ರೈತ ಸಂಜೀವಿನಿ ಯೋಜನೆ: ನಿಮ್ಮ ಕುಟುಂಬಕ್ಕೆ ₹5 ಲಕ್ಷ ಸಹಾಯ ಸಿಗುತ್ತದೆ – ಹೇಗೆ ಅರ್ಜಿ ಹಾಕುವುದು?

ನಮ್ಮ ಕರ್ನಾಟಕದ ರೈತ ಬಾಂಧವರಿಗೆ ನಮಸ್ಕಾರ! ಹೊಲಗದ್ದೆಗಳಲ್ಲಿ ಹಗಲಿರುಳು ಕಷ್ಟಪಟ್ಟು ದುಡಿಯೋ ರೈತರಿಗೆ ಯಾವಾಗ ಏನ್ ಆಗುತ್ತೆ ಅಂತ ಹೇಳೋಕೆ ಆಗಲ್ಲ.

ಅನಿರೀಕ್ಷಿತ ಅಪಘಾತ, ಸಾವು, ಅಥವಾ ಅಂಗವೈಕಲ್ಯ ಸಂಭವಿಸಿದ್ರೆ, ಅವರ ಕುಟುಂಬಕ್ಕೆ ಆರ್ಥಿಕ ಸಂಕಷ್ಟ ಎದುರಾಗೋದು ಸಹಜ. ಈ ನೋವಿನ ಸಮಯದಲ್ಲಿ ರೈತ ಕುಟುಂಬಗಳಿಗೆ ನೆರವಾಗೋಕೆ ನಮ್ಮ ಸರ್ಕಾರ “ರೈತ ಸಂಜೀವಿನಿ” ಅನ್ನೋ ಮಹತ್ವದ ಯೋಜನೆಯನ್ನ ಜಾರಿಗೆ ತಂದಿದೆ.

ಇದರಡಿ ನಿಮಗೆ 5 ಲಕ್ಷ ರೂಪಾಯಿವರೆಗೂ ಸಹಾಯ ಸಿಗಬಹುದು.

ಈ ಬ್ಲಾಗ್‌ನಲ್ಲಿ ಈ ಸ್ಕೀಮ್ ಬಗ್ಗೆ ಡೀಟೇಲ್ ಆಗಿ ತಿಳಿಸಿಕೊಡ್ತೀವಿ.

ರೈತ ಸಂಜೀವಿನಿ ಯೋಜನೆ ಅಂದ್ರೆ ಏನು?

ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ “ರೈತ ಸಂಜೀವಿನಿ” ಯೋಜನೆ, ಕೃಷಿ ಕೆಲಸಗಳಲ್ಲಿ ತೊಡಗಿರುವ ರೈತರಿಗೆ ಮತ್ತು ಅವರ ಕುಟುಂಬಗಳಿಗೆ ದೊಡ್ಡ ಆಸರೆಯಾಗಿದೆ.

ಹೊಲದಲ್ಲಿ ಕೆಲಸ ಮಾಡುವಾಗ ಎದುರಾಗುವ ಅನಿರೀಕ್ಷಿತ ಅಪಘಾತಗಳಿಂದ ಆಗುವ ನಷ್ಟಕ್ಕೆ ಹಣಕಾಸಿನ ನೆರವು ನೀಡೋದೇ ಇದರ ಮುಖ್ಯ ಉದ್ದೇಶ.

ರೈತ ಮಾತ್ರವಲ್ಲ, ಅವರ ಪತಿ, ಪತ್ನಿ ಹಾಗೂ ಅವಲಂಬಿತ ಮಕ್ಕಳಿಗೂ ಈ ಯೋಜನೆ ಅನ್ವಯಿಸುತ್ತೆ. ಕೇವಲ ಹಣದ ನೆರವಷ್ಟೇ ಅಲ್ಲ, ಕುಟುಂಬಕ್ಕೆ ಮಾನಸಿಕ ಧೈರ್ಯವನ್ನೂ ಕೊಡುತ್ತೆ ಈ ಸಂಜೀವಿನಿ ಯೋಜನೆ.

ಯಾವೆಲ್ಲಾ ಅನಾಹುತಗಳಿಗೆ ಪರಿಹಾರ ಸಿಗುತ್ತೆ?

  • ಹಾವು ಕಡಿತ ಅಥವಾ ವನ್ಯಜೀವಿಗಳಿಂದ ಆಗುವ ದಾಳಿ.
  • ಕೃಷಿ ಯಂತ್ರೋಪಕರಣಗಳನ್ನ ಬಳಸುವಾಗ ಆಗುವ ಅಪಘಾತಗಳು.
  • ಮರದಿಂದ ಅಥವಾ ಬಾವಿಗೆ ಬಿದ್ದು ಸಂಭವಿಸುವ ಸಾವು ಅಥವಾ ಗಾಯಗಳು.
  • ಕೃಷಿ ಕಾರ್ಯದ ವೇಳೆ ಎದುರಾಗುವ ವಿದ್ಯುತ್ ಅಪಘಾತ ಅಥವಾ ಎಲೆಕ್ಟ್ರಿಕ್ ಶಾಕ್.

ಪರಿಹಾರದ ಮೊತ್ತ ಎಷ್ಟು?

  • ಆಕಸ್ಮಿಕ ಮರಣ: ಒಂದುವೇಳೆ ರೈತರು ಮೃತಪಟ್ಟರೆ, ಅವರ ಕಾನೂನುಬದ್ಧ ವಾರಸುದಾರರಿಗೆ 1 ಲಕ್ಷ ರೂಪಾಯಿವರೆಗೆ ನೆರವು ಸಿಗುತ್ತೆ.
  • ಶಾಶ್ವತ ಅಂಗವೈಕಲ್ಯ: ಸಂಪೂರ್ಣವಾಗಿ ಕೆಲಸ ಮಾಡಲಾಗದಷ್ಟು ಅಂಗವೈಕಲ್ಯಕ್ಕೆ ಒಳಗಾದರೆ 1 ಲಕ್ಷ ರೂಪಾಯಿ ಸಹಾಯಧನ ಸಿಗುತ್ತೆ.
  • ಭಾಗಶಃ ಅಂಗವೈಕಲ್ಯ: ದೇಹದ ಯಾವುದಾದರೂ ಒಂದು ಭಾಗಕ್ಕೆ ಹಾನಿಯಾಗಿ ಭಾಗಶಃ ಅಂಗವೈಕಲ್ಯ ಉಂಟಾದರೆ 50,000 ರೂಪಾಯಿವರೆಗೆ ಆರ್ಥಿಕ ನೆರವು ಸಿಗುತ್ತೆ. ಇದು ಕುಟುಂಬಕ್ಕೆ ದೊಡ್ಡ ಬೆಂಬಲ.

ಯೋಜನೆಗೆ ಅರ್ಹತೆ ಯಾರಿಗೆ?

  • ಅರ್ಜಿದಾರರು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು.
  • ತಮ್ಮ ಸ್ವಂತ ಹೆಸರಿನಲ್ಲಿ ಆರ್.ಟಿ.ಸಿ. (ಪಹಣಿ) ಹೊಂದಿರಬೇಕು.
  • ರೈತ ಮಾತ್ರವಲ್ಲದೆ, ಅವರ ಪತಿ/ಪತ್ನಿ ಮತ್ತು ಅವಲಂಬಿತ ಮಕ್ಕಳೂ ಕೂಡ ಈ ಯೋಜನೆಗೆ ಅರ್ಹರಾಗಿರುತ್ತಾರೆ.
  • ವಯೋಮಿತಿ 15 ರಿಂದ 70 ವರ್ಷದೊಳಗಿರಬೇಕು.

ಅರ್ಜಿ ಸಲ್ಲಿಕೆ ಹೇಗೆ? ಅಗತ್ಯ ದಾಖಲೆಗಳೇನು?

  • ಪೊಲೀಸ್ FIR ಪ್ರತಿ.
  • ಮರಣೋತ್ತರ ಪರೀಕ್ಷೆ ವರದಿ (ಸಾವು ಸಂಭವಿಸಿದರೆ ಮಾತ್ರ).
  • ವೈದ್ಯಕೀಯ ಪ್ರಮಾಣಪತ್ರ (ಅಂಗವೈಕಲ್ಯ ಉಂಟಾದರೆ).
  • ಆರ್.ಟಿ.ಸಿ. ಮತ್ತು ಆಧಾರ್ ಕಾರ್ಡ್ ಪ್ರತಿ.
  • ಬ್ಯಾಂಕ್ ಪಾಸ್ ಬುಕ್ ಪ್ರತಿ ಮತ್ತು ಪಾಸ್‌ಪೋರ್ಟ್ ಅಳತೆಯ ಫೋಟೋಗಳು.

ಕೇವಲ ರೈತ ಸಂಜೀವಿನಿ ಅಷ್ಟೇ ಅಲ್ಲ: ಇತರೆ ಯೋಜನೆಗಳು

  • ಪಿ.ಎಂ. ಫಸಲ್ ಭೀಮಾ ಯೋಜನೆ: ಪ್ರಕೃತಿ ವಿಕೋಪದಿಂದ ಬೆಳೆಹಾನಿ ಆದ್ರೆ, ಅದಕ್ಕೆ ಅನುಗುಣವಾಗಿ ವಿಮಾ ಮೊತ್ತ ಸಿಗುತ್ತೆ.
  • ಪಿ.ಎಂ. ಸುರಕ್ಷಾ ಭೀಮಾ ಯೋಜನೆ: ಕೇವಲ 12 ರೂಪಾಯಿ ವಾರ್ಷಿಕ ಪ್ರೀಮಿಯಂನಲ್ಲಿ ವೈಯಕ್ತಿಕ ಅಪಘಾತ ವಿಮೆ ಸಿಗುತ್ತೆ. 2 ಲಕ್ಷ ರೂಪಾಯಿವರೆಗೂ ಕವರೇಜ್ ಪಡೆಯಬಹುದು.
  • ಕಂದಾಯ ಇಲಾಖೆ ಪರಿಹಾರ: ಹಾವು ಕಡಿತ ಅಥವಾ ವನ್ಯಜೀವಿ ದಾಳಿಯಿಂದ ಸಾವು ಸಂಭವಿಸಿದ್ರೆ, ಡಿಸಾಸ್ಟರ್ ಮ್ಯಾನೇಜ್ಮೆಂಟ್ ಆಕ್ಟ್ ಪ್ರಕಾರ 2 ಲಕ್ಷ ರೂಪಾಯಿವರೆಗೆ ಪರಿಹಾರ ನೀಡುತ್ತೆ.

ಕೇಂದ್ರ ಸರ್ಕಾರದ ರೈತಪರ ಯೋಜನೆಗಳು

  • ರೈತ ಸಮೃದ್ಧಿ ಯೋಜನೆ: ಕೃಷಿ ಸಂಬಂಧಿತ ಅಪಘಾತಗಳಿಗೆ ಇದು ಆರ್ಥಿಕ ನೆರವು ನೀಡುತ್ತೆ.
  • ಪಿ.ಎಂ. ಸುರಕ್ಷಾ ಭೀಮಾ ಯೋಜನೆ: ವಾರ್ಷಿಕ 12 ರೂಪಾಯಿ ಪ್ರೀಮಿಯಂಗೆ 2 ಲಕ್ಷ ರೂಪಾಯಿ ಅಪಘಾತ ವಿಮೆ, ಅಂಗವೈಕಲ್ಯಕ್ಕೆ 1-2 ಲಕ್ಷ ರೂಪಾಯಿ ಕವರೇಜ್ ಸಿಗುತ್ತೆ.
  • ಪಿ.ಎಂ. ಫಸಲ್ ಭೀಮಾ ಯೋಜನೆ: ಹವಾಮಾನ ವೈಪರೀತ್ಯದಿಂದ ಬೆಳೆ ಹಾನಿಗೊಳಗಾದ್ರೆ, ಈ ಯೋಜನೆಯಡಿ ರೈತರಿಗೆ ಆರ್ಥಿಕ ನೆರವು ಸಿಗುತ್ತೆ.

ಮಾಹಿತಿ ಕೊರತೆ ನೀಗಿಸಿ, ರೈತರ ಬದುಕು ಬೆಳಗಿಸಿ!

ದುರಾದೃಷ್ಟವಶಾತ್, “ರೈತ ಸಂಜೀವಿನಿ“ಯಂತಹ ಮಹತ್ವದ ಯೋಜನೆಗಳ ಬಗ್ಗೆ ನಮ್ಮ ಬಹುತೇಕ ರೈತರಿಗೆ ಮಾಹಿತಿಯೇ ಇರೋದಿಲ್ಲ. ಅವರು ಸಾಮಾನ್ಯವಾಗಿ ಬೆಳೆವಿಮೆ ಅಥವಾ ಪಿ.ಎಂ. ಕಿಸಾನ್ ಸಮ್ಮಾನ್ ನಿಧಿ ಬಗ್ಗೆ ಮಾತ್ರ ತಿಳಿದಿರುತ್ತಾರೆ.

ಹಾವು ಕಡಿತ ಅಥವಾ ಅಪಘಾತಗಳಂತಹ ಸಂದರ್ಭಗಳಲ್ಲಿ ಎಲ್ಲಿ ಸಹಾಯ ಕೇಳಬೇಕು, ಯಾವ ಸ್ಕೀಮ್ ಇರುತ್ತೆ ಅನ್ನೋದೇ ಗೊತ್ತಿರಲ್ಲ. ಇದರಿಂದ ಎಷ್ಟೋ ಕುಟುಂಬಗಳು ಸಿಗಬೇಕಾದ ಬೆನಿಫಿಟ್‌ಗಳಿಂದ ವಂಚಿತರಾಗುತ್ತಿವೆ.

ಈ ಮಾಹಿತಿ ಸರಿಯಾಗಿ ರೈತರನ್ನ ತಲುಪಿದ್ರೆ, ಅವರ ಮಾನಸಿಕ ನೋವಿನ ಜೊತೆಗಿನ ಆರ್ಥಿಕ ಸಂಕಷ್ಟನೂ ದೂರವಾಗುತ್ತೆ.

ಕೊನೆಯ ಮಾತು:

ನಮ್ಮ ರೈತ ಬಾಂಧವರು ಕಷ್ಟದ ಸಮಯದಲ್ಲಿ ಕುಗ್ಗಬಾರದು ಅನ್ನೋದೇ ಈ ಎಲ್ಲಾ ಯೋಜನೆಗಳ ಮುಖ್ಯ ಉದ್ದೇಶ.

“ರೈತ ಸಂಜೀವಿನಿ” ಮತ್ತು ಇತರ ಯೋಜನೆಗಳು ರೈತ ಕುಟುಂಬಗಳಿಗೆ ಕೇವಲ ಆರ್ಥಿಕ ನೆರವಷ್ಟೇ ಅಲ್ಲ, ಮನಸ್ಥೈರ್ಯವನ್ನೂ ತುಂಬುತ್ತವೆ.

ಈ ಎಲ್ಲಾ ಮಾಹಿತಿಯನ್ನ ತಿಳಿದುಕೊಂಡು, ನೀವೂ ಕೂಡ ಈ ಯೋಜನೆಗಳ ಸದುಪಯೋಗ ಪಡಿಸಿಕೊಳ್ಳಿ.

ನಿಮ್ಮ ಸ್ನೇಹಿತರು, ಸಂಬಂಧಿಕರು, ಇತರ ರೈತರಿಗೂ ಈ ಉಪಯುಕ್ತ ಮಾಹಿತಿಯನ್ನ ತಲುಪಿಸಿ. ಇದು ಅವರಿಗೂ ಕೂಡ ದೊಡ್ಡ ಮಟ್ಟದಲ್ಲಿ ಸಹಾಯ ಮಾಡುತ್ತೆ.

ಇದನ್ನು ಓದಿ:

ರೈತ ID ಇಲ್ಲದಿದ್ದರೆ ಸರ್ಕಾರದ ಹಣ ನಿಲ್ಲುತ್ತದೆ – ಈಗಲೇ ಮಾಡಿಕೊಳ್ಳಿ, ಹೇಗೆ ಗೊತ್ತಾ..?

ಮದುವೆಗಾಗಿ ಸಾಲ ಮಾಡಬೇಡಿ – ಮಧ್ಯಮ ವರ್ಗದ ಕುಟುಂಬಗಳು ತಿಳಿದಿರಲೇಬೇಕಾದ ಸತ್ಯ..!

Leave a Comment