NEET ಪರೀಕ್ಷೆ: ಯಾವ ಸಬ್ಜೆಕ್ಟ್​​ಗೆ ಮಕ್ಕಳು ಹೆಚ್ಚು Focus ಮಾಡಬೇಕು? ಇಲ್ಲಿದೆ ಸುಲಭ ಮಾರ್ಗ!

ಈಗಾಗಲೇ NEET ಪರೀಕ್ಷೆ ಬಗ್ಗೆ ಮಕ್ಕಳಿಗೆ ತುಂಬಾ ಟೆನ್ಶನ್ ಇದೆ ಅನ್ನೋದು ಗೊತ್ತಿದೆ. ವಿದ್ಯಾರ್ಥಿಗಳಲ್ಲಿ ಕಳವಳ, ಆತಂಕ ಜೊತೆಗೆ ಪೋಷಕರಲ್ಲಿಯೂ ಟೆನ್ಶನ್ ಜಾಸ್ತಿಯಾಗಿದೆ.

ಇಂತಹ ಸಮಯದಲ್ಲಿ, ಮತ್ತೆ ಪರೀಕ್ಷೆಗೆ ಬರೆಯುವುದಕ್ಕೆ ಹೇಗೆ ತಯಾರಾಗಬೇಕು, ಎಷ್ಟು ಸಮಯ ಓದಬೇಕು, ಯಾವ ಸಬ್ಜೆಕ್ಟ್​ಗೆ ಹೆಚ್ಚು ಫೋಕಸ್ ಮಾಡಬೇಕು? ಅಂತ ಸ್ಪಷ್ಟವಾದ ಮಾರ್ಗದರ್ಶನ ಬೇಕಾಗಿದೆ. ಅದರಲ್ಲೂ ನಿಮಗೆ ನಮ್ಮ ಕನ್ನಡ ಮೀಡಿಯಂ ರೂರಲ್ ಸ್ಟೂಡೆಂಟ್ಸ್‌ಗೆ ಕೆಲವು ಸ್ಪೆಷಲ್ ಟಿಪ್ಸ್ ನಿಮಗೆ ಇಲ್ಲಿದೆ.

ಸರಿಯಾದ ಪ್ಲ್ಯಾನ್ ಇದ್ರೆ, NEET ಸುಲಭವಾಗಿ ಸ್ಕೋರ್ ಮಾಡಬಹುದು.

NEET ಆತಂಕ: ವಿದ್ಯಾರ್ಥಿಗಳ ಮುಂದೆ ಇರುವ ದಾರಿ

ಸದ್ಯದ NEET ಎಕ್ಷಮ ಪರಿಸ್ಥಿತಿ ಮಕ್ಕಳಲ್ಲಿ ಭಯ ಹುಟ್ಟಿಸಿದೆ. ಪೋಷಕರಿಗೂ ಮರು ಪರೀಕ್ಷೆಯ ಬಗ್ಗೆ ಟೆನ್ಶನ್ ಬಹಳ ಇದೆ. ಆದರೆ, ಈ ಆತಂಕದಿಂದ ಹೊರಬಂದು, ಈಗಿರುವ ಸಮಯವನ್ನು ಸರಿಯಾಗಿ ಬಳಸಿಕೊಳ್ಳುವುದು ಬಹಳ ಮುಖ್ಯ. ನಿಮ್ಮನ್ನು ಯಾರಿಗೂ ಹೋಲಿಕೆ ಮಾಡಿಕೊಳ್ಳಬೇಡಿ.

ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಟಾರ್ಗೆಟ್ ಇಟ್ಟುಕೊಂಡು, ಸರಿಯಾದ ಪ್ಲ್ಯಾನ್ ಜೊತೆ ಮುಂದೆ ಸಾಗುವುದು ಉತ್ತಮ. ಕಳವಳ ಪಡುವ ಬದಲು, ಓದಿನ ಕಡೆ ಗಮನ ಕೊಡುವುದು ಈಗಿರುವ ದೊಡ್ಡ ಆಯ್ಕೆ.

580 ಟಾರ್ಗೆಟ್ ಇಟ್ಟುಕೊಳ್ಳಿ: ವಿಷಯವಾರು ಆದ್ಯತೆ

ಈಗಿರುವ ವಿಭಿನ್ನ ಸಮಯದಲ್ಲಿ ಒಂದು 580 ಮಾರ್ಕ್ಸ್ ಟಾರ್ಗೆಟ್ ಇಟ್ಟುಕೊಳ್ಳಿ.

ಫಿಸಿಕ್ಸ್‌ನಲ್ಲಿ 180ಕ್ಕೆ 150 ಮಾಡುವುದು ಕಷ್ಟ ಅನಿಸಬಹುದು, ಆದರೆ ಬಯಾಲಜಿಯಲ್ಲಿ 360ಕ್ಕೆ 350+ ಅಂಕಗಳನ್ನು ಸುಲಭವಾಗಿ ಗಳಿಸಬಹುದು. ಹಾಗೆಯೇ, ಕೆಮಿಸ್ಟ್ರಿಯಲ್ಲಿ ಒಂದು 120 ಮಾರ್ಕ್ಸ್, ಫಿಸಿಕ್ಸ್‌ನಲ್ಲಿ 100-110 ಅಂಕ ಗಳಿಸಲು ನೀವು ಪ್ರಯತ್ನಿಸಿ. ಈ ರೀತಿ ಪ್ಲಾನ್ ಮಾಡಿಕೊಂಡರೆ ಒಟ್ಟು 580+ ಮಾರ್ಕ್ಸ್ ಗಳಿಸುವುದು ಕಷ್ಟ ಏನೂ ಇಲ್ಲ.

ಸ್ಮಾರ್ಟ್ ಆಗಿ ಓದುವುದು ಬಹಳ ಮುಖ್ಯ.

ಬಯಾಲಜಿ ಸಬ್ಜೆಕ್ಟ್: ಅತಿ ಹೆಚ್ಚು ಅಂಕ ಗಳಿಸಲು ಸುಲಭ ಮಾರ್ಗ

NEET ಪರೀಕ್ಷೆಯಲ್ಲಿ ಅತಿ ಹೆಚ್ಚು ಸ್ಕೋರ್ ಮಾಡಲು ಇರುವ ಅತ್ಯುತ್ತಮ ವಿಷಯ ಬಯಾಲಜಿ.

ಬಯಾಲಜಿ ಅಲ್ಲಿ 360ಕ್ಕೆ 350 ಮಾರ್ಕ್ಸ್ ಗಳಿಸುವುದು ತುಂಬಾ ಕಷ್ಟ ಅಲ್ಲ. ಇದರ ಸೀಕ್ರೆಟ್ ಏನು ಅಂದರೆ, NCERT ಪುಸ್ತಕವನ್ನು ಲೈನ್ ಬೈ ಲೈನ್ ಓದುವುದು.

ಬೇರೆ ಯಾವುದೇ ರೆಫರೆನ್ಸ್ ಬುಕ್ಸ್‌ಗಿಂತ, NCERT ಮೇಲೆ ಹೆಚ್ಚು ಕಾನ್ಸಂಟ್ರೇಟ್ ಮಾಡಿ. ಅದರಲ್ಲಿರುವ ಪ್ರತಿಯೊಂದು ಪದವೂ ಮುಖ್ಯ, ಯಾಕೆಂದರೆ ಪ್ರಶ್ನೆಗಳು ನೇರವಾಗಿ NCERT ಯಿಂದಲೇ ಬರುತ್ತವೆ.

ಇದು ನಮ್ಮ ರೂರಲ್ ವಿದ್ಯಾರ್ಥಿಗಳಿಗೆ ದೊಡ್ಡ ಹೆಲಪಿಂಗ್ ಪಾಯಿಂಟ್.

NCERT ಸ್ಟ್ರಾಟೆಜಿ: ಬಯಾಲಜಿಯಲ್ಲಿ 350+ ಹೇಗೆ?

NCERT ಪುಸ್ತಕದಲ್ಲಿರುವ ಪ್ರತಿಯೊಂದು ಚಾಪ್ಟರ್ ಅನ್ನು ತುಂಬಾ ಆಳವಾಗಿ ಓದಿ. ಉದಾಹರಣೆಗೆ, ‘ಬಯೋಲಾಜಿಕಲ್ ಕ್ಲಾಸಿಫಿಕೇಷನ್’ ಚಾಪ್ಟರ್‌ನಲ್ಲಿ Phycomycetes, Ascomycetes, Basidiomycetes, Deuteromycetes ಗಳ ಬಗ್ಗೆ ನೋಟ್ಸ್ ಮಾಡಿಕೊಂಡು ರಿವೈಸ್ ಮಾಡಿ.

‘ಪ್ಲಾಂಟ್ ಕಿಂಗ್‌ಡಮ್’ನಲ್ಲಿ ಗ್ರೀನ್, ಬ್ರೌನ್, ರೆಡ್ ಆಲ್ಗೆ ಮತ್ತು ರಿಸರ್ವ್ ಫುಡ್ ಮೆಟೀರಿಯಲ್ಸ್ ಬಗ್ಗೆ ಓದಿ. ಚಾರ್ಟ್‌ಗಳನ್ನು ನೆನಪಿಟ್ಟುಕೊಳ್ಳಿ.

ಇವುಗಳ ಮೇಲೆ ಪರೀಕ್ಷೆಯಲ್ಲಿ ಗ್ಯಾರಂಟಿ ಪ್ರಶ್ನೆಗಳು ಬರುತ್ತವೆ. ಎನ್ಸಿಇಆರ್​ಟಿಯ ಯಾವ ಲೈನ್ ಕೂಡ ಮಿಸ್ ಮಾಡಬೇಡಿ.

ಅನಿಮಲ್ ಕಿಂಗ್‌ಡಮ್ ಮತ್ತು ಬೇರೆ ಪ್ರಮುಖ ಚಾರ್ಟ್‌ಗಳು

ಅನಿಮಲ್ ಕಿಂಗ್‌ಡಮ್ ಚಾಪ್ಟರ್‌ನ ಕೊನೆಯಲ್ಲಿ ಇರುವ ಚಾರ್ಟ್ ಮೇಲೆ ಗ್ಯಾರಂಟಿ ನಾಲ್ಕು ಪ್ರಶ್ನೆಗಳು ಬರುತ್ತವೆ.

ನಮ್ಮ ಹುಡುಗರು ಇದನ್ನೇ ಓದೋದಿಲ್ಲ.

ಎಲ್ಲಾ ಫೈಲಂಗಳು

(Porifera, Cnidaria, Ctenophora, Platyhelminthes, Aschelminthes, Annelida, Arthropoda, Mollusca, Echinodermata, Hemichordata, Chordata)

ಬಗ್ಗೆ, ಅವುಗಳ ಸಿಮೆಟ್ರಿ, ಸಿಲೋಮ್, ಡೈಜೆಸ್ಟಿವ್ ಸಿಸ್ಟಮ್, ರೆಸ್ಪಿರೇಟರಿ ಸಿಸ್ಟಮ್ ಮತ್ತು ಸೆಗ್ಮೆಂಟೇಷನ್ ಬಗ್ಗೆ ವಿವರವಾಗಿ ತಿಳಿದುಕೊಳ್ಳಿ.

ಈ ಚಾರ್ಟ್ ಅನ್ನು ನೀಟಾಗಿ ನೋಟ್ಸ್ ಮಾಡಿಕೊಂಡು ರಿವೈಸ್ ಮಾಡುವುದು ಬಹಳ ಮುಖ್ಯ.

ಮಾರ್ಫಾಲಜಿ, ಅನಾಟಮಿ, ಮತ್ತು ಕೀಟಗಳ ಬಗ್ಗೆ

ಬಯಾಲಜಿಯಲ್ಲಿ ‘ಮಾರ್ಫಾಲಜಿ’ (Morphology) ಚಾಪ್ಟರ್‌ನಲ್ಲಿ

ಉದಾಹರಣೆಗಳಿಗೆ: ಹೆಚ್ಚು ಕಾನ್ಸಂಟ್ರೇಟ್ ಮಾಡಿ. ‘ಅನಾಟಮಿ’ಯಲ್ಲಿ Dicot root ಮತ್ತು Dicot stem ನಡುವಿನ ಡಿಫರೆನ್ಸಸ್ ಬಗ್ಗೆ ಗಮನ ಕೊಡಿ. ಇನ್ನು ಕಾಕ್ರೋಚ್ (Cockroach) ಮತ್ತು ಅರ್ಥ್‌ವಾರ್ಮ್ (Earthworm) ಬಗ್ಗೆ ನೆಗ್ಲೆಕ್ಟ್ ಮಾಡಬೇಡಿ. ಕಾಕ್ರೋಚ್ ಬಗ್ಗೆ ಐದು ಗಂಟೆಗಳ ಕಾಲ ಓದಬೇಕಾಗಬಹುದು, ಯಾಕೆಂದರೆ ಅದರ ಮೇಲೆ ಎರಡು ಮೂರು ಪ್ರಶ್ನೆಗಳು ಬರುವ ಚಾನ್ಸ್ ಇದೆ. ನೋಟ್ಸ್ ಮಾಡಿಕೊಂಡು ಚೆನ್ನಾಗಿ ಓದಿ.

ಸೆಲ್: ಜೀವದ ಘಟಕ – ತ್ವರಿತ ಪುನರಾವಲೋಕನ

‘ಸೆಲ್: ದ ಯೂನಿಟ್ ಆಫ್ ಲೈಫ್’ ಚಾಪ್ಟರ್ ತುಂಬಾ ಇಂಪಾರ್ಟೆಂಟ್.

ಈ ಚಾಪ್ಟರ್‌ನಿಂದಲೇ ಮೂರು ಪ್ರಶ್ನೆಗಳು ಬರುತ್ತವೆ.

ಇದನ್ನು ನೀವು ಕೇವಲ 2-3 ನಿಮಿಷದಲ್ಲಿ ರಿವೈಸ್ ಮಾಡುವಷ್ಟು ಚೆನ್ನಾಗಿ ಓದಿರಬೇಕು.

ಸೆಲ್‌ನ ಸ್ಟ್ರಕ್ಚರ್, ಆರ್ಗನಲ್ಸ್, ಮೈಟೋಕಾಂಡ್ರಿಯಾ, ಕ್ರೋಮ್ಯಾಟಿನ್, ಯುಕ್ರೋಮ್ಯಾಟಿನ್ ಮತ್ತು ಹೆಟೆರೊಕ್ರೋಮ್ಯಾಟಿನ್ ಬಗ್ಗೆ ಆಳವಾಗಿ ತಿಳಿದುಕೊಳ್ಳಿ. ಟೈಮ್ ಕನ್ಸ್ಟೆಂಟ್ ಇರುವುದರಿಂದ, ಶಾರ್ಟ್ ನೋಟ್ಸ್ ಮಾಡಿ ರಿವೈಸ್ ಮಾಡುವುದರಿಂದ ಸಮಯ ನಿಮಗೆ ಉಳಿತಾಯ ಆಗುತ್ತದೆ.

Physics ಸವಾಲು ಏನು? ಮಾಡರ್ನ್ ಫಿಸಿಕ್ಸ್ ಕಡೆ ಗಮನ

ನಮ್ಮ ಕನ್ನಡದ ಮಕ್ಕಳಿಗೆ ಫಿಸಿಕ್ಸ್ ಕಷ್ಟ ಅನ್ನೋದು ನಿಜ. ಆದರೆ ಸಂಪೂರ್ಣವಾಗಿ ಫೋಕಸ್ ಮಾಡೋದು ಕಡಿಮೆಮಾಡಬೇಡಿ.

ಫಿಸಿಕ್ಸ್‌ನಲ್ಲಿ ಮಾಡರ್ನ್ ಫಿಸಿಕ್ಸ್ (Modern Physics) ಮೇಲೆ ಜಾಸ್ತಿ ಕಾನ್ಸಂಟ್ರೇಟ್ ಮಾಡಿ. ಅಟಮ್ಸ್, ನ್ಯೂಕ್ಲಿಯೈ, ಡ್ಯುಯಲ್ ನೇಚರ್ ಆಫ್ ರೇಡಿಯೇಷನ್ ಅಂಡ್ ಮ್ಯಾಟರ್, ಸೆಮಿಕಂಡಕ್ಟರ್‌ಗಳು ಈ ಟಾಪಿಕ್‌ಗಳು ರಿಲೇಟಿವ್ಲಿ ಸುಲಭವಾಗಿರುತ್ತವೆ. ಇವುಗಳ ಮೇಲೆ ಹೆಚ್ಚು ಫೋಕಸ್ ಮಾಡಿದರೆ, 100-110 ಮಾರ್ಕ್ಸ್ ಸುಲಭವಾಗಿ ಗಳಿಸಬಹುದು.

ಇದರಿಂದ ನಿಮ್ಮ ಒಟ್ಟು ಸ್ಕೋರ್ ಹೆಚ್ಚಿಸಲು ಸಹಾಯ ಆಗುತ್ತದೆ.

ಪೋಷಕರಿಗೆ ನಮ್ಮ ಮನವಿ! ಮಕ್ಕಳ ಮೇಲೆ ಒತ್ತಡ ಹಾಕಬೇಡಿ

ಪೋಷಕರಲ್ಲಿ ಒಂದು ಮನವಿ. ನಿಮ್ಮ ಮಕ್ಕಳು ಡಾಕ್ಟರ್ ಆಗಬೇಕು ಅನ್ನೋ ಆಸೆ ಇರುವುದು ಸಹಜ. ಆದರೆ, ‘ಡಾಕ್ಟರೇ ಆಗಬೇಕು’ ಅನ್ನೋ ಹಠದಿಂದ ಹೊರಬನ್ನಿ. ಮಕ್ಕಳನ್ನು ಬೇರೆ ಮಕ್ಕಳೊಂದಿಗೆ ಕಂಪೇರ್ ಮಾಡಬೇಡಿ.

ಅವರು ನಿಮ್ಮ ಮನೆಯಲ್ಲಿರುವ ರತ್ನಗಳು, ಒತ್ತಡದಿಂದ ಅವರು ಕಳೆದುಹೋಗಬಾರದು.

ಅವರ ಸಾಮರ್ಥ್ಯವನ್ನು ಅರ್ಥ ಮಾಡಿಕೊಂಡು ಪ್ರೋತ್ಸಾಹಿಸಿ. ಮಕ್ಕಳಿಗೆ ನೆಮ್ಮದಿ ಮತ್ತು ಆತ್ಮವಿಶ್ವಾಸ ನೀಡುವುದು ಈಗಿನ ಪರಿಸ್ಥಿತಿಯಲ್ಲಿ ತುಂಬಾ ಮುಖ್ಯ.

ಇದನ್ನು ಓದಿ:

PM YASASVI ಸ್ಕಾಲರ್‌ಶಿಪ್ 2026: ಪರೀಕ್ಷೆ ಇಲ್ಲದೆ ₹3 ಲಕ್ಷ ಪಡೆಯುವುದು ಈಗ ಸುಲಭ

Leave a Comment