ನಿಮ್ಮ ಮಗಳಿಗೆ ₹69 ಲಕ್ಷ ಕೊಡಿ: ಸುಕನ್ಯಾ ಸಮೃದ್ಧಿ ಯೋಜನೆ ಹೇಗೆ ಕೆಲಸ ಮಾಡುತ್ತದೆ – ಸಂಪೂರ್ಣ ಮಾಹಿತಿ..!

ಮನೆಯಲ್ಲಿ ಅಕ್ಕ-ತಂಗಿ, ಮಗಳು ಅಥವಾ ಮೊಮ್ಮಗಳು ಯಾರಾದರೂ ಹೆಣ್ಣು ಮಗು ಇದ್ದಾರಾ?

ಅವರ ಭವಿಷ್ಯದ ಬಗ್ಗೆ ದೊಡ್ಡ ಕನಸು ಕಟ್ಟಿಕೊಂಡಿದ್ದೀರಾ? ಹಾಗಿದ್ರೆ, ಕೇಂದ್ರ ಸರ್ಕಾರದ ಸುಕನ್ಯಾ ಸಮೃದ್ಧಿ ಯೋಜನೆ (SSY) ನಿಮ್ಮೆಲ್ಲಾ ಕನಸುಗಳಿಗೆ ಆಧಾರ ಆಗಬಹುದು.

ಇಲ್ಲಿ ನೀವು ಸಣ್ಣ ಹೂಡಿಕೆ ಮಾಡಿದ್ರೆ, ನಿಮ್ಮ ಹೆಣ್ಣು ಮಗುವಿಗೆ ದೊಡ್ಡ ಮೊತ್ತದ ಹಣ ಸಿಗೋದ್ರಲ್ಲಿ ಡೌಟ್ ಇಲ್ಲ.

ಈ ಯೋಜನೆಯ ಡೀಟೇಲ್ಸ್, ಎಷ್ಟು ಹೂಡಿಕೆ ಮಾಡಬೇಕು, ಹೇಗೆ ಇನ್ವೆಸ್ಟ್ ಮಾಡೋದು, ಎಲ್ಲಾ ಮಾಹಿತಿ ಇಲ್ಲಿ ಸಿಗುತ್ತೆ.

ನಿಮ್ಮ ಸಣ್ಣ ಉಳಿತಾಯ ಹೇಗೆ 69 ಲಕ್ಷ ಆಗಿ ಬದಲಾಗುತ್ತೆ ಅನ್ನೋದನ್ನ ಪ್ರಾಕ್ಟಿಕಲ್ ಆಗಿ ತಿಳಿಸ್ತೀವಿ, ಮಿಸ್ ಮಾಡ್ಕೋಬೇಡಿ.

ಸುಕನ್ಯಾ ಸಮೃದ್ಧಿ ಯೋಜನೆ ಅಂದ್ರೆ ಏನು?

ನಮ್ಮ ದೇಶದಲ್ಲಿ ಹೆಣ್ಣು ಮಕ್ಕಳು ಎಲ್ಲಾ ಕ್ಷೇತ್ರದಲ್ಲೂ ಮಿಂಚುತ್ತಿದ್ದಾರೆ, ಆದರೂ ಕೆಲವಡೆ ಅವರಿಗೆ ಸರಿಯಾದ ಶಿಕ್ಷಣ ಸಿಗಲ್ಲ.

ಇದನ್ನ ಮನಗಂಡು ಪ್ರಧಾನಿ ನರೇಂದ್ರ ಮೋದಿಯವರು “ಬೇಟಿ ಬಚಾವೋ, ಬೇಟಿ ಪಡಾವೋ” ಅಭಿಯಾನ ಶುರು ಮಾಡಿದ್ರು.

ಇದರ ಅಡಿಯಲ್ಲಿ, ಹೆಣ್ಣು ಮಕ್ಕಳ ಭವಿಷ್ಯ ಭದ್ರವಾಗಲಿ ಅಂತ ಸುಕನ್ಯಾ ಸಮೃದ್ಧಿ ಯೋಜನೆಯನ್ನ (SSY) ಜಾರಿಗೆ ತಂದರು. ಈ ಸ್ಕೀಮ್ ಹೆಣ್ಣು ಮಕ್ಕಳಿಗಾಗಿಯೇ ಇರುವಂತಹ ಅತ್ಯುತ್ತಮ ಇನ್ವೆಸ್ಟ್ಮೆಂಟ್ ಆಪ್ಷನ್.

ಯಾರಿಗೆ ಸಿಗುತ್ತೆ ಈ ಯೋಜನೆಯ ಲಾಭ? ಅರ್ಹತೆಗಳು ಏನೇನು?

ಈ ಸುಕನ್ಯಾ ಸಮೃದ್ಧಿ ಯೋಜನೆಯ ಲಾಭ ಹೆಣ್ಣು ಮಕ್ಕಳಿಗೆ ಮಾತ್ರ ಸಿಗುತ್ತೆ.

ಮಗು ಹುಟ್ಟಿದಾಗಿನಿಂದ 10 ವರ್ಷ ಆಗೋ ಒಳಗೆ ನೀವು ಅವರ ಹೆಸರಲ್ಲಿ ಈ ಅಕೌಂಟ್ ಓಪನ್ ಮಾಡಬೇಕು.

ಅಂದ್ರೆ, 10 ವರ್ಷ 1 ದಿನ ಆದರೂ ಅಕೌಂಟ್ ತೆರೆಯೋಕೆ ಆಗಲ್ಲ.

10 ವರ್ಷದೊಳಗಿನ ಮಕ್ಕಳ ಭವಿಷ್ಯಕ್ಕೆ ಅಂತಲೇ ಈ ಯೋಜನೆ ಇರೋದು.

ಒಮ್ಮೆ ಅಕೌಂಟ್ ಓಪನ್ ಆದ್ರೆ, ಮಗುವಿಗೆ 21 ವರ್ಷ ಆಗೋವರೆಗೂ ಇದರಲ್ಲಿ ಸೇವಿಂಗ್ಸ್ ಮಾಡಬಹುದು, ಮೆಚುರಿಟಿ ಆದ್ಮೇಲೆ ಸಂಪೂರ್ಣ ಹಣ ವಿಥ್‌ಡ್ರಾ ಮಾಡಬಹುದು.

ಎಷ್ಟು ಹೆಣ್ಣು ಮಕ್ಕಳ ಹೆಸರಲ್ಲಿ ಅಕೌಂಟ್ ಓಪನ್ ಮಾಡಬಹುದು?

ನಿಮಗೆ ಇಬ್ಬರು ಹೆಣ್ಣು ಮಕ್ಕಳಿದ್ರೆ ಏನಪ್ಪಾ ಮಾಡೋದು ಅಂತ ಯೋಚಿಸ್ತಿದ್ದೀರಾ?

ಡೋಂಟ್ ವರಿ, ಒಂದು ಫ್ಯಾಮಿಲಿಗೆ ಎರಡು ಅಕೌಂಟ್ ಓಪನ್ ಮಾಡೋಕೆ ಅವಕಾಶ ಇದೆ.

ಅಂದ್ರೆ, ಎರಡು ಹೆಣ್ಣು ಮಕ್ಕಳ ಹೆಸರಲ್ಲಿ ಹೂಡಿಕೆ ಮಾಡಬಹುದು.

ಒಂದು ವೇಳೆ ಅವಳಿ ಅಥವಾ ಜವಳಿ ಹೆಣ್ಣು ಮಕ್ಕಳಿದ್ರೆ, ಅವರಿಗೆ ಮೂರನೇ ಹೆಣ್ಣು ಮಗುವಿನ ಅಕೌಂಟ್ ಕೂಡ ಓಪನ್ ಮಾಡೋ ಅವಕಾಶ ಇರುತ್ತೆ.

ಅಷ್ಟೇ ಅಲ್ಲ, ನೀವು ಮಗುವಿನ ಲೀಗಲ್ ಗಾರ್ಡಿಯನ್ ಆಗಿದ್ರೂ ಕೂಡ, ಮಗುವಿನ ಹೆಸರಲ್ಲಿ ಈ ಯೋಜನೆಯಲ್ಲಿ ಹೂಡಿಕೆ ಮಾಡೋಕೆ ಸಾಧ್ಯವಿದೆ.

ಕನಿಷ್ಠ ಮತ್ತು ಗರಿಷ್ಠ ಹೂಡಿಕೆ ಮೊತ್ತ ಎಷ್ಟು?

ಈ ಯೋಜನೆಯಲ್ಲಿ ಹೂಡಿಕೆ ಮಾಡೋದು ತುಂಬಾನೇ ಫ್ಲೆಕ್ಸಿಬಲ್.

ಒಂದು ವರ್ಷಕ್ಕೆ ಕನಿಷ್ಠ 250 ರೂಪಾಯಿಂದ ಶುರು ಮಾಡಬಹುದು.

ಗರಿಷ್ಠ 1.5 ಲಕ್ಷ ರೂಪಾಯಿ (ಒಂದೂವರೆ ಲಕ್ಷ) ವರೆಗೂ ಹೂಡಿಕೆ ಮಾಡೋಕೆ ಅವಕಾಶ ಇದೆ.

ನೀವು ಪ್ರತಿ ವರ್ಷವೂ ಒಂದೇ ಮೊತ್ತ ಹಾಕ್ಬೇಕು ಅಂತ ಏನೂ ಇಲ್ಲ.

ಈ ವರ್ಷ 5000 ಹಾಕಿದ್ರೆ, ಮುಂದಿನ ವರ್ಷ 50,000 ಹಾಕಬಹುದು ಅಥವಾ 1.5 ಲಕ್ಷ ಕೂಡ ಹಾಕಬಹುದು.

ಆದ್ರೆ, ವರ್ಷಕ್ಕೆ 250 ರೂಪಾಯಿಗಿಂತ ಕಡಿಮೆ ಹಾಕೋ ಹಾಗಿಲ್ಲ ಅನ್ನೋದು ಮಾತ್ರ ರೂಲ್.

ಎರಡು ಅಕೌಂಟ್ ಇದ್ರೆ, ಗರಿಷ್ಠ 3 ಲಕ್ಷದವರೆಗೆ ಹೂಡಿಕೆ ಮಾಡಬಹುದು.

ಹೂಡಿಕೆ ಮಿಸ್ ಆದ್ರೆ ಏನಾಗುತ್ತೆ?

ಅಪ್ಪಿತಪ್ಪಿ ಒಂದ್ಸಲ ವರ್ಷದ ಕಂತು ಕಟ್ಟೋಕೆ ಮರೆತಿದ್ರಾ? ಟೆನ್ಶನ್ ಬೇಡ.

ಒಂದು ವರ್ಷದ ಕಂತು ಮಿಸ್ ಆದ್ರೆ, ಕೇವಲ 50 ರೂಪಾಯಿ ಫೈನ್ ಕಟ್ಟಿದ್ರೆ ಸಾಕು.

ಅದನ್ನ ಪ್ಲಾನ್ ಮಾಡಿರೋ ಪೋಸ್ಟ್ ಆಫೀಸ್ ಅಥವಾ ಬ್ಯಾಂಕ್‌ನಲ್ಲಿ ಕಟ್ಟಿ ಅಕೌಂಟ್ ಆಕ್ಟಿವ್ ಮಾಡಿಸಬಹುದು.

ಹಾಗೇ ಎರಡು ವರ್ಷ ಮಿಸ್ ಆದ್ರೆ 100 ರೂಪಾಯಿ, ಮೂರು ವರ್ಷ ಮಿಸ್ ಆದ್ರೆ 150 ರೂಪಾಯಿ ಫೈನ್ ಇರುತ್ತೆ.

ಅಂದ್ರೆ, ಪ್ರತಿ ಮಿಸ್ ಆದ ವರ್ಷಕ್ಕೆ 50 ರೂಪಾಯಿ ಫೈನ್ ಕಟ್ಟಿ ನಿಮ್ಮ ಹೂಡಿಕೆಯನ್ನ ಮತ್ತೆ ಮುಂದುವರಿಸೋಕೆ ಅವಕಾಶ ಇರುತ್ತೆ.

ಎಲ್ಲಿ ಅಕೌಂಟ್ ತೆರೆಯಬಹುದು? ಟ್ರಾನ್ಸ್ಫರ್ ಮಾಡಬಹುದಾ?

ಸುಕನ್ಯಾ ಸಮೃದ್ಧಿ ಯೋಜನೆ ಅಕೌಂಟ್ ಓಪನ್ ಮಾಡೋಕೆ ಹಲವಾರು ಆಪ್ಷನ್ಸ್ ಇವೆ.

ನೀವು ಪೋಸ್ಟ್ ಆಫೀಸ್, ಎಲ್ಲಾ ಪಬ್ಲಿಕ್ ಸೆಕ್ಟರ್ ಬ್ಯಾಂಕ್‌ಗಳು (ಉದಾ: SBI, Canara Bank) ಮತ್ತು ಕೆಲವು ಆಯ್ದ ಪ್ರೈವೇಟ್ ಬ್ಯಾಂಕ್‌ಗಳಲ್ಲಿ (ಉದಾ: ICICI, HDFC) ಅಕೌಂಟ್ ತೆರೆಯಬಹುದು.

ಆನ್‌ಲೈನ್ ಮೂಲಕವೂ ಇನ್ವೆಸ್ಟ್ ಮಾಡೋಕೆ ಅವಕಾಶ ಇದೆ. ಅಷ್ಟೇ ಅಲ್ಲ, ನೀವು ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಶಿಫ್ಟ್ ಆದ್ರೆ, ನಿಮ್ಮ SSY ಅಕೌಂಟ್ ಅನ್ನು ಒಂದು ಬ್ಯಾಂಕ್‌ನಿಂದ ಇನ್ನೊಂದಕ್ಕೆ ಅಥವಾ ಬ್ಯಾಂಕ್‌ನಿಂದ ಪೋಸ್ಟ್ ಆಫೀಸ್‌ಗೆ ಸುಲಭವಾಗಿ ಟ್ರಾನ್ಸ್ಫರ್ ಮಾಡಬಹುದು.

ಹಣ ಕಟ್ಟೋ ವಿಧಾನಗಳು ಮತ್ತು ಫ್ಲೆಕ್ಸಿಬಿಲಿಟಿ

ಹಣ ಕಟ್ಟೋಕೆ ತುಂಬಾ ಸುಲಭದ ಮಾರ್ಗಗಳಿವೆ. ನೀವು ಕ್ಯಾಶ್, ಚೆಕ್, ಡಿಡಿ, ಇಲ್ಲಾಂದ್ರೆ ಆನ್‌ಲೈನ್ ಮೂಲಕವೂ ಪೇ ಮಾಡಬಹುದು.

ಅಷ್ಟೇ ಅಲ್ಲ, ECS (Electronic Clearing Service) ಸೆಟ್ ಮಾಡಿದ್ರೆ, ಪ್ರತಿ ತಿಂಗಳು ನಿಮ್ಮ ಬ್ಯಾಂಕ್ ಅಕೌಂಟ್‌ನಿಂದ ಆಟೋಮ್ಯಾಟಿಕ್ ಆಗಿ ದುಡ್ಡು ಹೋಗುತ್ತೆ.

ಇದರಿಂದ ನೀವು ಪ್ರತಿ ಬಾರಿ ನೆನಪಿಟ್ಟುಕೊಂಡು ಕಟ್ಟೋ ಅವಶ್ಯಕತೆ ಇರಲ್ಲ.

ಒಟ್ಟಾರೆ, ನಿಮ್ಮ ಅನುಕೂಲಕ್ಕೆ ತಕ್ಕಂತೆ ಯಾವ ರೀತಿ ಬೇಕಾದರೂ ಹೂಡಿಕೆ ಮಾಡಬಹುದು.

ಟ್ರಿಪಲ್ ಟ್ಯಾಕ್ಸ್ ಬೆನಿಫಿಟ್! ಯಾಕೆ SSY ಬೆಸ್ಟ್?

SSY ಯೋಜನೆಯ ಅತ್ಯಂತ ದೊಡ್ಡ ಅಡ್ವಾಂಟೇಜ್ ಅಂದ್ರೆ ಇದರ “ಟ್ರಿಪಲ್ ಟ್ಯಾಕ್ಸ್ ಬೆನಿಫಿಟ್“.

ನೀವು ಇನ್ವೆಸ್ಟ್ ಮಾಡುವಾಗ ಸೆಕ್ಷನ್ 80C ಅಡಿಯಲ್ಲಿ 1.5 ಲಕ್ಷದವರೆಗೆ ಟ್ಯಾಕ್ಸ್ ಬೆನಿಫಿಟ್ ಪಡೆಯಬಹುದು.

ನಿಮ್ಮ ಹೂಡಿಕೆಯ ಮೇಲೆ ಬರುವ ಬಡ್ಡಿ (ಇದು ಈಗ 8.2% ಇದೆ, ಮೂರು ತಿಂಗಳಿಗೆ ಒಮ್ಮೆ ಪರಿಷ್ಕರಣೆ ಆಗುತ್ತೆ) ಸಂಪೂರ್ಣ ಟ್ಯಾಕ್ಸ್ ಫ್ರೀ.

ಮಗು 21 ವರ್ಷ ಆದ್ಮೇಲೆ ವಿಥ್‌ಡ್ರಾ ಮಾಡುವ ಸಂಪೂರ್ಣ ಮೊತ್ತಕ್ಕೂ ಟ್ಯಾಕ್ಸ್ ಕಟ್ಟಬೇಕಾಗಿಲ್ಲ.

ಇದು ಸರ್ಕಾರ ಗ್ಯಾರಂಟಿ ಮಾಡಿದ ಯೋಜನೆ, ಹಾಗಾಗಿ ನಿಮ್ಮ ಹಣ ಸೇಫ್ ಆಗಿರುತ್ತೆ ಅನ್ನೋ ನಂಬಿಕೆ ಇರಲಿ.

ಹಣ ವಿಥ್‌ಡ್ರಾ ಹೇಗೆ?

SSY ಅಕೌಂಟ್ ಮೆಚುರಿಟಿ ಪಿರಿಯಡ್ 21 ವರ್ಷ.

ಆದರೆ, ನೀವು 15 ವರ್ಷಗಳವರೆಗೆ ಮಾತ್ರ ಹಣ ಕಟ್ಟಬೇಕು, ಉಳಿದ 6 ವರ್ಷ ಇಂಟರೆಸ್ಟ್ ಆಡ್ ಆಗ್ತಾ ಹೋಗುತ್ತೆ.

18 ವರ್ಷ ಆದ್ಮೇಲೆ ಮಗುವಿನ higher educationಗಾಗಿ ಶೇ. 50ರಷ್ಟು ಹಣ ವಿಥ್‌ಡ್ರಾ ಮಾಡೋಕೆ ಅವಕಾಶ ಇದೆ.

ಒಂದು ವೇಳೆ ದುರದೃಷ್ಟವಶಾತ್ ತಂದೆ ಅಥವಾ ಗಾರ್ಡಿಯನ್ ತೀರಿಕೊಂಡ್ರೆ ಅಥವಾ ಮಗುವಿಗೆ ಗಂಭೀರ ಕಾಯಿಲೆ ಇದ್ರೆ, ಅಗತ್ಯ ದಾಖಲೆಗಳನ್ನ ನೀಡಿ ಹಣ ವಿಥ್‌ಡ್ರಾ ಮಾಡಬಹುದು.

ಬೇರೆ ಯಾವುದೇ ಕಾರಣಕ್ಕೂ ಅಕೌಂಟ್ ಕ್ಲೋಸ್ ಮಾಡೋಕೆ ಅಥವಾ ವಿಥ್‌ಡ್ರಾ ಮಾಡೋಕೆ ಆಗಲ್ಲ.

ನಿಮ್ಮ ಹೂಡಿಕೆಗೆ ಎಷ್ಟು ಸಿಗುತ್ತೆ? ಲೆಕ್ಕಾಚಾರ ನೋಡಿ!

  • ವರ್ಷಕ್ಕೆ ₹25,000 (15 ವರ್ಷ): ಒಟ್ಟು ಹೂಡಿಕೆ ₹3.75 ಲಕ್ಷ, ಮೆಚುರಿಟಿ ವೇಳೆ ಸಿಗುವ ಮೊತ್ತ ಸುಮಾರು ₹4.61 ಲಕ್ಷ.
  • ವರ್ಷಕ್ಕೆ ₹50,000 (15 ವರ್ಷ): ಒಟ್ಟು ಹೂಡಿಕೆ ₹7.50 ಲಕ್ಷ, ಮೆಚುರಿಟಿ ವೇಳೆ ಸಿಗುವ ಮೊತ್ತ ಸುಮಾರು ₹23.09 ಲಕ್ಷ.
  • ವರ್ಷಕ್ಕೆ ₹1.5 ಲಕ್ಷ (15 ವರ್ಷ): ಒಟ್ಟು ಹೂಡಿಕೆ ₹22.50 ಲಕ್ಷ, ಮೆಚುರಿಟಿ ವೇಳೆ ಬರೋಬ್ಬರಿ ₹69.27 ಲಕ್ಷ ಸಿಗುತ್ತೆ!

ಕೊನೆಯ ಮಾತು:

ನಿಮ್ಮ ಹೆಣ್ಣು ಮಗುವಿನ ಭವಿಷ್ಯ ಉಜ್ವಲವಾಗಿಸೋಕೆ ಸುಕನ್ಯಾ ಸಮೃದ್ಧಿ ಯೋಜನೆ ಒಂದು ಬೆಸ್ಟ್ ಆಯ್ಕೆ.

ಇದರ ಲಾಭಗಳನ್ನ ತಿಳಿದ ಮೇಲೆ, ಹೂಡಿಕೆ ಮಾಡೋಕೆ ಯಾಕೆ ತಡ ಮಾಡ್ತೀರಾ? ಇವತ್ತೇ ನಿಮ್ಮ ಮಗಳ ಹೆಸರಲ್ಲಿ ಅಕೌಂಟ್ ಓಪನ್ ಮಾಡಿ, ಒಂದು ಭದ್ರ ಭವಿಷ್ಯದ ಬುನಾದಿ ಹಾಕಿ.

ಈ ಮಾಹಿತಿ ಇಷ್ಟ ಆಗಿದ್ರೆ, ನಿಮ್ಮ ಫ್ರೆಂಡ್ಸ್ ಅಂಡ್ ಫ್ಯಾಮಿಲಿ ಜೊತೆ ಶೇರ್ ಮಾಡಿ, ಎಲ್ಲರಿಗೂ ಸಹಾಯ ಆಗಲಿ.

ಇದನ್ನು ಓದಿ:

ಮಾರ್ಚ್-ಏಪ್ರಿಲ್ ಪಿಂಚಣಿ ಒಟ್ಟಿಗೆ ಜಮಾ ಆಗುತ್ತಾ? – ಫಲಾನುಭವಿಗಳು ತಿಳಿದಿರಬೇಕಾದ ಸಂಪೂರ್ಣ ಮಾಹಿತಿ..!

ಭಾಗ್ಯಲಕ್ಷ್ಮಿ ಯೋಜನೆ 2026: ಹೊಸ ಅಪ್ಡೇಟ್‌ಗಳು, ಅರ್ಹತೆ ಮತ್ತು ಪ್ರಯೋಜನಗಳ ಸಂಪೂರ್ಣ ಮಾಹಿತಿ

Leave a Comment