆ.

ಡಾಲರ್‌ನ ಹಿಡನ್ ಕರೆನ್ಸಿ ಅಡ್ವಾಂಟೇಜ್ ಏನಿದು?

ಹೆಚ್ಚಿನ ಜನರು ಸ್ಟಾಕ್ ರಿಟರ್ನ್ಸ್ ಬಗ್ಗೆ ಮಾತ್ರ ಯೋಚಿಸುತ್ತಾರೆ, ಆದರೆ ಯುಎಸ್ ಹೂಡಿಕೆಯಲ್ಲಿ ಇನ್ನೊಂದು ಲಾಭ ಇದೆ – ಅದು ಡಾಲರ್‌ನ ಶಕ್ತಿ.

ಒಂದು ಡಾಲರ್‌ಗೆ 85 ರೂಪಾಯಿ ಇರುವಾಗ ನೀವು 1 ಲಕ್ಷ ಹೂಡಿಕೆ ಮಾಡಿ, ಅದು 10% ಬೆಳೆಯಿತು ಅಂದುಕೊಳ್ಳಿ.

ಅದೇ ಸಮಯದಲ್ಲಿ ರೂಪಾಯಿ ಮೌಲ್ಯ 85 ರಿಂದ 95ಕ್ಕೆ ಕುಸಿಯಿತು ಎಂದಾದರೆ, ನಿಮ್ಮ ಒಟ್ಟು ರಿಟರ್ನ್ಸ್ ಸುಮಾರು 23% ಆಗುತ್ತೆ! ಅಂದರೆ, ಸ್ಟಾಕ್ ಕೇವಲ 10% ಬೆಳೆದರೂ, ರೂಪಾಯಿ ಕುಸಿತದ ಲಾಭವೂ ನಿಮಗೆ ಸಿಗುತ್ತೆ.

ಭಾರತದಿಂದ US ಸ್ಟಾಕ್‌ಗಳಲ್ಲಿ ಹೂಡಿಕೆ ಹೇಗೆ?

ಭಾರತದಿಂದಲೇ ಅಮೆರಿಕನ್ ಸ್ಟಾಕ್‌ಗಳಲ್ಲಿ ಹೂಡಿಕೆ ಮಾಡೋದು ಹೇಗೆ? ಇದಕ್ಕಾಗಿ ಮೂರು ಮುಖ್ಯ ಮಾರ್ಗಗಳಿವೆ. ಮೊದಲನೆಯದಾಗಿ, ಯುಎಸ್ ಕಂಪನಿಗಳಲ್ಲಿ ಹೂಡಿಕೆ ಮಾಡುವ ಭಾರತೀಯ ಮ್ಯೂಚುವಲ್ ಫಂಡ್‌ಗಳ ಮೂಲಕ.

ಎರಡನೆಯದಾಗಿ, ನೇರವಾಗಿ ಯುಎಸ್ ಬ್ರೋಕರ್ ಜೊತೆ ಅಕೌಂಟ್ ಓಪನ್ ಮಾಡೋದು.

ಮೂರನೆಯದು, ಗ್ಲೋಬಲ್ ಇನ್ವೆಸ್ಟ್‌ಮೆಂಟ್ ಆಪ್‌ಗಳನ್ನು ಬಳಸುವುದು. ಇವುಗಳಲ್ಲಿ ಯಾವುದು ಸುಲಭ, ಯಾವುದು ಉತ್ತಮ ಅನ್ನೋದನ್ನ ಈಗ ನೋಡೋಣ.

ಮ್ಯೂಚುವಲ್ ಫಂಡ್ ಮತ್ತು ನೇರ ಬ್ರೋಕರ್‌ಗಳ ಸವಾಲುಗಳು

ಮ್ಯೂಚುವಲ್ ಫಂಡ್‌ಗಳು ಹೂಡಿಕೆಗೆ ಸರಳವಾದ ಮಾರ್ಗ ಹೌದು. ಆದರೆ, ಯಾವ ಸ್ಟಾಕ್‌ಗಳನ್ನು ಖರೀದಿಸಬೇಕು ಅನ್ನೋ ನಿಯಂತ್ರಣ ನಿಮ್ಮ ಕೈಯಲ್ಲಿ ಇರೋದಿಲ್ಲ. ಫಂಡ್ ಮ್ಯಾನೇಜರ್ ಎಲ್ಲವನ್ನೂ ನಿರ್ಧರಿಸುತ್ತಾರೆ.

ಎರಡನೇ ವಿಧಾನ, ನೇರವಾಗಿ ಯುಎಸ್ ಬ್ರೋಕರ್ ಜೊತೆ ಅಕೌಂಟ್ ಓಪನ್ ಮಾಡೋದು.

ಇದು ಸಂಪೂರ್ಣ ಪ್ರವೇಶ ನೀಡಿದರೂ, ಹೆಚ್ಚಿನ ಕನಿಷ್ಠ ಹೂಡಿಕೆ ಬೇಕಾಗುತ್ತೆ. ಆರಂಭಿಕರಿಗೆ ಈ ಪ್ರಕ್ರಿಯೆ ಸ್ವಲ್ಪ ಕ್ಲಿಷ್ಟಕರ ಅನ್ನಿಸಬಹುದು. ಹಾಗಾಗಿ, ಇನ್ನೊಂದು ಸರಳ ಮಾರ್ಗ ಇದೆ.

ಜಾಗತಿಕ ಹೂಡಿಕೆ ಆ್ಯಪ್‌ಗಳ ಮೂಲಕ ಸುಲಭ ಮಾರ್ಗ

ಭಾರತೀಯ ಹೂಡಿಕೆದಾರರಿಗೆ ಈಗ ಅತ್ಯಂತ ಬುದ್ಧಿವಂತ ಮತ್ತು ಪ್ರಾಯೋಗಿಕ ಮಾರ್ಗ ಎಂದರೆ ಗ್ಲೋಬಲ್ ಇನ್ವೆಸ್ಟ್‌ಮೆಂಟ್ ಆ್ಯಪ್‌ಗಳು. INDmoney ನಂತಹ ಆ್ಯಪ್‌ಗಳು ಭಾರತದಿಂದಲೇ ನೇರವಾಗಿ ಯುಎಸ್ ಸ್ಟಾಕ್‌ಗಳಲ್ಲಿ ಹೂಡಿಕೆ ಮಾಡೋದಕ್ಕೆ ಅನುಮತಿ ನೀಡುತ್ತವೆ.

ಇದರ ಪ್ರಕ್ರಿಯೆ ತುಂಬಾ ಸುಲಭ ಮತ್ತು ಆರಂಭಿಕರಿಗೂ ಅನುಕೂಲಕರವಾಗಿದೆ. ನೀವು 9000ಕ್ಕೂ ಹೆಚ್ಚು ಯುಎಸ್ ಸ್ಟಾಕ್‌ಗಳು ಮತ್ತು ಇಟಿಎಫ್‌ಗಳಲ್ಲಿ ಹೂಡಿಕೆ ಮಾಡಬಹುದು. ಕೇವಲ 100 ರೂಪಾಯಿಯಿಂದಲೇ Apple, Amazon, Google, Tesla, NVIDIA ಸ್ಟಾಕ್‌ಗಳನ್ನು ಖರೀದಿಸಲು ಫ್ರಾಕ್ಷನಲ್ ಇನ್ವೆಸ್ಟಿಂಗ್ ಅವಕಾಶವಿದೆ. ತಿಂಗಳಿಗೆ 500 ರೂಪಾಯಿಯಿಂದ SIP ಸಹ ಆರಂಭಿಸಬಹುದು.

ಹೂಡಿಕೆಯ ಪ್ರಾಯೋಗಿಕ ಹಂತಗಳು

ಹೂಡಿಕೆ ಮಾಡೋದು ಹೇಗೆ ಅನ್ನೋದನ್ನ ಪ್ರಾಯೋಗಿಕವಾಗಿ ಅರ್ಥ ಮಾಡಿಕೊಳ್ಳಿ. ಮೊದಲಿಗೆ, ಆ್ಯಪ್ ಓಪನ್ ಮಾಡಿ ನಿಮ್ಮ ಕೆವೈಸಿ ಪೂರ್ಣಗೊಳಿಸಿ. ಪ್ಯಾನ್ ಕಾರ್ಡ್ ಮತ್ತು ಮೂಲ ವಿವರಗಳನ್ನು ನೀಡಿದ ಮೇಲೆ ವೆರಿಫಿಕೇಶನ್ ಆಗುತ್ತೆ.

ಯಾವುದೇ ಅಕೌಂಟ್ ತೆರೆಯುವ ಶುಲ್ಕ ಇರೋದಿಲ್ಲ. ನಂತರ ನಿಮ್ಮ ಭಾರತೀಯ ರೂಪಾಯಿಗಳನ್ನು ಯುಎಸ್ ಡಾಲರ್‌ಗಳಾಗಿ ಪರಿವರ್ತಿಸಿ. ಡಾಲರ್‌ಗಳು ನಿಮ್ಮ ಅಕೌಂಟಿಗೆ ಬಂದ ಕೂಡಲೇ, ನೇರವಾಗಿ ಯುಎಸ್ ಸ್ಟಾಕ್‌ಗಳು ಅಥವಾ ಇಟಿಎಫ್‌ಗಳನ್ನು ಖರೀದಿಸಬಹುದು. ವೈಯಕ್ತಿಕ ಸ್ಟಾಕ್ ಆಯ್ಕೆ ಗೊಂದಲವಿದ್ದರೆ, S&P 500 ETF ನಂತಹ ಇಟಿಎಫ್‌ಗಳಲ್ಲಿ ಹೂಡಿಕೆ ಮಾಡಿ. ಇದು ಅನೇಕ ಆರಂಭಿಕರಿಗೆ ಸುರಕ್ಷಿತ ಮಾರ್ಗ.

ಯುಎಸ್ ಸ್ಟಾಕ್ ಹೂಡಿಕೆ ಏಕೆ ಅಗತ್ಯ?

  • ವಿಶ್ವದ ಅತಿ ದೊಡ್ಡ ಕಂಪನಿಗಳು ಯುಎಸ್‌ನಲ್ಲಿದೆ.
  • ಜಾಗತಿಕ ಇನ್ನೋವೇಷನ್‌ಗೆ ಪ್ರವೇಶ.
  • ಎಐ ಮತ್ತು ತಂತ್ರಜ್ಞಾನದ ಬೆಳವಣಿಗೆ.
  • ಭೌಗೋಳಿಕ ವೈವಿಧ್ಯೀಕರಣ (Diversification).
  • ಡಾಲರ್ ಎಕ್ಸ್‌ಪೋಸರ್.
  • ದೀರ್ಘಾವಧಿಯ ಸಂಪತ್ತು ಸೃಷ್ಟಿಯ ಅವಕಾಶ.

ಒಟ್ಟಾರೆ ಈಗ ಹೇಳುವುದಾದರೆ, ಯುಎಸ್ ಸ್ಟಾಕ್‌ಗಳಲ್ಲಿ ಹೂಡಿಕೆ ಮಾಡೋದು ಭಾರತೀಯರಿಗೆ ಒಂದು ಉತ್ತಮ ಅವಕಾಶ. ಇದು ಭಾರತ ಅಥವಾ ಯುಎಸ್ ನಡುವೆ ಒಂದನ್ನು ಆಯ್ಕೆ ಮಾಡುವುದಲ್ಲ, ಬದಲಿಗೆ ಎರಡರಲ್ಲೂ ಸಮತೋಲನ ಕಾಯ್ದುಕೊಳ್ಳುವುದು. ಬುದ್ಧಿವಂತ ಹೂಡಿಕೆದಾರರು ಯಾವತ್ತೂ ಡೈವರ್ಸಿಫಿಕೇಶನ್‌ಗೆ ಮಹತ್ವ ನೀಡುತ್ತಾರೆ. ಸಂಪತ್ತು ಸೃಷ್ಟಿಯಾಗುವುದು ಬೇಗ ಹೂಡಿಕೆ ಆರಂಭಿಸುವುದರಿಂದ, ಸ್ಥಿರವಾಗಿ ಉಳಿಸುವುದರಿಂದ ಮತ್ತು ದೀರ್ಘಾವಧಿಯ ಬಗ್ಗೆ ಯೋಚಿಸುವುದರಿಂದ.

ಹಾಗಾಗಿ, ತಡ ಮಾಡದೆ, ಈಗಲೇ ನಿಮ್ಮ ಹೂಡಿಕೆಯ ಪ್ರಯಾಣವನ್ನು ಶುರು ಮಾಡಿ.

ಇದನ್ನು ಓದಿ:

ಮನೆ ಸಾಲ: 50 ಲಕ್ಷಕ್ಕೆ 54 ಲಕ್ಷ ಬಡ್ಡಿ ಏನಿದು? ನಿಮಗೆ ಗೊತ್ತಿರಲೇಬೇಕಾದ ಗುಟ್ಟುಗಳು

ಬೆಂಗಳೂರಿನಲ್ಲಿ ಮನೆ ಖರೀದಿ vs ಬಾಡಿಗೆ: ನಿಮ್ಮ ನಿರ್ಧಾರಕ್ಕೆ ಸಮಗ್ರ ಗೈಡ್ ಇಲ್ಲಿದೆ!

Leave a Comment