ಬೆಂಗಳೂರು ಬಿ ಖಾತಾ ಟು ಎ ಖಾತಾ: ಭೂ ಗ್ಯಾರಂಟಿ ವಿಷಯದ ಸಂಪೂರ್ಣ ಮಾಹಿತಿ

ಬೆಂಗಳೂರಿನಲ್ಲಿ ಆಸ್ತಿ ಇರುವವರ ಈ ಒಂದು ಬಿ ಖಾತಾ ಸಮಸ್ಯೆ ಎದುರಾಗುವುದು ಸಾಮಾನ್ಯ. ಇದರಿಂದ ಆಸ್ತಿಯ ಮಾಲೀಕತ್ವ, ಸಾಲ ಪಡೆಯುವುದು ಮತ್ತು ಬೇರೆ ರೀತಿಯ ಮೂಲಭೂತ ಸೌಕರ್ಯಗಳಿಗೆ ತೊಂದರೆ ಹಾಗುತದೆ.

ಈಗ ಈ ಸಮಸ್ಯೆಗೆ ಸರ್ಕಾರದಿಂದ ಹೊಸ ಪರಿಹಾರ ಸಿಕ್ಕಿದೆ!

ಸ್ನೇಹಿತರೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ‘ಭೂ ಗ್ಯಾರಂಟಿ’ ಯೋಜನೆಯನ್ನು ಘೋಷಿಸಿದರೆ, ಬಿ ಖಾತಾ ಆಸ್ತಿಗಳನ್ನು ಎ ಖಾತಾಗೆ ಪರಿವರ್ತಿಸಲು ವಿಶೇಷ ಅವಕಾಶ ಈಗ ನಿಮಗೆ ನೀಡಲಾಗಿದೆ.

ಬೆಂಗಳೂರು ಆಸ್ತಿಗಳಿಗೆ ಇ-ಖಾತಾ ಅಗತ್ಯತೆ ಮತ್ತು ಬಿ ಖಾತಾ ಸಮಸ್ಯೆ ಏನಿದು ?

ನಮ್ಮ ಗ್ರೇಟರ್ ಬೆಂಗಳೂರು ಅಥಾರಿಟಿ (GBBA) ವ್ಯಾಪ್ತಿಯಲ್ಲಿ ಬರುವ ಪ್ಲಾಟ್ ಅಥವಾ ಮನೆಗಳಿಗೆ ಇ-ಖಾತಾ ಕಡ್ಡಾಯ ಎಂಬುದು ನಿಮಗೆ ಈಗಾಗಲೇ ಗೊತಿರುವ ವಿಷಯ.

ಬೆಂಗಳೂರಿನಲ್ಲಿ ಬಿ ಖಾತಾ ಇರುವ ಆಸ್ತಿ ಮಾಲೀಕರಿಗೆ ಇದು ದೊಡ್ಡ ತಲೆನೋವಾಗಿತ್ತು ಎನ್ನಬಹುದು.

ಇಂತಹ ಆಸ್ತಿಗಳಿಗೆ ಬ್ಯಾಂಕ್ ಸಾಲ ಸಿಗುವುದು ಕಷ್ಟ, ಕೆಲವೊಮ್ಮೆ ನೀರಿನ ಮತ್ತು ವಿದ್ಯುತ್ ಸಂಪರ್ಕಗಳಿಗೂ ಇಲ್ಲಿ ಸಮಸ್ಯೆ ಇರುತ್ತಿತ್ತು. ನಮ್ಮ ಸರ್ಕಾರದ ಮಟ್ಟದಲ್ಲೂ ಇಂತಹ ಆಸ್ತಿಗಳನ್ನು ಪೂರ್ಣ ಪ್ರಮಾಣದಲ್ಲಿ ದಾಖಲಿಸಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದ ಈ ಬಿ ಖಾತಾ ಸಮಸ್ಯೆಗೆ ಶಾಶ್ವತ ಪರಿಹಾರ ಬೇಕಿತ್ತು.

ಉಪ ಮುಖ್ಯಮಂತ್ರಿ ಡಿಕೆಶಿ ಅವರ ‘ಭೂ ಗ್ಯಾರಂಟಿ’ ಘೋಷಣೆ

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮೇ 13 ರಂದು ಮಹತ್ವದ ಸುದ್ದಿಗೋಷ್ಠಿಯಲ್ಲಿ ‘ಭೂ ಗ್ಯಾರಂಟಿ’ ಯೋಜನೆಯನ್ನು ಜನರಿಗೆ ಘೋಷಣೆಮಾಡಿದರೆ.

ಇದನ್ನು ನಮ್ಮ ರಾಜ್ಯ ಸರ್ಕಾರದ ‘ಆರನೇ ಗ್ಯಾರಂಟಿ’ ಎಂದು ಬಣ್ಣಿಸಲಾಗಿದೆ ಅಂತ ಹೇಳಬಹುದು. ಬೆಂಗಳೂರಿನಲ್ಲಿ ಬಿ ಖಾತಾ ಆಸ್ತಿಗಳಿಗೆ ಸಂಬಂಧಿಸಿದ ಪ್ರಾಬ್ಲೆಮ್ಸ್ ಏನಿದೆ ಅದನ್ನು ನಿವಾರಿಸುವ ಉದ್ದೇಶವನ್ನು ಇದು ಹೊಂದಿದೆ.

ಇದರಿಂದ ಲಕ್ಷಾಂತರ ಆಸ್ತಿ ಮಾಲೀಕರಿಗೆ ಆಸ್ತಿಯ ಬಗ್ಗೆ ಸಂಪೂರ್ಣ ಸ್ಪಷ್ಟತೆ, ಕಾನೂನು ಮಾನ್ಯತೆ ಸಿಗುವ ಭರವಸೆ ಮೂಡಿದೆ ಅಂತ ಹೇಳಬಹುದು. ಇದು ನಿಜಕ್ಕೂ ಒಂದು ದೊಡ್ಡ ಮತ್ತು ಸುಂದರ ಬೆಳವಣಿಗೆ ಹಾಗೂ ಬದಲಾವಣೆ.

7 ಲಕ್ಷ ಆಸ್ತಿಗಳಿಗೆ (OTS) ಒನ್ ಟೈಮ್ ಸ್ಕೀಮ್ ಯೋಜನೆ ಪ್ಲಾನ್!

ಬಿ ಖಾತಾ ಆಸ್ತಿಗಳನ್ನು ಎ ಖಾತಾಗೆ ಪರಿವರ್ತಿಸಲು ಸರ್ಕಾರ ‘ಒನ್ ಟೈಮ್ ಸ್ಕೀಮ್‘ (OTS)’ಒಂದು ಬಾರಿ ಯೋಜನೆ’ಯನ್ನು ಜನರಿಗೆ ಪರಿಚಯಿಸಿದೆ.

ಈ ಒಂದು ಯೋಜನೆಯಡಿಯಲ್ಲಿ ಬೆಂಗಳೂರಿನಲ್ಲಿ ಸುಮಾರು 7 ಲಕ್ಷ ಬಿ ಖಾತಾ ಆಸ್ತಿಗಳಿಗೆ ಲಾಭವಾಗಲಿದೆ ಎಂದು ಗೆಸ್ ಮಾಡಲಾಗಿದೆ. ಈ ಹಿಂದೆ ಇದ್ದ ಅನೇಕ ಅಡೆತಡೆಗಳನ್ನು ನಿವಾರಿಸಿ, ಆಸ್ತಿ ಮಾಲೀಕರಿಗೆ ತಮ್ಮ ಆಸ್ತಿಗಳನ್ನು ಕಾನೂನುಬದ್ಧಗೊಳಿಸಲು ಸರಳ ವಿಧಾನವನ್ನು ಒದಗಿಸುವುದು ಇದರ ಮುಖ್ಯ ಉದ್ದೇಶ ಆಗಿದೆ.

ಈ ಸ್ಕೀಮ್ ಮೂಲಕ ಜನರಿಗೆ ತಮ್ಮ ಕನಸಿನ ಮನೆಗೆ ಈಗ ಸರ್ಕಾರದ ಕಾನೂನು ಮಾನ್ಯತೆ ನೀಡಬಹುದು.

‘ನನ್ನ ಈ ಖಾತಾ’ ಅಭಿಯಾನದ ಇವತಿನಿಂದ ಆರಂಭ

ಭೂ ಗ್ಯಾರಂಟಿ ಯೋಜನೆಯ ಭಾಗವಾಗಿ, ಮೇ 16 ರಿಂದ ‘ನನ್ನ ಈ ಖಾತಾ’ ಎಂಬ ವಿಶೇಷ ಅಭಿಯಾನವನ್ನು ಶುರುಮಾಡಲಾಗಿದೆ.

ಈ ಅಭಿಯಾನದ ಮುಖ್ಯ ಗುರಿ ಈಗಾಗಲೇ ನಿಮಗೆ ತಿಳಿದಿದೆ. ಏನೆಂದರೆ, ಬಿ ಖಾತಾ ಆಸ್ತಿ ಮಾಲೀಕರಿಗೆ ಸುಲಭವಾಗಿ ಎ ಖಾತಾಗೆ ಪರಿವರ್ತಿಸಲು ನೆರವು ನೀಡಿವುದೆ ಯೋಜನೆಯ ಒಂದು ಗುರಿ.

ಇದರಿಂದ ಆಸ್ತಿ ಮಾಲೀಕರಿಗೆ ನೇರ ಬೆಂಬಲ ನೀಡಿ, ಪರಿವರ್ತನೆ ಪ್ರಕ್ರಿಯೆಯನ್ನು ಬೇಗಗೊಳಿಸಲು ಸರ್ಕಾರ ಈ ಹೆಜ್ಜೆ ಇಟ್ಟಿದೆ. ಈ ಕ್ಯಾಂಪೇನ್ ಮೂಲಕ ಹೆಚ್ಚಿನ ಜನರಿಗೆ ಇದು ತಲುಪುವ ಗುರಿಯನ್ನು ಸರ್ಕಾರ ಇಟ್ಟುಕೊಳ್ಳಲಾಗಿದೆ.

ಇನ್ಮೇಲೆ ಪ್ರತಿ ಶನಿವಾರ ಬೆಂಗಳೂರಿನಲ್ಲಿ ವಿಶೇಷ ಶಿಬಿರಗಳು

B ಖಾತಾ ಟು ಎ ಖಾತಾ ಪರಿವರ್ತನೆ ಪ್ರಕ್ರಿಯೆಯನ್ನು ಇನ್ನಷ್ಟು ಸುಲಭಗೊಳಿಸಲು, ಬೆಂಗಳೂರು ನಗರದಾದ್ಯಂತ ಪ್ರತಿ ಶನಿವಾರ ವಿಶೇಷ ಶಿಬಿರಗಳನ್ನು (ಕ್ಯಾಂಪ್ಸ್) ಏನಂತಾರೆ ಅದನ್ನು ಆಯೋಜಿಸಲಾಗುತ್ತದೆ.

50 ಕ್ಕೂ ಹೆಚ್ಚು ವಿಭಿನ್ನ ಸ್ಥಳಗಳಲ್ಲಿ ಈ ಒಂದು ಶಿಬಿರಗಳು ನಡೆಯಲಿದೆ.

ಆಸ್ತಿ ಮಾಲೀಕರು ಏನಿದರೆ ಅವರೆಲರು ಈ ಶಿಬಿರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಲು ಮತ್ತು ಅಗತ್ಯ ಮಾಹಿತಿ ಪಡೆಯಲು ಇದು ನಿಮಗೆ ನೇರ ಸಹಾಯ ಮಾಡುತದೆ.

ಇದರಿಂದ ಜನರಿಗೆ ದೂರದ ಪ್ರಯಾಣ ತಪ್ಪುತ್ತದೆ ಮತ್ತು ಆಸ್ತಿಯ ಪ್ರಕ್ರಿಯೆ ಹೆಚ್ಚು ಪರಿಣಾಮಕಾರಿಯಾಗುತ್ತದೆ.

ಪರಿವರ್ತನಾ ಶುಲ್ಕದಲ್ಲಿ ಭಾರೀ ಇಳಿಕೆ ಎಷ್ಟು ಎಂದರೆ 2% ಮಾತ್ರ!

ಈ ಯೋಜನೆಯಲ್ಲಿ ಮತ್ತೊಂದು ಪ್ರಮುಖ ಮನ ಸೆಳೆಯುವ ವಿಷಯ ಎಂದರೆ, ಬಿ ಖಾತಾ ಆಸ್ತಿಯನ್ನು ಎ ಖಾತಾಗೆ ಪರಿವರ್ತಿಸುವ ಶುಲ್ಕದಲ್ಲಿ ಭಾರೀ ಇಳಿಕೆ ಮಾಡಲಾಗಿದೆ.

ಸಾಮಾನ್ಯವಾಗಿ ಗೈಡೆನ್ಸ್ ವ್ಯಾಲ್ಯೂನ 5% ಶುಲ್ಕ ವಿಧಿಸಲಾಗುತ್ತಿತ್ತು ಈ ಹಿಂದೆ. ಆದರೆ, ‘ನನ್ನ ಈ ಖಾತಾ’ ಅಭಿಯಾನದ ಅಡಿಯಲ್ಲಿ, ಮೇ 16 ರಿಂದ 100 ದಿನಗಳ ಒಳಗಾಗಿ ಅರ್ಜಿ ಸಲ್ಲಿಸಿದರೆ.

ಕೇವಲ 2% ಶುಲ್ಕ ಪಾವತಿಸಿದರೆ ಸಾಕು ಎಂದು ಸರ್ಕಾರ ತಿಳಿಸಿದೆ. ಇದರಿಂದ ನಮ್ಮ ಆಸ್ತಿ ಮಾಲೀಕರಿಗೆ ತಮ್ಮ ಹಣ ಉಳಿತಾಯಾಗುತದೆ, ಬೇಗ ಅರ್ಜಿ ಸಲ್ಲಿಸಲು ಇದು ಉತ್ತಮ ಅವಕಾಶ ಎಂದು ಹೇಳಬಹುದು.

ಬಿಲ್ಡಿಂಗ್ ಪ್ಲಾನ್ ಡಿವಿಯೇಷನ್‌ನಲ್ಲಿ 15% ರಿಯಾಯಿತಿ ಪ್ರಸ್ತಾವ ಮಾಡಿದ್ದಾರೆ:

ನಿರ್ಮಾಣ ಯೋಜನೆಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ಒಂದು ಪ್ರಮುಖ ಬದಲಾವಣೆಯನ್ನು ಕಾನೂನಿನಲ್ಲಿ ತರಲಾಗಿದೆ .ಬಿಲ್ಡಿಂಗ್ ಪ್ಲಾನ್‌ನಲ್ಲಿ 15% ಡಿವಿಯೇಷನ್‌ಗೆ ಅವಕಾಶ ನೀಡುವ ಪ್ರಸ್ತಾವನೆ ಇದು.

ಹಿಂದೆ ಇದು ಕೇವಲ 5% ಇತ್ತು. ಇದರಿಂದ ಸಣ್ಣ ಪುಟ್ಟ ಯೋಜನೆ ಉಲ್ಲಂಘನೆಗಳನ್ನು ಹೊಂದಿರುವ ಆಸ್ತಿ ಮಾಲೀಕರಿಗೆ ಇದು ರಿಲೀಫ್ ಸಿಗುತ್ತದೆ ಅಂತ ಹೇಳಬಹುದು.

ಇದು ಆಕ್ಯುಪೆನ್ಸಿ ಸರ್ಟಿಫಿಕೇಟ್ (OC), ನೀರು, ವಿದ್ಯುತ್ ಸಂಪರ್ಕ ಪಡೆಯಲು ಸಹಾಯ ಮಾಡಲಿದೆ ಸ್ನೇಹಿತರೆ. ಬಹಳಷ್ಟು ಜನರಿಗೆ ಇದರಿಂದ ಅನುಕೂಲ ಆಗಲಿದೆ ಅನ್ನಬಹುದು.

ಒನ್-ಸ್ಟಾಪ್ ಸೇವಾ ಕೇಂದ್ರಗಳು ಮತ್ತು QR ಕೋಡ್ ಸೌಲಭ್ಯ ಒದಗಿಲಾಗಿದೆ:

‘ನನ್ನ ಈ ಖಾತಾ’ ಅಭಿಯಾನದ ಭಾಗವಾಗಿ, 52 ಮೀಸಲಾದ ಒನ್-ಸ್ಟಾಪ್ ಸೇವಾ ಕೇಂದ್ರಗಳನ್ನು ಬೆಂಗಳೂರು ಉದ್ದಕ್ಕೂ ತೆರೆಯಲಾಗಿದೆ.

ಈ ಕೇಂದ್ರಗಳಲ್ಲಿ ಇ-ಖಾತಾ ಸಂಬಂಧಿತ ಎಲ್ಲಾ ಸೇವೆಗಳು ಜನರಿಗೆ ಸಿಗುತದೆ.

ನೀವು ಎಲ್ಲಿಗೆ ಹೋಗಬೇಕು ಎಂದು ತಿಳಿಯಲು, ಒಂದು QR ಕೋಡ್ ಅನ್ನು ಸಹ ನೀಡಲಾಗಿದೆ.

ನಿಮ್ಮ ಮೊಬೈಲ್‌ನಿಂದ ಈ QR ಕೋಡ್ ಸ್ಕ್ಯಾನ್ ಮಾಡಿದರೆ ಸಾಕು, ಪಿಡಿಎಫ್ ರೂಪದಲ್ಲಿ ಎಲ್ಲಾ 52 ಕೇಂದ್ರಗಳ ವಿಳಾಸ ಮತ್ತು ಸಂಪೂರ್ಣ ಮಾಹಿತಿ ನಿಮಗೆ ಸಿಗುತ್ತದೆ.

ಇದರಿಂದ ಜನರಿಗೆ ಮಾಹಿತಿ ಪಡೆಯುವುದು ಇನ್ನೂ ಸುಲಭವಾಗಿದೆ.

ಕೊನೆಯ ಮಾತುಗಳೊಂದಿಗೆ ಲೇಖನ ಮುಕ್ತಾಯ:

ಬೆಂಗಳೂರಿನ ಆಸ್ತಿ ಮಾಲೀಕರ ಬಹಳಷ್ಟು ಸಮಸ್ಯೆಗೆ ‘ಭೂ ಗ್ಯಾರಂಟಿ’ ಮತ್ತು ‘ನನ್ನ ಈ ಖಾತಾ’ ಅಭಿಯಾನ ಒಂದು ಒಳೆಯ ಪರಿಹಾರವಾಗಿದೆ ಅಂತ ಏಳಬಹುದು.

ಬಿ ಖಾತಾ ಆಸ್ತಿಗಳನ್ನು ಎ ಖಾತಾಗೆ ಪರಿವರ್ತಿಸುವ ಈ ಅವಕಾಶವು ಆಸ್ತಿಗಳಿಗೆ ಕಾನೂನು ಬದ್ಧತೆ ಮತ್ತು ಮೌಲ್ಯವನ್ನು ಹೆಚ್ಚಿಸುತ್ತದೆ. ವಿಶೇಷವಾಗಿ 100 ದಿನಗಳೊಳಗಿನ 2% ಶುಲ್ಕದ ಕೊಡುಗೆಯು ದೊಡ್ಡ ಲಾಭಾಂಶವಾಗಿದೆ ನಿಮಗೆಲಾ.

ಅರ್ಹ ಆಸ್ತಿ ಮಾಲೀಕರು ಈ ಸುವರ್ಣಾವಕಾಶವನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ತಮ್ಮ ಆಸ್ತಿಯ ಭವಿಷ್ಯವನ್ನು ಇಂದೆ ಭದ್ರಪಡಿಸಿಕೊಳ್ಳಿ.

ಬೆಂಗಳೂರಿನ ಆಸ್ತಿ ಮಾರುಕಟ್ಟೆಯಲ್ಲಿ ಇದು ಒಂದು ಯೋಜನೆ ಹೊಸ ಕ್ರಾಂತಿಗೆ ಕಾರಣವಾಗಲಿದೆ ಎಂದರೆ ತಪಗಲ್ಲ .

ಇದನ್ನೂ ಓದಿ:

PMFBY: ಬೆಳೆ ವಿಮೆ ಯೋಜನೆಯಲ್ಲಿ ಬಿಗ್ ಅಪ್ಡೇಟ್! ರೈತರಿಗೆ ಹೊಸ ಸಪೋರ್ಟ್!

ಅನ್ನಪೂರ್ಣ ಯೋಜನೆಯಿಂದ ₹50,000 ಸಾಲ ಪಡೆಯಬಹುದು – ನಿಮ್ಮ ಫುಡ್ ಬಿಸಿನೆಸ್‌ ಇದ್ದರೆ ಗೋಲ್ಡನ್ ಒಪ್ಪೋರ್ಚುನಿಟಿ

Leave a Comment