ಅನ್ನಪೂರ್ಣ ಯೋಜನೆಯಿಂದ ₹50,000 ಸಾಲ ಪಡೆಯಬಹುದು – ನಿಮ್ಮ ಫುಡ್ ಬಿಸಿನೆಸ್‌ ಇದ್ದರೆ ಗೋಲ್ಡನ್ ಒಪ್ಪೋರ್ಚುನಿಟಿ

ನಿಮ್ಮ ಮಾಡುವ ಅಡುಗೆ ತಿಂದು ಅಕ್ಕ ಪಕ್ಕದ ಮನೆಯವರು, ಅಥವಾ ಫ್ರೆಂಡ್ಸ್ ಎಲ್ಲರೂ ಫಿದಾ ಆಗಿದ್ದಾರಾ? ಹಾಗಿದ್ರೆ, ಆ ಅದ್ಭುತ ರುಚಿಯನ್ನೇ ಈಗ ನಿಮ್ಮ ಬಂಡವಾಳ ಮಾಡಿಕೊಳಬಹುದು! ಸ್ವಂತ ಹೋಟೆಲ್, ಕ್ಯಾಟರಿಂಗ್ ಇಲ್ಲಾ ಟಿಫಿನ್ ಸೆಂಟರ್ ಶುರು ಮಾಡಬೇಕು ಅನ್ನೋ ಕನಸು ಇರುವವರಿಗೆ ಇಲ್ಲಿದೆ ಹೋಸ ಅವಕಾಶ.

ಯಾಕಂದ್ರೆ, ಅನ್ನಪೂರ್ಣ ಯೋಜನೆ ಅಡಿಯಲ್ಲಿ ನಿಮಗೆ 50 ಸಾವಿರ ರೂಪಾಯಿ ವರೆಗೆ ಲೋನ್ ಸಿಗುತ್ತೆ ಸ್ನೇಹಿತರೆ. ಕಡಿಮೆ ಬಡ್ಡಿ, ಸುಲಭವಾಗಿ ಲೋನ್ ತೀರಿಸುವ ಆಯ್ಕೆಗಳು ಮಹಿಳೆಯರಿಗಾಗಿಯೇ ಇರುವ ಈ ಸ್ಕೀಮ್ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಿ.

ಅನ್ನಪೂರ್ಣ ಯೋಜನೆ ಅಂದರೆ ಏನು ?

ನೀವು ಒಂದು ಫುಡ್ ಬಿಸಿನೆಸ್ ಮಾಡಬೇಕು ಅಂತಿರುವ ಮಹಿಳೆಯರಿಗೆ ಫೈನಾನ್ಸಿಯಲ್ ಸಪೋರ್ಟ್ ಕೊಡೋ ಒಂದು ಸೂಪರ್ ಸ್ಕೀಮ್.

ಮುಖ್ಯವಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಮತ್ತು ಕೆಲವು ರಾಷ್ಟ್ರೀಕೃತ ಬ್ಯಾಂಕ್‌ಗಳು ಇದನ್ನ ಜಾರಿಗೆ ತಂದಿವೆ ಸ್ನೇಹಿತರೆ.

ಮಹಿಳೆಯರು ಸ್ವಾವಲಂಬಿಗಳಾಗಬೇಕು, ತಮ್ಮ ಕೈಯಿಂದಲೇ ಒಂದು ಸ್ವಂತ ಬಿಸಿನೆಸ್ ಕಟ್ಟಬೇಕು ಅನ್ನೋದು ಈ ಯೋಜನೆಯ ಮುಖ್ಯ ಉದ್ದೇಶ ಹಾಗಿದೆ.

ನಿಮ್ಮ ಅಡುಗೆ ಮಾಡುವ ಸ್ಟೈಲ್ಗೆ ಒಂದು ಒಳ್ಳೆ ಪ್ಲಾಟ್‌ಫಾರ್ಮ್ ಸಿಗಬೇಕು ಅನ್ನೋದೇ ಈ ಯೋಜನೆ ಹಿಂದಿನ ಗುರಿ . ಇದು ನಿಜವಾಗ್ಲೂ ಬೆಂಗಳೂರಿನ ಮಹಿಳೆಯರಿಗೆ ದೊಡ್ಡ ಅವಕಾಶ ಅನ್ನಬಹುದು.

ಯಾವೆಲ್ಲಾ ಮಹಿಳಾ ಫಲಾನುಭವಿಗಳಿಗೆ ಅವಕಾಶ? ಅರ್ಹತೆ ಏನು?

ಅನ್ನಪೂರ್ಣ ಯೋಜನೆಗೆ ಅರ್ಜಿ ಸಲ್ಲಿಸೋಕೆ ಕೆಲವು ಬಹಳ ಸಿಂಪಲ್ ಎಲಿಜಿಬಿಲಿಟಿ ಕ್ರೈಟೀರಿಯಾಗಳಿವೆ ಸ್ನೇಹಿತರೆ.

  • ನಿಮ ವಯಸು 18 ರಿಂದ 60 ವರ್ಷದೊಳಗಿನ ಯಾವುದೇ ಮಹಿಳೆಯರು ಇದಕ್ಕೆ ಅರ್ಜಿ ಹಾಕಬಹುದು.
  • ಪ್ರಮುಖವಾಗಿ, ಆಹಾರ ಉದ್ಯಮ ಅಂದ್ರೆ ಫುಡ್ ಬಿಸಿನೆಸ್ ಶುರು ಮಾಡೋಕೆ ನಿಮಗೆ ಆಸಕ್ತಿ ಇರಬೇಕು ಇದು ಗಮನದಲ್ಲಿ ಏರಬೇಕು.
  • ಸಣ್ಣ ಹೋಟೆಲ್, ಕ್ಯಾಟರಿಂಗ್, ಟಿಫಿನ್ ಸೆಂಟರ್ ಅಥವಾ ಮನೆಯಿಂದಲೇ ಅಡುಗೆ ಮಾಡಿ ಜನರಿಗೆ ಸರ್ವ್ ಮಾಡುವ ಪ್ಲಾನ್ ಮಾಡಿರೋರಿಗೆ ಇದು ಬೆಸ್ಟ್ ಆಪ್ಷನ್ ಎನ್ನಬಹುದು .
  • ನಿಮ್ದೇ ಒಂದು ಬ್ಯಾಂಕ್ ಖಾತೆ ಇರಬೇಕು.

ಯೋಜನೆ ಇಂದ ಎಷ್ಟು ಲೋನ್ ಸಿಗುತ್ತೆ? ಮತ್ತು ಏನಕ್ಕೆ ಬಳಸಬಹುದು?

  • ಪಾತ್ರೆಗಳು ಮತ್ತು ಅಡುಗೆಗೆ ಬೇಕಾದ ಸಾಮಗ್ರಿಗಳು
  • ಗ್ಯಾಸ್ ಕನೆಕ್ಷನ್ ಮತ್ತು ನೀರಿನ ವ್ಯವಸ್ಥೆ
  • ಸಣ್ಣ ಹೋಟೆಲ್, ಕ್ಯಾಟರಿಂಗ್ ಅಥವಾ ಟಿಫಿನ್ ಸೆಂಟರ್‌ಗೆ ಬೇಕಾದ ಇತರ ಸಾಮಗ್ರಿಗಳು.

ತಗೋಳೋ ಅಷ್ಟು ಹಣ ಸಿಗುತದೆ.

ಫಲಾನುಭವಿಗಳು ಅರ್ಜಿ ಹಾಕೋಕೆ ಬೇಕಾದ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ವೋಟರ್ ಐಡಿ
  • ಪಾಸ್‌ಪೋರ್ಟ್ ಸೈಜ್ ಫೋಟೋಗಳು
  • ಬ್ಯಾಂಕ್ ಖಾತೆ ವಿವರಗಳು (ಪಾಸ್‌ಬುಕ್)
  • ನಿಮ್ಮ ಉದ್ಯಮದ ಬಗ್ಗೆ ಒಂದು ಸಣ್ಣ ಮಾಹಿತಿ ಪತ್ರ (ಬಿಸಿನೆಸ್ ಪ್ರಪೋಸಲ್).

ಫಲಾನುಭವಿಗಳು ಯೋಜನೆಗೆ ಅರ್ಜಿ ಸಲ್ಲಿಸೋದು ಹೇಗೆ?

  • ನಿಮ್ಮ ಹತ್ತಿರದ SBI ಅಥವಾ ಯಾವುದೇ ರಾಷ್ಟ್ರೀಕೃತ ಬ್ಯಾಂಕ್‌ಗೆ ವಿಸಿಟ್ ಮಾಡಿ.
  • ಅಲ್ಲಿ ಅನ್ನಪೂರ್ಣ ಯೋಜನೆ ಬಗ್ಗೆ ವಿಚಾರಿಸಿ, ಅರ್ಜಿ ಫಾರ್ಮ್ ಕೇಳಿ.
  • ನಿಮ್ಮ ಬಿಸಿನೆಸ್ ಬಗ್ಗೆ ಮಾಹಿತಿ ತುಂಬಿ, ಬೇಕಾದ ಡಾಕ್ಯುಮೆಂಟ್‌ಗಳನ್ನ ಅಟ್ಯಾಚ್ ಮಾಡಿ.
  • ಭರ್ತಿ ಮಾಡಿದ ಅರ್ಜಿಯನ್ನು ಬ್ಯಾಂಕ್‌ಗೆ ಸಲ್ಲಿಸಿ.

ಕೊನೆಯ ಮಾತುಗಳೊಂದಿಗೆ ಲೇಖನ ಮುಕ್ತಾಯ:

ರಾಜ್ಯದ ಮಹಿಳೆಯರಿಗೆ ಪೂರ್ತಿ ಮಾಹಿತಿ ಈಗ ನಿಮಗೆ ಸಿಕ್ಕಿದೆ.

ಹಣದ ಕೊರತೆ ಇನ್ಮುಂದೆ ನಿಮ್ಮ ಸ್ಮಾಲ್ ಬಿಸಿನೆಸ್ ಕನಸಿಗೆ ಅಡ್ಡಿಯಾಗೋದಿಲ್ಲ. ಅನ್ನಪೂರ್ಣ ಯೋಜನೆ ನಿಮ್ಮಂತ ಮಹಿಳೆಯರಿಗೆ ಒಂದು ದೊಡ್ಡ ಬೆಂಬಲ ನೀಡಿದೆ.

ಈ ಯೋಜನೆಯ ಲಾಭ ಪಡೆದು, ನಿಮ್ಮ ಅಡುಗೆಯ ಕೈಚಳಕಕ್ಕೆ ಒಂದು ಹೊಸ ಬಿಸಿನೆಸ್ ಪ್ಲಾಟ್‌ಫಾರ್ಮ್ ನೀಡಿ.

ಇದನ್ನೂ ಓದಿ:

ತಮಿಳುನಾಡು ಮಹಿಳೆಯರಿಗೆ ಸಿಗಲಿದೆ ₹1,000: CM ವಿಜಯ್ ಆದೇಶ! – ಕಲೈನಾರ್ ಮಗಳೂರು ಉರಿಮೈ

PMJJBY: ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ! ಈ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿ

Leave a Comment