PMFBY: ಬೆಳೆ ವಿಮೆ ಯೋಜನೆಯಲ್ಲಿ ಬಿಗ್ ಅಪ್ಡೇಟ್! ರೈತರಿಗೆ ಹೊಸ ಸಪೋರ್ಟ್!

ರಾಜ್ಯದ ರೈತರಿಗೆ ಸಿಹಿ ಸುದ್ದಿ ಅಂದ್ರೆ ತಪ್ಪಾಗಲ್ಲ ರೈತ ಬಂದವರೇ ! ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಲ್ಲಿ (PMFBY) ಈಗ ಒಂದು ದೊಡ್ಡ ಬದಲಾವಣೆ ಬಂದಿದೆ.

ಬೆಳೆ ನಷ್ಟಕ್ಕೆ ರೈತರಿಗೆ ಎರಡು ಹೊಸ ತರದ ಕವರಿಂಗ್‌ಗಳನ್ನು ಸೇರಿಸಿದ್ದಾರೆ. ಇದು ರೈತರಿಗೆ ಒಂದು ದೊಡ್ಡ ರಿಲೀಫ್ ಕೊಡುತ್ತೆ ಅಂತ ಹೇಳಬಹುದು.

ಮುಖ್ಯವಾಗಿ ಕಾಡು ಪ್ರಾಣಿಗಳ ದಾಳಿಯಿಂದ ಆಗೋ ಬೆಳೆ ನಷ್ಟ ಮತ್ತು ಭತ್ತದ ಬೆಳೆಗೆ ಬರೋ ಪ್ರವಾಹದಿಂದ ಆಗೋ ನಷ್ಟಕ್ಕೆ ಈಗ ರೈತರಿಗೆ ವಿಮೆ ಸಿಗುತ್ತೆ.

ಇದರಿಂದ ನಮ್ಮ ರಾಜ್ಯದ, ಹಾಗು ದೇಶದ ಅನ್ನದಾತರಿಗೆ ಇನ್ನಷ್ಟು ಸೆಕ್ಯೂರಿಟಿ ಸಿಕ್ಕಂತಾಗಿದೆ ಆಗಿದೆ.

ಈ ಅಪ್‌ಡೇಟ್ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳೋಣ ಬನಿ.

ಕಾಡು ಪ್ರಾಣಿಗಳ ದಾಳಿಯಿಂದ ಬೆಳೆ ನಷ್ಟಕ್ಕೆ ಈಗ ಸಿಗಲಿದೆ ಪರಿಹಾರ

ನಮ್ಮ ರೈತರಿಗೆ ಒಂದುಕಡೆ ಹವಾಮಾನದ ಜೊತೆ ಹೋರಾಡ್ತಿದ್ರೆ, ಇನ್ನೊಂದ್ಕಡೆ ಕಾಡು ಪ್ರಾಣಿಗಳ ಕಟಾವು ಜಾಸ್ತಿಹಾಗ್ತಾ ಇದೆ.

ನೀಲಗಾಯಿ, ಕಾಡುಹಂದಿ, ಆನೆ, ಮಂಗಗಳ

ದಾಳಿಯಿಂದ ರೈತರ ಬೆಳೆಗಳು ನಾಶ ಆಗೋದು ಸಾಮಾನ್ಯ ಹಾಗಿದೆ .

ಬಹಳ ಹಿಂದೆ ಈ ತರಹದ ನಷ್ಟಗಳಿಗೆ ವಿಮೆ ಸಾಮಾನ್ಯವಾಗಿ ಇರ್ತಿರ್ಲಿಲ್ಲ.

ಆದ್ರೆ ಈಗ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಲ್ಲಿ (PMFBY) ಹೊಸದಾಗಿ ಈ ನಷ್ಟಗಳಿಗೂ ರೈತರಿಗೆ ಕವರಿಂಗ್ ಸಿಗ್ತಿದೆ ಅನೋದು ಬಹಳ ಖುಷಿ ವಿಚಾರ . 2026ರ ಮುಂಗಾರು (Kharif) ಸೀಸನ್‌ನಿಂದ ಇದು ಜಾರಿಗೆ ಬರುತ್ತೆ.

ಕರ್ನಾಟಕ ಮತ್ತು ಬೇರೆ ರಾಜ್ಯಗಳ ಪರಿಸ್ಥಿತಿ ಏನಾಗಿದೆ?

ಮಹಾರಾಷ್ಟ್ರದಲ್ಲಿ ಸೋಯಾಬೀನ್, ಹತ್ತಿ ಬೆಳೆಗೆ, ಮಂಗ, ಕಾಡುಹಂದಿ ಕಾಟ ಜಾಸ್ತಿ. ಅದೇ ರೀತಿ ನಮ್ಮ ಕರ್ನಾಟಕ ಮತ್ತು ಕೇರಳದಂತಹ ದಕ್ಷಿಣ ರಾಜ್ಯಗಳಲ್ಲಿ ರಬ್ಬರ್, ಬಾಳೆ ತೋಟಗಳಿಗೆ ಆನೆಗಳ ದಾಳಿ ಹೆಚ್ಚುತಲೇ ಇದೆ .

ಈ ತರಹದ ಪ್ರಾಣಿಗಳ ದಾಳಿಯಿಂದ ಸಾವಿರಾರು ರೂಪಾಯಿ ಬೆಳೆ ನಷ್ಟ ರೈತರಿಗೆ ಹಾಗುತಿದೆ.

ಈ ಹಿಂದೆ ಈ ತರಹದ ನಷ್ಟಕ್ಕೆ ಯಾವುದೇ ಸಪೋರ್ಟ್ ಸರ್ಕಾರದ ಕಡೆಯಿಂದ ಸಿಗ್ತಿರ್ಲಿಲ್ಲ, ರೈತರೇ ತಮ್ಮ ನಷ್ಟಕೆ ಅವರೇ ಹಣ ತುಂಬ ಬೇಕಿತು. ಆದ್ರೆ ಈಗ ಕೇಂದ್ರ ಸರ್ಕಾರ ರೈತರ ಈ ಕಷ್ಟಕ್ಕೆ ಸ್ಪಂದಿಸಿ, ವಿಮೆ ಕವರಿಂಗ್ ನೀಡಿದೆ.

ಇದು ನಿಜಕ್ಕೂ ಒಂದು ಗ್ರೀನ್ ಸಿಗ್ನಲ್ ಅಂತ ಹೇಳ್ಬೋದು.

ಭತ್ತದ ಬೆಳೆ ನಷ್ಠಕು ರೈತರಿಗೆ ಈಗ ಹೊಸ ಸಪೋರ್ಟ್

ಭತ್ತದ ಬೆಳೆ ಅಂದ್ರೆ ನಮಗೆ ಸರಿಯಾದ ನೀರು ಬೇಕು? ಅತಿಯಾದ ಮಳೆ, ಪ್ರವಾಹ ಬಂದಾಗ ಭತ್ತದ ಗದ್ದೆಗಳು ಸಂಪೂರ್ಣ ಮುಳುಗಿ ನೀರಿನಿಂದ ತೇಲುತ್ತೆ, ಇದರಿಂದ ರೈತರಿಗೆ ಬೆಳೆ ನಷ್ಟ ಆಗೋದು ಸಾಮಾನ್ಯ.

ಇಂತ ಕಷ್ಟ ಸನ್ನಿವೇಶಗಳಲ್ಲಿ ರೈತರು ಬಹಳ ಕಷ್ಟ ಪಡ್ತಾರೆ.

2018ರ ತನಕ ಈ ತರಹದ ನಷ್ಟಕ್ಕೆ ಸರ್ಕಾರದ ಕಡೆಯಿಂದ ವಿಮೆ ಇತ್ತು, ಆಮೇಲೆ ತೆಗೆದುಹಾಕಿದ್ರು.

ಈಗ ಪುನಃ, 2026ರ ಮುಂಗಾರು ಸೀಸನ್‌ನಿಂದ, ಪ್ರವಾಹದಿಂದಾಗೋ ಭತ್ತದ ಬೆಳೆ ನಷ್ಟಕ್ಕೂ PMFBY ಅಡಿಯಲ್ಲಿ ವಿಮೆ ಕವರಿಂಗ್ ಸಿಗುವಂತೆ ಮಾಡಿದರೆ.

ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಏನಿದು?

ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯನ್ನು (PMFBY) ದೇಶದಲ್ಲಿ 2016ರಲ್ಲಿ ಜಾರಿಗೆ ಬಂದಿದ್ತು.

ಇದರ ಮುಖ್ಯ ಉದ್ದೇಶ ಏನ್ ಅಂದ್ರೆ, ನೈಸರ್ಗಿಕ ವಿಕೋಪಗಳಿಂದ ಅಥವಾ ಬೇರೆ ಕಾರಣಗಳಿಂದ ಬೆಳೆ ನಷ್ಟ ಆದಾಗ ರೈತರಿಗೆ ಫೈನಾನ್ಸಿಯಲ್ ಸಪೋರ್ಟ್ ಕೊಡೋದು ಈ ಯೋಜನೆಯ ಉದ್ದೇಶ.

ರೈತರ ಇನ್‌ಕಮ್ ಸ್ಥಿರವಾಗಿ ಇಡೋಕೆ ಸಹಾಯ ಮಾಡೋದು.

ಇದು ‘ಸೆಂಟ್ರಲಿ ಸ್ಪಾನ್ಸರ್ಡ್ ಸ್ಕೀಮ್‘, ಅಂದ್ರೆ ಯೋಜನೆಯ ಖರ್ಚು-ವೆಚ್ಚಗಳು, ಅಂದ್ರೆ ಪ್ರೀಮಿಯಂ ಖರ್ಚು ಮತ್ತು ಅನುಷ್ಟಾನದ ಖರ್ಚು ಎರಡನ್ನೂ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಒಟ್ಟಾಗಿ ಹಂಚಿಕೊಳುತಿದ್ದಾರೆ.

ರೈತರಿಗೆ ಪ್ರೀಮಿಯಂ ಮತ್ತು ಸರ್ಕಾರದ ಪಾಲು ಹೇಗಿರುತ್ತೆ

  • ಮುಂಗಾರು (Kharif) ಬೆಳೆಗಳಿಗೆ – ಸರ್ಕಾರದಿಂದ ಶೇ. 2
  • ಹಿಂಗಾರು (Rabi) ಬೆಳೆಗಳಿಗೆ – ಸರ್ಕಾರದಿಂದ ಶೇ. 1.5
  • ವಾಣಿಜ್ಯ (Commercial) ಮತ್ತು ತೋಟಗಾರಿಕೆ (Horticulture) ಬೆಳೆಗಳಿಗೆ – ಸರ್ಕಾರದಿಂದ ಶೇ. 5

ರೈತರಿಗೆ ಬೆಳೆ ನಷ್ಟದ ಸಂಪೂರ್ಣ ವ್ಯಾಪ್ತಿ

  • ಬೆಳೆ ಬಿತ್ತುವ ಮುನ್ನ (Pre-sowing), ಹವಾಮಾನ ಕಾರಣಗಳಿಂದ ಬಿತ್ತನೆ ಮಾಡಲಾಗದೇ ಇರೋ ಸನ್ನಿವೇಶಗಳು.
  • ನಾಟಿ ಮಾಡಿದಾಗಿನಿಂದ ಕೊಯ್ಲುವರೆಗಿನ ನಷ್ಟಗಳು.
  • ಕೊಯ್ಲು ನಂತರದ (Post-harvest) ನಷ್ಟಗಳು.
  • ಸ್ಥಳೀಯ ವಿಪತ್ತುಗಳು (Localized calamities) ಅಂದ್ರೆ ಭೂಕುಸಿತ, ಆಲಿಕಲ್ಲು ಮಳೆ.
  • ಈಗ ಪ್ರವಾಹದಿಂದ ಆಗೋ ನಷ್ಟವನ್ನೂ ಇದೇ ಕ್ಯಾಟಗರಿಯಲ್ಲಿ ಈಗ ಸರ್ಕಾರ ಸೇರಿಸಿದ್ದಾರೆ.

ಇದು ರೈತರಿಗೆ ಸಂಪೂರ್ಣ ರಕ್ಷಣೆ ನೀಡುತದೆ.

ಕಾಡು ಪ್ರಾಣಿ ದಾಳಿ ನಷ್ಟಕ್ಕೆ ವರದಿ ಮತ್ತು ಪರಿಶೀಲನೆ ಯಾವರೀತಿ ಇರುತ್ತೆ

ಕಾಡು ಪ್ರಾಣಿಗಳಿಂದ ಆಗೋ ಬೆಳೆ ನಷ್ಟಕ್ಕೆ ಪರಿಹಾರ ಹೇಗೆ ಸಿಗುತ್ತೆ ಅಂತ ಇಲ್ಲಿ ನಾವು ನೋಡೋದಾದ್ರೆ, ಇದು ‘ಸೆಂಟ್ರಲಿ ಸ್ಪಾನ್ಸರ್ಡ್ ಸ್ಕೀಮ್’ ನಮ್ಮ ಆಗಿರೋದ್ರಿಂದ ರಾಜ್ಯ ಸರ್ಕಾರಗಳ ಪಾತ್ರ ಮುಖ್ಯ.

ಯಾವ ಜಿಲ್ಲೆಗಳಲ್ಲಿ ಯಾವ ಪ್ರಾಣಿಗಳ ದಾಳಿ ಜಾಸ್ತಿ ಅನ್ನೋದನ್ನ ರಾಜ್ಯದ ಅಧಿಕಾರಿಗಳೇ ಪತ್ತೆಮಾಡಬೇಕು . ಬೆಳೆ ನಷ್ಟ ಅದರೆ, ಸಂಬಂಧ ಪಟ ರೈತರು 72 ಗಂಟೆಗಳ ಒಳಗಾಗಿ ರಿಪೋರ್ಟ್ ಮಾಡಬೇಕು.

ಜಿಯೋ-ಟ್ಯಾಗ್ಡ್ (Geo-tagged) ಫೋಟೋಗಳನ್ನು ಅಪ್‌ಲೋಡ್ ಮಾಡೋ ಮೂಲಕ ನಷ್ಟವನ್ನು ದಾಖಲಿಸಬಹುದು.

ನಂತರ ಸಂಬಂಧ ಪಟ ಅಧಿಕಾರಿಗಳು ವೆರಿಫೈ ಮಾಡಿ, ನಂತರ ರೈತರಿಗೆ ಪರಿಹಾರ ಕೊಡುಸುವ ಹಾಗೆ ಮಾಡುತಾರೆ.

ಕೊನೆಯ ಮಾತುಗಳೊಂದಿಗೆ ಲೇಖನ ಮುಕ್ತಾಯ:

ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಲ್ಲಿ (PMFBY) ಆಗಿರುವ ಈ ಯೋಜನೆ ಅಲ್ಲಿ ಹಾಗಿರೋ ಹೊಸ ಬದಲಾವಣೆಗಳು ನಿಜಕ್ಕೂ ನಮ್ಮ ರೈತ ಸಮುದಾಯಕ್ಕೆ ಒಂದು ದೊಡ ಬಲ ತಂದಿದೆ.

ಕಾಡು ಪ್ರಾಣಿಗಳ ದಾಳಿ ಮತ್ತು ಕ್ಲೈಮೇಟ್ ಎಫೆಕ್ಟ್ ಗಳಿಂದ ಬೆಳೆ ನಷ್ಟಕ್ಕೆ ಸಿಗುವ ವಿಮೆ ರೈತರ ಆದಾಯವನ್ನು ಚೆನ್ನಾಗಿರಿಸುವುದಕೆ ಸಹಾಯ ಮಾಡುತ್ತೆ.

ಇದನ್ನೂ ಓದಿ:

ಅನ್ನಪೂರ್ಣ ಯೋಜನೆಯಿಂದ ₹50,000 ಸಾಲ ಪಡೆಯಬಹುದು – ನಿಮ್ಮ ಫುಡ್ ಬಿಸಿನೆಸ್‌ ಇದ್ದರೆ ಗೋಲ್ಡನ್ ಒಪ್ಪೋರ್ಚುನಿಟಿ

ತಮಿಳುನಾಡು ಮಹಿಳೆಯರಿಗೆ ಸಿಗಲಿದೆ ₹1,000: CM ವಿಜಯ್ ಆದೇಶ! – ಕಲೈನಾರ್ ಮಗಳೂರು ಉರಿಮೈ

Leave a Comment