ಯುವನಿಧಿ ಯೋಜನೆ: ಸಚಿವ ಶರಣ್ ಪ್ರಕಾಶ್ ಪಾಟೀಲ್ ಏನ್ ಹೇಳ್ತಾರೆ?

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬಂದು ಈಗಲೇ 3 ವರುಷಗಳು ಹಾಗಿದೆ ಯುವನಿಧಿ ಯೋಜನೆ ಬಗ್ಗೆ ಸಾಕಷ್ಟು ಚರ್ಚೆ ನಡೀತಾನೇ ಇದೆ. ನಿರುದ್ಯೋಗಿ ಯುವಕರಿಗೆ ಫೈನಾನ್ಸಿಯಲ್ ಸಪೋರ್ಟ್ ಕೊಡುವ ಈ ಯೋಜನೆ ಎಷ್ಟರಮಟ್ಟಿಗೆ ವಿದ್ಯಾರ್ಥಿಗಳಿಗೆ ತಲುಪಿದೆ? ಎಂಬ ಪ್ರಶೆ ಜನಗಳಿಗೆ ಇದೆ.

ಇದರಲ್ಲಿ ಏನೆಲ್ಲಾ ಸವಾಲುಗಳಿವೆ ಅನ್ನೋ ಬಗ್ಗೆ ಸಾಕಷ್ಟು ಮಾತುಕತೆ ಕೂಡ ಇದೆ. ಈ ಎಲ್ಲಾ ಗೊಂದಲಗಳಿಗೆ ನಮ್ಮ ಕೌಶಲ್ಯ ಅಭಿವೃದ್ಧಿ ಸಚಿವರಾದ ಶರಣ್ ಪ್ರಕಾಶ್ ಪಾಟೀಲ್ ಅವರು ಬೆಳಗಾವಿ ವಾಯ್ಸ್‌ಗೆ ಉತ್ತರ ಕೊಟ್ಟಿದ್ದಾರೆ.

ಯುವನಿಧಿ ಯೋಜನೆ, ಯುವನಿಧಿ ಪ್ಲಸ್ ಮೂಲಕ ಕೌಶಲ್ಯ ಅಭಿವೃದ್ಧಿ, ಹಾಗೂ ಉದ್ಯೋಗ ಸೃಷ್ಟಿಯ ಬಗ್ಗೆ ಅವರು ಏನೆಲ್ಲಾ ಹೇಳಿದ್ದಾರೆ ಅಂತ ಡೀಟೈಲ್ ಹಾಗಿ ಇಲ್ಲಿ ನಿಮಗೆ ತಿಳಿಸಿಕೊಡುತೀವಿ.

ಈ ಯುವನಿಧಿ ಯೋಜನೆ ಪಂಚ ಗ್ಯಾರಂಟಿ ಅಲ್ಲಿ ಒಂದು

ರಾಜ್ಯ ಸರ್ಕಾರ ಕೊಟ್ಟ ಪಂಚ ಗ್ಯಾರಂಟಿಗಳಲ್ಲಿ ಯುವನಿಧಿ ಯೋಜನೆಯೂ ಒಂದು ಆದರೆ ಈ ಒಂದರಿಂದ ಮಾತ್ರ ವಿದ್ಯಾರ್ಥಿ ಗಳಿಗೆ ಸರಿಯಾಗಿ ಹಣ ಬರುತಿಲ್ಲ ಎಂದು ವಿದ್ಯಾರ್ಥಿ ಗಳ ಆಕ್ರೋಶ. ನಿರುದ್ಯೋಗಿ ಪದವೀಧರರು ಮತ್ತು ಡಿಪ್ಲೊಮಾ ಮಾಡಿದ ಯುವಕರಿಗೆ ಆರ್ಥಿಕ ನೆರವು ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶ.

ಮೂರು ವರ್ಷ ತುಂಬಿದ ಈ ಸರ್ಕಾರ ಈ ಯೋಜನೆಯನ್ನ ಯಶಸ್ವಿಯಾಗಿ ಜಾರಿಗೆ ತಂದಿದೆ ಅಂತ ಕೌಶಲ್ಯ ಅಭಿವೃದ್ಧಿ ಸಚಿವ ಶರಣ್ ಪ್ರಕಾಶ್ ಪಾಟೀಲ್ ಹೇಳಿದ್ದಾರೆ. ಯುವಕರಿಗೆ ಭರವಸೆ ಮೂಡಿಸುವ ನಿಟ್ಟಿನಲ್ಲಿ ಈ ಯೋಜನೆ ಒಂದು ಮಹತ್ವದ ಹೆಜ್ಜೆಯಾಗಿದೆ ಎಂದು ಕೂಡ ಹೇಳಿದರೆ.

ವಿದ್ಯಾರ್ಥಿಗಳಿಗೆ ಹಣ DBT ಮೂಲಕ ವರ್ಗಾವಣೆ

ಯುವನಿಧಿ ಯೋಜನೆ ಇಂದ ಹಣ ಸರಿಯಾಗಿ ಎಲ್ಲರಿಗೂ ತಲುಪುತ್ತಿಲ್ಲ ಅನ್ನೋ ಪ್ರಶ್ನೆಗೆ ಸಚಿವ ಶರಣ್ ಪ್ರಕಾಶ್ ಪಾಟೀಲ್ ಉತ್ತರ ಕೊಟ್ಟಿದ್ದಾರೆ.

ನಮ್ಮಲ್ಲಿ ಎಷ್ಟು ಜನ ಎನ್ರೋಲ್ ಆಗಿದ್ದಾರೆ, ಯಾರು ಎಲಿಜಿಬಲ್ ಇದ್ದಾರೆ, ಎಲ್ಲರಿಗೂ ಡೈರೆಕ್ಟ್ ಆಗಿ ಅವರ ಬ್ಯಾಂಕ್ ಅಕೌಂಟ್‌ಗೆ ಹಣ ವರ್ಗಾವಣೆ (DBT) ಆಗ್ತಾ ಇದೆ. ಇದ್ರಲ್ಲಿ ಯಾವ ಸಮಸ್ಯೆಯೂ ಇಲ್ಲ

ಅಂತ ಅವರು ಹೇಳಿದ್ದಾರೆ.

ಈಗಾಗ್ಲೇ ಸುಮಾರು 3.38 ಲಕ್ಷ ಯುವಕರ ಬ್ಯಾಂಕ್ ಅಕೌಂಟ್ ಗೆ ಹಣ ತಲುಪಿದೆ ಎಂದು ಶರಣ್ ಪ್ರಕಾಶ್ ಪಾಟೀಲ್ ಹೇಳಿದ್ದಾರೆ. ಯಾವ ಎಲ್ಲ ವಿದ್ಯಾರ್ಥಿಗಳು ಸರಿಯಾಗಿ ತಮ್ಮ ವಿದ್ಯಾಭ್ಯಾಸದ ದಾಖಲೆಗಳನ್ನು ಸಲ್ಲಿಕೆ ಮಾಡಿದವರಿಗೆಲ್ಲಾ ಯಾವುದೇ ಅಡೆತಡೆ ಇಲ್ಲದೆ ಹಣ ಸಿಗುತ್ತಿದೆ.

ನೋಂದಣಿ ವಿಳಂಬ, ಮತ್ತು ಕಾರ್ಯನಿರ್ವಹಣೆ ಸಮಸ್ಯೆಗಳಿಗೆ ಉತ್ತರ

ನೋಂದಣಿ ಪ್ರಕ್ರಿಯೆ ನಿಧಾನ ಆಗ್ತಿದೆ, ಯೋಜನೆ ಸಮರ್ಪಕವಾಗಿ ಕಾರ್ಯನಿರ್ವಹಿಸ್ತಿಲ್ಲ ಅನ್ನೋ ಆರೋಪಗಳ ಬಗ್ಗೆನೂ ಸಚಿವರನ್ನು ಪ್ರಶ್ನೆ ಮಾಡಿದಾಗ, ಈ ಪ್ರಶ್ನೆ ಗು ಕೂಡ ಅವರು ಉತ್ತರ ನೀಡಿದರೆ.

ಇದ್ರಲ್ಲಿ ಯಾವ ಸಮಸ್ಯೆಯೂ ಇಲ್ಲ ಅಂತ ಅವರು ಸ್ಪಷ್ಟಪಡಿಸಿದ್ದಾರೆ”.

ಯುವನಿಧಿ ಅಡಿಯಲ್ಲಿ ಹಣ ಕೊಡೋದು ಒಂದು ಭಾಗವಾದ್ರೆ, ಯುವಕರಿಗೆ ಉದ್ಯೋಗಕ್ಕೆ ಬೇಕಾದ ಕೌಶಲ್ಯಗಳನ್ನು ಕೊಡೋದೂ ನಮ್ಮ ಮುಖ್ಯ ಗುರಿ.

ಅದಕ್ಕಾಗಿ ಯುವನಿಧಿ ಪ್ಲಸ್ ಕಾರ್ಯಕ್ರಮ ಇದೆ ಅಂತ ಸಚಿವರು ತಿಳಿಸಿದ್ದಾರೆ. ಭರವಸೆ ನೀಡಿದಂತೆ ಹಣ ತಲುಪಿಸುವ ಕೆಲಸ ಆಗ್ತಿದೆ ಎಂದು ಹೇಳಿದ್ದಾರೆ.

ಯುವನಿಧಿ ಪ್ಲಸ್ ಅಂದ್ರೆ ಏನು?

ಯುವನಿಧಿ ಯೋಜನೆಯ ಪ್ರಮುಖ ಭಾಗವಾಗಿ ‘ಯುವನಿಧಿ ಪ್ಲಸ್’ ಕಾರ್ಯಕ್ರಮವನ್ನ ಸಚಿವರು ಈಗ ಪರಿಚಯಿಸಿದ್ದಾರೆ.

ಈ ಪ್ಲಾನ್ ಮೂಲಕ ನಿರುದ್ಯೋಗಿ ಯುವಕರಿಗೆ ಉದ್ಯೋಗಕ್ಕೆ ಬೇಕಾದ ಅಡಿಷನಲ್ ಸ್ಕಿಲ್ಸ್ (Employable Skills) ಅನ್ನು ಫ್ರೀ ಆಫ್ ಕಾಸ್ಟ್ (ಉಚಿತವಾಗಿ) ಹೇಳಿ ಕೊಡಲಾಗುತ್ತೆ.

ರಾಜ್ಯದ ಯುವಕರಿಗೆ ಸಚಿವರ ಮನವಿ ಏನೆಂದರೆ, ಯುವನಿಧಿಯಲ್ಲಿ ಎನ್ರೋಲ್ ಆಗಿರುವ ಎಲ್ಲರೂ ಯುವನಿಧಿ ಪ್ಲಸ್‌ನಲ್ಲಿ ಅಡಿಷನಲ್ ಸ್ಕಿಲ್ಸ್ ಕಲಿಯೋದಕ್ಕೆ ಮುಂದೆ ಬರುವ ವಿದ್ಯಾರ್ಥಿಗಳಿಗೆ, ನಮ್ಮ ಇಲಾಖೆ ಉದ್ಯೋಗ ಕೊಡಿಸೋದಕ್ಕೆ ಎಲ್ಲಾ ಪ್ರಯತ್ನ ಮಾಡುತ್ತದೆ ಎಂದು ಹೇಳಿದ್ದಾರೆ.

ವಿದ್ಯಾರ್ಥಿಗಳಿಗೆ ಉದ್ಯೋಗ ಸೃಷ್ಟಿ ಮಾಡುವುದು ಸರ್ಕಾರದ ಬದ್ಧತೆ

ಕೇವಲ ಹಣ ಕೊಡೋದು ಒಂದೇ ಪರಿಹಾರ ಅಲ್ಲ, ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನ ಆದಷ್ಟು ಶೀಘ್ರ ಭರ್ತಿ ಮಾಡೋದು ಸರ್ಕಾರದ ಕೆಲಸ ಅನ್ನೋ ವಾದಕ್ಕೆ ಸಚಿವರು ಇಲ್ಲಿ ಹೇಳಿದ್ದಾರೆ.

ನಮ್ಮ ಸರ್ಕಾರ ಈಗಾಗಲೇ 40 ಸಾವಿರಕ್ಕಿಂತ ಹೆಚ್ಚು ಪೋಸ್ಟ್ ಗಳನ್ನು ಭರ್ತಿ ಮಾಡಿದೆ. ಈ ವರ್ಷ 50 ಸಾವಿರ ಹುದ್ದೆಗಳನ್ನು ಭರ್ತಿ ಮಾಡೋದಾಗಿ ಮಾನ್ಯ ಮುಖ್ಯಮಂತ್ರಿಗಳು ಅನೌನ್ಸ್ ಮಾಡಿದ್ದಾರೆ. ಒಟ್ಟಾಗಿ ಒಂದು ಲಕ್ಷಕ್ಕೂ ಹೆಚ್ಚು ಹುದ್ದೆಗಳನ್ನ ಭರ್ತಿ ಮಾಡುವ ಗುರಿ ನಮ್ಮ ಕಾಂಗ್ರೆಸ್ ಸರ್ಕಾರಕ್ಕಿದೆ ಎಂದು ಅವರು ಹೇಳಿದ್ದಾರೆ.

ಮುಂದಿನ ವರ್ಷವೂ ಹುದ್ದೆ ಭರ್ತಿ ಮುಂದುವರಿಕೆ ಹಾಗುತ್ತೆ

ಸರ್ಕಾರ ಅಧಿಕಾರಕ್ಕೆ ಬಂದಾಗ ಎಲ್ಲಾ ಖಾಲಿ ಹುದ್ದೆಗಳನ್ನು ಪೂರ್ಣವಾಗಿ ಭರ್ತಿ ಮಾಡ್ತೇವೆ ಅಂತ ಹೇಳಿತ್ತು, ಮೂರು ವರ್ಷದಲ್ಲಿ ಕೇವಲ 55 ಸಾವಿರ ಸಾಕಾ ಎಂದು ಪ್ರಶ್ನೆ ಕೇಳಿದಾಗ?

ಪ್ರಶ್ನೆಗೆ ಸಚಿವರು ಸ್ಪಷ್ಟನೆ ನೀಡಿದ್ದಾರೆ.

ನಾವು ಈಗಾಗ್ಲೇ 40 ಸಾವಿರಕ್ಕಿಂತ ಜಾಸ್ತಿ ಮಾಡಿದ್ದೀವಿ, ಅಡಿಷನಲ್ 50 ಸಾವಿರ ಈ ವರ್ಷ ಭರ್ತಿ ಮಾಡ್ತಾ ಇದ್ದೀವಿ. ಸುಮಾರು ಒಂದು ಲಕ್ಷಕ್ಕಿಂತ ಜಾಸ್ತಿ ಹುದ್ದೆಗಳನ್ನ ಭರ್ತಿ ಆಗುತ್ತೆ ಎಂದು ಭರವಸೆ ನೀಡಿದರೆ. ಮುಂದಿನ ವರ್ಷನು ಅಂದರೆ (೨೦೨೭) ಕೂಡ ಇದೇ ರೀತಿ ಹುದ್ದೆಗಳನ್ನ ಭರ್ತಿ ಮಾಡುವ ಉದ್ದೇಶ ಇದೆ

ಎಂದು ಅವರು ತಿಳಿಸಿದ್ದಾರೆ.

ಇದನ್ನು ಓದಿ:

PGCET 2026: MBA, MCA ಎಕ್ಸಾಮ್ ದಿನಾಂಕ ಮುಂದೂಡಿಕೆ! ಹೊಸ ಅಪ್ಡೇಟ್ KEA ಇಂದ

PGCET 2026: ಅಡ್ಮಿಟ್ ಕಾರ್ಡ್ ಸಿಕ್ತ? ಎಕ್ಸಾಮ್ ಬಗ್ಗೆ ಫುಲ್ ಡೀಟೇಲ್ಸ್!

Leave a Comment