No ಕಾಸ್ಟ್ EMI ಅಂತ ಒಂದು ಪ್ಲಾನ್ ನೀವು ಕೇಳಿದೀರಾ ಅಲ್ವಾ? ಹಲವಾರು ಕಂಪನಿಗಳು ‘ಜೀರೋ ಇನ್ವೆಸ್ಟ್‌ಮೆಂಟ್’, ‘No ಹಿಡನ್ ಚಾರ್ಜ್’ ಅಂತ ಹೇಳಿದಾಗ ಏನೋ ಒಂದು ಉಳಿತಾಯ ಹಾಗುತ್ತೆ ಅನ್ಸುತ್ತೆ.
ಆದ್ರೆ ಇಲ್ಲಿ ನಿಮ್ಮ ಜೇಬು ನಿಜಕ್ಕೂ ಖಾಲಿ ಆಗ್ತಿಲ್ಲ ಅಂದ್ಕೊಂಡಿದೀರಾ? ಕ್ಯಾಶ್ ಕೊಟ್ಟು ವಸ್ತು ತಗೊಳ್ಳೋರು ಹಳೇ ಕಾಲದೋರು, EMI ಮಾಡೋರೇ ಸ್ಮಾರ್ಟೆಸ್ಟ್ ಅನ್ನೋ ಟ್ರೆಂಡ್ ಇವಾಗ ಸುರು ಹಾಗಿದೆ.
ಆದ್ರೆ, ಈ ‘No ಕಾಸ್ಟ್’ ಅನ್ನೋ ಹೋಸ ಮಾಯೆ ಹಿಂದೆ ಎಷ್ಟೆಲ್ಲಾ ಸೀಕ್ರೆಟ್ ಚಾರ್ಜ್‌ಗಳು, ಹಿಡನ್ ಕ್ಯಾಲ್ಕುಲೇಷನ್‌ಗಳು ನಡೆಯುತ್ತೆ ಅಂತ ನಿಮಗೆ ಗೊತ್ತಾ? ಇದರ ಅಸಲಿ ಕಥೆ ಏನು ಈ ಲೇಖನದ ಮೂಲಕ ತಿಳಿದುಕೊಳೋಣ.
No ಕಾಸ್ಟ್ EMI – ನಿಜಕ್ಕೂ ಉಚಿತವಾ ಅಥವಾ ಲೂಸ್ ?
ಮೊದಲಿಗೆ, ಈ ಡಿಜಿಟಲ್ ಜಗತ್ತಿನಲ್ಲಿ ಫ್ರೀಯಾಗಿ ಏನೂ ಸಿಗಲ್ಲ ಅನ್ನೋ ಸತ್ಯವನ್ನು ಅರ್ಥ ಮಾಡ್ಕೋಬೇಕು. ಪೂರ್ವಜರಿಂದ ಬಂದ ಆಸ್ತಿ ಬಿಟ್ಟು haha!.
ನೀವು ಒಂದು ವಸ್ತುವನ್ನು ‘No ಕಾಸ್ಟ್ EMI‘ ಮೇಲೆ ತಗೊಂಡಿದ್ದೀರಾ ಅಂದ್ರೆ, ಒಂದೋ ನಿಮಗೆ ಗೊತ್ತಿಲ್ಲದೆ ನೀವೇ ಅದರ ಹಣ ಪೇ ಮಾಡ್ತಿದ್ದೀರಿ, ಇಲ್ಲಾಂದ್ರೆ ನಿಮ್ಮ ಬದಲು ಬೇರೆ ಯಾರೋ ಅದನ್ನು ಪೇ ಮಾಡ್ತಿದ್ದಾರೆ.
ಫ್ರೀ ಅನ್ನೋ ಕಾನ್ಸೆಪ್ಟ್ ಇಲ್ಲಿ ಇಲ್ಲವೇ ಇಲ್ಲ.
ಯಾವುದೇ ಒಂದು ವಸ್ತು ಫ್ರೀ ಆಗಿ ಸಿಗುತ್ತೆ ಅಂದ್ರೆ, ಅದರ ಹಿಂದೆ ಒಂದು ಕ್ಯಾಲ್ಕುಲೇಷನ್ ಖಂಡಿತ ಇರುತ್ತೆ.
ಬೇಡವಾಗಿರುವಂಥಹ ವಸ್ತುಗಳ ಖರೀದಿ: ಮೊದಲ ಟ್ರ್ಯಾಪ್
No ಕಾಸ್ಟ್ EMIನ ಮೊದಲ ಟ್ರ್ಯಾಪ್ ಅಂದ್ರೆ, ನಮಗೆ ಅವಶ್ಯಕತೆ ಇಲ್ಲದ ವಸ್ತುವನ್ನ ಅಥವಾ ನಮ್ಮ ಬಜೆಟ್ ಮೀರಿರೋ ವಸ್ತುವನ್ನ ತಗೊಳ್ಳೋದು. (ಬೇರೆ ಅವರಿಗಿಂತ ಜಾಸ್ತಿ ಬೆಲೆ ಇರುವ ವಸ್ತುಗಳ ಖರೀದಿ)
ಉದಾಹರಣೆಗೆ: ನೀವು 20,000 ರೂಪಾಯಿ ಫೋನ್ ತಗೊಳ್ಳೋಕೆ ಅಂಗಡಿಗೆ ಹೋಗಿರ್ತೀರಾ.
ಅಲ್ಲಿ ಸೇಲ್ಸ್‌ಮ್ಯಾನ್ ‘No ಕಾಸ್ಟ್ EMI’ ಬಗ್ಗೆ ಚೆನ್ನಾಗಿ ಎಕ್ಸ್‌ಪ್ಲೈನ್ ಮಾಡ್ತಾನೆ. ಆಗ ನಿಮಗೆ, ‘ತಿಂಗಳು-ತಿಂಗಳು ಸ್ವಲ್ಪ ಕಟ್ಟಿ iPhone ತಗೊಂಡ್ರೆ ಬೆಟರ್ ಅಲ್ವಾ?’ ಅಂತ ಅನ್ಸುತ್ತೆ.
20,000 ರೂಪಾಯಿಗೆ ಹೋಗಿದ್ದವರು 50,000 ರೂಪಾಯಿ iPhone ತಗೊಂಡು (ಮಂಗ) ಹಾಗಿ ಬರ್ತಿರ.
ಇದು ನಿಜಕ್ಕೂ ನಮಗೆ ಗೊತ್ತಿಲ್ಲದೆ ಸಾಲದ ಸುಳಿಗೆ ಸಿಲುಕಿಸುವ ಮೊದಲ ದಾರಿ.
ದಾರಿ ಅನೋದಕ್ಕಿಂತ ಸರಿಯಾಗಿ ಯೋಚನೆ ಮಾಡೋ ಶಕ್ತಿ ನಿಮ್ಮಲಿ ಇರೋದಿಲ್ಲ.
ಬೆಲೆ ಏರಿಕೆ ಮಾಡುವ ಪ್ಲಾನ್ : ಬಡ್ಡಿ ಹೆಸರಿಲ್ಲದೆ!
ಈಗ ಇನ್ನೊಂದು ಉದಾಹರಣೆ ನೋಡೋಣ. ನೀವು ಒಂದು ಮೊಬೈಲ್ ಶಾಪ್‌ಗೆ ಹೋಗಿ 52,500 ರೂಪಾಯಿ ಬೆಲೆಯ ಮೊಬೈಲ್ ನೋಡುತೀರಾ ಅಂತ ಅಂದುಕೊಳ್ಳಿ.
ಚೆಕ್‌ಔಟ್ ಮಾಡುವಾಗ ‘No ಕಾಸ್ಟ್ EMI’ ಅಂತ ಆಪ್ಷನ್ ಇರುತ್ತೆ. ‘ಓಹ್, ಫ್ರೀ EMI’ ಅಂತ ಖುಷಿ ಪಡ್ತೀರಾ.
ಆದ್ರೆ, ಆ ಮೊಬೈಲ್‌ನ ಆಕ್ಚುವಲ್ ಪ್ರೈಸ್ 50,000 ರೂಪಾಯಿ ಮಾತ್ರ. ಉಳಿದ 2,500 ರೂಪಾಯಿ ಬಡ್ಡಿಯೇ ಆಗಿರುತ್ತೆ, ಆದ್ರೆ ಎಲ್ಲೂ ‘ಬಡ್ಡಿ’ ಅಂತ ಹೇಳಿರಲ ಮಾಡಿರಲ್ಲ.
ಇದನ್ನೇ ಟೋಟಲ್ ಅಮೌಂಟ್ ಅಂತ ಹೇಳಿಬಿಡ್ತಾರೆ ನೀವು ಖುಷಿ ಹಾಗಿ ಪೂರ್ಚಸ್ ಮಾಡೀತೀರಾ ಕಮ್ಮಿ ರೇಟ್ ಅಂತ
ಹಿಂಗಾಗಿ, ನಾವು ಬ್ಯಾಕ್‌ಗ್ರೌಂಡ್‌ನಲ್ಲಿ ಓಡ್ತಿರೋ ಈ ಇಂಟರೆಸ್ಟ್ ಬಗ್ಗೆ ಕ್ಯಾಲ್ಕುಲೇಟ್ ಮಾಡೋಕೆ ಹೋಗಲ್ಲ.
ಈ ಗೇಮ್ ಅಲ್ಲಿ ಗೆದ್ದವನು ಅಂಗಡಿಯ ಮಾಲೀಕ.
ಪ್ರೊಸೆಸ್ಸಿಂಗ್ ಫೀಸ್ ಗೇಮ್ ಪ್ಲಾನ್ : ಮರೆಮಾಚಿದ ಬಡ್ಡಿ
No ಕಾಸ್ಟ್ EMI ಹಿಂದೆ ನಡೆಯೋ ಇನ್ನೊಂದು ದೊಡ ಟ್ರ್ಯಾಪ್ ಅಂದ್ರೆ ‘ಪ್ರೊಸೆಸ್ಸಿಂಗ್ ಫೀಸ್’. ಇದು ನಿಜಕ್ಕೂ ಬಡ್ಡಿಯೇ ಆಗಿರುತ್ತೆ, ಆದ್ರೆ ಈ ಹೆಸರಲ್ಲಿ ಅದನ್ನ ಹೈಡ್ ಮಾಡಲಾಗುತ್ತದೆ.
ಉದಾಹರಣೆಗೆ: 30,000 ರೂಪಾಯಿ ಮೊಬೈಲ್ ತಗೊಂಡಾಗ 2,000 ರೂಪಾಯಿ ಪ್ರೊಸೆಸ್ಸಿಂಗ್ ಫೀಸ್ ಅಂತ ಹೇಳಿದ್ರೆ, ನಮಗೆ ಅದು ಚಿಕ್ಕ ಅಮೌಂಟ್ ಅನ್ಸುತ್ತೆ. ’12 ತಿಂಗಳ EMI ಅಲ್ವಾ, 2,000 ರೂಪಾಯಿ ಅಷ್ಟೇ ತಾನೇ’ ಅಂತ ಅನ್ಕೋತೀರಾ. ಆದ್ರೆ, ಈ 2,000 ರೂಪಾಯಿಯೇ ನಿಜವಾದ ಹಿಡನ್ ಬಡ್ಡಿ ಆಗಿರುತ್ತೆ.
GST ಜೊತೆ ಸೇರಿ, 30,000 ರೂಪಾಯಿ ಮೊಬೈಲ್‌ಗೆ ನೀವು 32,360 ರೂಪಾಯಿ ಕೊಡ್ತೀರಿ. No ಕಾಸ್ಟ್ ಅನ್ನೋ ಹೆಸರಿನಲ್ಲಿ, ಬೇರೆ ಬೇರೆ ಹೆಸರಲ್ಲಿ ನಿಮ್ಮಿಂದ ಬಡ್ಡಿ ವಸೂಲಿ ಮಾಡ್ತಿದ್ದಾರೆ ಈ ಕಂಪನಿಗಳು ಅಷ್ಟೇ.
ಕ್ರೆಡಿಟ್ ಕಾರ್ಡ್ EMI ಪ್ಲಾನ್: ದೊಡ್ಡ ಅಪಾಯ
ಈ ತಪ್ಪನ್ನು ಮಾತ್ರ ನೀವು ಯಾವತ್ತೂ ಮಾಡಬೇಡಿ:
ಕ್ರೆಡಿಟ್ ಕಾರ್ಡ್ ಬಳಸಿ ಪರ್ಚೇಸ್‌ಗಳನ್ನು EMIಗೆ ಕನ್ವರ್ಟ್ ಮಾಡೋದು ಒಂದು ಗೇಮ್ ಕೂಡ.
ಇದು ಅತಿದೊಡ್ಡ ಟ್ರ್ಯಾಪ್. ಕ್ರೆಡಿಟ್ ಕಾರ್ಡ್ ಕಂಪನಿಗಳು ಯಾವಾಗಲೂ ಎಕ್ಸ್‌ಪೆನ್ಸಿವ್ ಲೋನ್ ಕೊಡುತ್ತವೆ, ಅಲ್ಲೆಲ್ಲೂ ‘No ಕಾಸ್ಟ್’ ಅಂತ ಇರಲ್ಲ.
EMI ಹಿಂದೆ ಆಗುವ ಕ್ಯಾಲ್ಕುಲೇಷನ್‌ಗಳು, ಹಿಡನ್ ಚಾರ್ಜ್‌ಗಳನ್ನು ಅವರು ಎಕ್ಸ್‌ಪ್ಲೈನ್ ಮಾಡೋದೇ ಇಲ್ಲ.
ಒಂದು ವೇಳೆ ನೀವು EMI ಟೈಮ್ ನಲ್ಲಿ ಹಣವನ್ನು ಕಟ್ಟದಿದ್ದರೆ, ವರ್ಷಕ್ಕೆ 30% ರಿಂದ 45% ವರೆಗೂ ಎಕ್ಸ್ಟ್ರಾ ಬಡ್ಡಿ ಕಟ್ಟಬೇಕಾಗುತ್ತೆ. ಇದು ನಿಮ್ಮ ಜೇಬಿಗೆ ಗ್ಯಾರಂಟಿ ಕತ್ತರಿ ಹಾಕುತ್ತೆ.
ನಿಜವಾದ ‘No ಕಾಸ್ಟ್ EMI’ ಅಂದರೆ ಯಾವುದು?
ಹಾಗಾದ್ರೆ ನಿಜವಾದ ‘No ಕಾಸ್ಟ್ EMI’ ಅಂತ ಏನಾದ್ರೂ ಇದೆಯಾ?
ಇದೆ!
- ಬಿಗ್ ಬಿಲಿಯನ್ ಸೇಲ್
- ಅಮೆಜಾನ್ ಪ್ರೈಮ್
ಸೇಲ್‌ನಂತಹ ದೊಡ್ಡ ಸೇಲ್ ದಿನಗಳಲ್ಲಿ ಇದು ಮಾತ್ರ ಸಾಧ್ಯ.
ಆ ಸಮಯದಲ್ಲಿ, ಕಂಪನಿಗಳು ತಮ್ಮ ಸೇಲ್ಸ್ ಜಾಸ್ತಿ ಮಾಡಿಕೊಳ್ಳೋಕೆ, ಪ್ಲಾಟ್‌ಫಾರ್ಮ್‌ಗಳು ಬ್ಯಾಂಕ್ ಜೊತೆ ಟೈ ಅಪ್ ಆಗಿ, ನಿಮ್ಮ EMI ಬಡ್ಡಿಯನ್ನು ತಾವೇ ಪೇ ಮಾಡುತ್ತವೆ.
ಆಗ ನಿಮಗೆ ಯಾವುದೇ ಹೆಚ್ಚುವರಿ ಬೆಲೆ ಇರಲ್ಲ, ಪ್ರೊಸೆಸ್ಸಿಂಗ್ ಫೀಸ್ ಇರಲ್ಲ.
ಇದು ನಿಜವಾದ No ಕಾಸ್ಟ್ EMI. ಇಲ್ಲಿ ನಿಮಗೆ ಯಾವುದೇ ಟೆನ್ಷನ್ ಇಲ್ದೆ ಪ್ರಾಡಕ್ಟ್ಸ್ ಪರ್ಚೇಸ್ ಮಾಡಬಹುದು, ಯಾಕಂದ್ರೆ ಇಂಟರೆಸ್ಟ್ ಕಂಪನಿ ಪೇ ಮಾಡ್ತಿರುತ್ತೆ.
ನಗದು ಪಾವತಿ ಅಥವಾ EMI: ಯಾವುದು ಉತ್ತಮ?
ಈಗ ಯಾವ ರೀತಿ ಪರ್ಚೇಸ್ ಮಾಡೋದು ಒಳ್ಳೆಯದು ಅಂತ ತಿಳಿದುಕೊಳೋಣ.
ನಿಮ್ಮ ಹತ್ರ ವಸ್ತುವಿನ ಸಂಪೂರ್ಣ ಹಣ ಇದ್ರೆ
(ಉದಾ. 25,000 ರೂ), ಮತ್ತು ನಿಮಗೆ ನಿಜವಾದ No ಕಾಸ್ಟ್ EMI ಸಿಗ್ತಿದ್ರೆ (ಕಂಪನಿ ಇಂಟರೆಸ್ಟ್ ಪೇ ಮಾಡ್ತಿದ್ರೆ), EMI ತಗೊಂಡು ನಿಮ್ಮ ಹಣವನ್ನು ಶಾರ್ಟ್-ಟರ್ಮ್ ಅಸೆಟ್ಸ್‌ನಲ್ಲಿ ಇನ್ವೆಸ್ಟ್ ಮಾಡಿ.
EMI ಕಟ್ಟಿದರೂ ಸಹ, ಇನ್ವೆಸ್ಟ್‌ಮೆಂಟ್‌ನಿಂದ ಜಾಸ್ತಿ ಹಣ ರಿಟರ್ನ್ ಸಿಗುತ್ತೆ.
ಆದರೆ, ಇದು ನಿಜವಾಗಿಯೂ ‘No ಕಾಸ್ಟ್’ EMI ಅನ್ನೋದನ್ನು ಚೆಕ್ ಮಾಡ್ಕೊಳ್ಳೋದು ಮುಖ್ಯ.
ಇದನ್ನು ಓದಿ:
PM YASASVI ಸ್ಕಾಲರ್‌ಶಿಪ್ 2026: ಪರೀಕ್ಷೆ ಇಲ್ಲದೆ ₹3 ಲಕ್ಷ ಪಡೆಯುವುದು ಈಗ ಸುಲಭ