RTE ಉಚಿತ ಶಿಕ್ಷಣ 8, 9, 10ನೇ ತರಗತಿಗೆ ಈಗ ವಿಸ್ತರಣೆ: ಮಕ್ಕಳಿಗೆ ಶುಭ ಸುದ್ದಿ!

ರಾಜ್ಯ ಸರ್ಕಾರದಿಂದ ಹೋಸ ಸುದ್ದಿ. RTE ಅಡಿಯಲ್ಲಿ ಓದುತ್ತಿರುವ ಮಕ್ಕಳಿಗೆ ಒಂದು ಗುಡ್ ನ್ಯೂಸ್ ಇಲ್ಲಿದೆ. SC/ST ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು 8, 9, 10ನೇ ತರಗತಿಗೂ ವಿಸ್ತರಿಸಲು ಸರ್ಕಾರ ಹೋಸ ಆದೇಶ ಹೊರಡಿಸಿದೆ.

ಇದು ಅನೇಕ ಬಡ ಮತ್ತು ಹಿಂದುಳಿದ ಮಕ್ಕಳ ಶಿಕ್ಷಣದ ಕನಸಿಗೆ ಹೊಸ ರೆಕ್ಕೆ ನೀಡಿದಂತಾಗಿದೆ ಹಾಗಿದೆ. ಶಿಕ್ಷಣದ ಹಕ್ಕಿನ ವ್ಯಾಪ್ತಿಯನ್ನು ಹೆಚ್ಚಿಸುವುದರ ಮೂಲಕ ಸಮಾಜದ ಎಲ್ಲ ಸ್ತರಗಳ ಮಕ್ಕಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸರ್ಕಾರದ ಈ ನಿರ್ಧಾರ ನೆರವಾಗಲಿದೆ.

RTE ವಿಸ್ತರಣೆ: ಸರ್ಕಾರದ ಒಂದು ಮಹತ್ವದ ನಿರ್ಧಾರ

ರಾಜ್ಯ ಸರ್ಕಾರವು ರೈಟ್ ಟು ಎಜುಕೇಶನ್ (RTE) ಯೋಜನೆಯ ವ್ಯಾಪ್ತಿಯನ್ನು ವಿಸ್ತರಿಸುವ ಮೂಲಕ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಈ ಹಿಂದೆ 1 ರಿಂದ 8ನೇ ತರಗತಿವರೆಗೆ ಇದ್ದ ಉಚಿತ ಶಿಕ್ಷಣದ ಹಕ್ಕನ್ನು ಇದೀಗ 9 ಮತ್ತು 10ನೇ ತರಗತಿಗಳಿಗೂ ಅನ್ವಯಿಸಲಾಗುತ್ತಿದೆ.

ಈ ನಿರ್ಧಾರವು ವಿಶೇಷವಾಗಿ SC/ST ಸಮುದಾಯದ ವಿದ್ಯಾರ್ಥಿಗಳಿಗೆ ದೊಡ್ಡ ಮಟ್ಟದಲ್ಲಿ ಅನುಕೂಲ ಮಾಡಿಕೊಡಲಿದೆ ಅಂತ ಹೇಳಬಹುದು.

ಇನ್ಮುಂದೆ ಈ ಮಕ್ಕಳು ತಮ್ಮ ಪ್ರೌಢಶಿಕ್ಷಣವನ್ನೂ ಯಾವುದೇ ಆರ್ಥಿಕ ಅಡೆತಡೆಯಿಲ್ಲದೆ ಪೂರೈಸಲು ಸಾಧ್ಯವಾಗುತ್ತದೆ.

ಯಾರಿಗೆ ಹೊಸ ರೂಲ್ಸ್ ಅನ್ವಯ? SC/ST ವಿದ್ಯಾರ್ಥಿಗಳಿಗೆ ಸ್ಪೆಷಲ್

RTE ಅಡಿಯಲ್ಲಿ ಉಚಿತ ಶಿಕ್ಷಣ ವಿಸ್ತರಣೆಯ ಲಾಭ ಪ್ರಮುಖವಾಗಿ ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡ (ST) ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯ ಆಗುತ್ತೆ. ಈ ಸಮುದಾಯಗಳ ಮಕ್ಕಳಿಗೆ 8, 9 ಮತ್ತು 10ನೇ ತರಗತಿಗಳಲ್ಲಿಯೂ ಸಹ ಉಚಿತ ಶಿಕ್ಷಣ ಮುಂದುವರಿಯಲಿದೆ.

ಇದು ಶಿಕ್ಷಣದಲ್ಲಿ ಸಮಾನತೆ ತರುವ ಸರ್ಕಾರದ ಪ್ರಯತ್ನದ ಒಂದು ಭಾಗವಾಗಿದೆ. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ಪ್ರೌಢಶಿಕ್ಷಣವನ್ನು ಪೂರ್ಣಗೊಳಿಸಿ ಉತ್ತಮ ವೃತ್ತಿಜೀವನ ರೂಪಿಸಿಕೊಳ್ಳಲು ಹೆಲ್ಪ್ ಆಗಲಿದೆ.

ಹಂತ ಹಂತವಾಗಿ ಜಾರಿ! ಮುಂದಿನ ಶೈಕ್ಷಣಿಕ ವರ್ಷಗಳು:

  • ಈ 2025-26ನೇ ಶೈಕ್ಷಣಿಕ ಸಾಲಿನಲ್ಲಿ, ಎಂಟನೇ ತರಗತಿಯಲ್ಲಿರುವ SC/ST ವಿದ್ಯಾರ್ಥಿಗಳಿಗೆ ಈ ಹೊಸ ನಿಯಮ ಅನ್ವಯ ಆಗುತ್ತೆ.
  • ನಂತರ, 2026-27ನೇ ಶೈಕ್ಷಣಿಕ ಸಾಲಿನಿಂದ, ಒಂಬತ್ತನೇ ತರಗತಿಯಲ್ಲಿರುವ ಮಕ್ಕಳಿಗೆ ಈ ಸೌಲಭ್ಯ ಸಿಗಲಿದೆ.
  • ಇದೇ ರೀತಿ ಮುಂದಿನ ವರ್ಷಗಳಲ್ಲಿ 10ನೇ ತರಗತಿಗೂ ಎಕ್ಸ್ಟೆಂಡ್ ಆಗುತ್ತೆ.

ಉಚಿತ ಶಿಕ್ಷಣದ ಹಕ್ಕು: ಪ್ರಮುಖ ನಿಯಮಗಳು

  • ಯಾವುದೇ ಮಗುವಿಗೆ ಶಾಲೆಗೆ ಸೇರಿಕೊಳುವಾಗ ದಾಖಲಾತಿ ನಿರಾಕರಿಸುವಂತಿಲ್ಲ.
  • ಸುತ್ತಮುತ್ತಲಿನ ಖಾಸಗಿ ಶಾಲೆಗಳಲ್ಲಿ 25% ಸೀಟುಗಳನ್ನು ಬಡ ಮಕ್ಕಳಿಗೆ ಮೀಸಲಿಡಲಾಗುತ್ತೆ.
  • ಈ ಸೀಟುಗಳಲ್ಲಿ ದಾಖಲಾದ ವಿದ್ಯಾರ್ಥಿಗಳ ಶುಲ್ಕವನ್ನು ರಾಜ್ಯ ಸರ್ಕಾರ ಭರಿಸುತ್ತೆ.
  • ಇದು ಖಾಸಗಿ ಶಾಲೆಗಳಲ್ಲೂ ಸಮಾಜದ ಎಲ್ಲ ವರ್ಗದ ಮಕ್ಕಳು ಒಟ್ಟಿಗೆ ಕಲಿಯುವ ಅವಕಾಶ ಕಲ್ಪಿಸಿ ಕೊಡುತ್ತೆ.

ನೆರೆಹೊರೆಯ ಶಾಲೆ ನಿಯಮಗಳು

  • ಪ್ರಾಥಮಿಕ ಶಿಕ್ಷಣಕ್ಕಾಗಿ (1-5ನೇ ತರಗತಿ) ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಶಾಲೆ ಇರಬೇಕು.
  • ಉನ್ನತ ಪ್ರಾಥಮಿಕ ಶಿಕ್ಷಣಕ್ಕಾಗಿ (6-8ನೇ ತರಗತಿ) ಮೂರು ಕಿಲೋಮೀಟರ್ ವ್ಯಾಪ್ತಿಯಲ್ಲಿ ಶಾಲೆ ಇರಬೇಕು.

ದಾಖಲಾತಿ ಪ್ರಕ್ರಿಯೆ ಮತ್ತು ವಯಸ್ಸಿನ ಮಿತಿ

RTE ಅಡಿಯಲ್ಲಿ ಮಕ್ಕಳ ದಾಖಲಾತಿ ಪ್ರಕ್ರಿಯೆ ಸರಳವಾಗಿದೆ.

ಮಗುವಿನ ವಯಸ್ಸನ್ನು ಕನ್ಫರ್ಮ್ ಮಾಡಿಕೊಳಲು ಅವರ ಜನನ ಪ್ರಮಾಣಪತ್ರವನ್ನು ಬಳಸಲಾಗುತ್ತೆ.

ಒಂದು ವೇಳೆ ಯಾವುದೇ ಮಗು ವಯಸ್ಸಿನ ಮಿತಿಗಿಂತ ಹೆಚ್ಚಿದ್ದರೂ ಸಹ, ಶಾಲೆಗೆ ದಾಖಲಾತಿಯನ್ನು ನಿರಾಕರಿಸುವಂತಿಲ್ಲ. ಅಂತಹ ಮಕ್ಕಳಿಗೆ ಅವರ ವಯಸ್ಸಿಗೆ ತಕ್ಕಂತೆ ವಿಶೇಷ ತರಗತಿಗಳನ್ನು ಏರ್ಪಡಿಸುವ ಮೂಲಕ ಶಿಕ್ಷಣವನ್ನು ಪೂರೈಸಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಇದು ಶಿಕ್ಷಣದಿಂದ ಯಾರೂ ವಂಚಿತರಾಗಬಾರದು ಎಂಬುದು ಸರ್ಕಾರದ ಉದ್ದೇಶ.

ಸರ್ಕಾರಿ ಆದೇಶ ಮತ್ತು ನಿರೀಕ್ಷೆಗಳು

ರಾಜ್ಯ ಸರ್ಕಾರ ಈ ವಿಸ್ತರಣೆಗೆ ಸಂಬಂಧಿಸಿದಂತೆ ಫೈನಲ್ ಆದೇಶವನ್ನು ಹೊರಡಿಸಿದೆ. ಈ ಆದೇಶದ ಬಗ್ಗೆ ಪೋಷಕರು ಮತ್ತು ವಿದ್ಯಾರ್ಥಿ ಸಮುದಾಯದಲ್ಲಿ ಭಾರಿ ನಿರೀಕ್ಷೆಗಳಿವೆ.

ಶುಲ್ಕ ವಿನಾಯಿತಿ, 25% ಮೀಸಲಾತಿ, ಮತ್ತು ನೆರೆಹೊರೆಯ ಶಾಲೆಗಳ ನಿಯಮಗಳು ಈ ಹೊಸ ವಿಸ್ತರಣೆಗೂ ಅನ್ವಯಿಸುತ್ತವೆ. ಈ ಯೋಜನೆಯ ಯಶಸ್ವಿ ಜಾರಿಯಿಂದ ಲಕ್ಷಾಂತರ ಮಕ್ಕಳಿಗೆ ಲಾಭ ಸಿಗಲಿದೆ.

ಇದನ್ನು ಓದಿ:

NEET ಪರೀಕ್ಷೆ: ಯಾವ ಸಬ್ಜೆಕ್ಟ್​​ಗೆ ಮಕ್ಕಳು ಹೆಚ್ಚು Focus ಮಾಡಬೇಕು? ಇಲ್ಲಿದೆ ಸುಲಭ ಮಾರ್ಗ!

PM YASASVI ಸ್ಕಾಲರ್‌ಶಿಪ್ 2026: ಪರೀಕ್ಷೆ ಇಲ್ಲದೆ ₹3 ಲಕ್ಷ ಪಡೆಯುವುದು ಈಗ ಸುಲಭ

Leave a Comment