ಸ್ವಂತ ಮನೆ ಕಟಬೇಕು ಅನ್ನೋ ಕನಸು ಪ್ರತಿಯೊಬ್ಬರದ್ದಾಗಿರುತ್ತದೆ, ಆದರೆ ಆ ಕನಸನ್ನು ನನಸು ಮಾಡಲು ಹೋಮ್ ಲೋನ್ ಆಶ್ರಯಿಸಬೇಕಾಗುತ್ತದೆ. ಇಲ್ಲಿ ಲೋನ್ ಪಡೆಯುವುದು ತಪ್ಪಲ್ಲ, ಆದರೆ ಅದರ ಬಗ್ಗೆ ಸರಿಯಾಗಿ ತಿಳಿದುಕೊಳ್ಳದೆ ಹೋದರೆ ಬ್ಯಾಂಕ್‌ಗಳು ಮಾತ್ರ ಉದ್ದಾರವಾಗುತ್ತವೆ, ನೀವು ಸಾಲದ ಸುಳಿಗೆ ಸಿಲುಕಬಹುದು ಇದ್ದು ನೆನಪಿನಲ್ಲಿಡಿ.
ಬ್ಯಾಂಕ್‌ಗಳು ಹೇಳದೆ ಇರುವಂತಹ ಲೆಕ್ಕಾಚಾರಗಳು, ಗುಪ್ತ ಶುಲ್ಕಗಳು ಮತ್ತು ಕೆಲವು ಜಾಣ ಆಯ್ಕೆಗಳ ಬಗ್ಗೆ ತಿಳಿದುಕೊಂಡರೆ ನಿಮ್ಮ ಲಕ್ಷಾಂತರ ರೂಪಾಯಿ ಬಡ್ಡಿ ಉಳಿಸಬಹುದು. ನಿಮ್ಮ ಲೋನ್ ಅವಧಿಯನ್ನೂ ಕಡಿಮೆ ಮಾಡಿಕೊಂಡು ನೆಮ್ಮದಿಯಾಗಿ ಬದುಕಲು ಈ ಮಾಹಿತಿ ನಿಮಗೆ ಉಪಯೋಗವಾಗುತ್ತದೆ. ಮನೆ ಸಾಲದ ಇಂತಹ ಮಹತ್ವದ ವಿಷಯಗಳ ಬಗ್ಗೆ ಈಗ ತಿಳಿದುಕೊಳ್ಳೋಣ.
ಮೊದಲ 5 ವರ್ಷಗಳಲ್ಲಿ ಯಾಕೆ ಬಡ್ಡಿಯೇ ಹೆಚ್ಚು!
ಹೋಮ್ ಲೋನ್ ಪಡೆದಾಗ ಮೊದಲ ಐದು ವರ್ಷಗಳು ಅತ್ಯಂತ ನಿರ್ಣಾಯಕ. ಏಕೆಂದರೆ, ಈ ಅವಧಿಯಲ್ಲಿ ನೀವು ಕಟ್ಟುವ EMI ನಲ್ಲಿ ಸಿಂಹಪಾಲು ಬಡ್ಡಿಗೇ ಹೋಗುತ್ತದೆ.
ಉದಾಹರಣೆಗೆ, 50 ಲಕ್ಷ ರೂ. ಸಾಲವನ್ನು 20 ವರ್ಷಗಳ ಅವಧಿಗೆ, 8.5% ಬಡ್ಡಿದರದಲ್ಲಿ ನೀವು ತೆಗೆದುಕೊಂಡರೆ, ಮೊದಲ ತಿಂಗಳ EMI ನಲ್ಲಿ ನಿಮ್ಮ ಹಣ ಸುಮಾರು 82% ಬಡ್ಡಿಗೇ ಹೋಗುತ್ತದೆ.
ಹಾಗಾಗಿ, ಆರಂಭದಲ್ಲೇ ಹೆಚ್ಚುವರಿ ಪಾವತಿ (Part Payment) ಮಾಡುವುದು ಬಡ್ಡಿಯ ಭಾರವನ್ನು ಕಡಿಮೆ ಮಾಡಲು ಅತ್ಯುತ್ತಮ ಮಾರ್ಗವಾಗಿದೆ. ಎಷ್ಟು ಬೇಗ ಪಾರ್ಟ್ ಪೇಮೆಂಟ್ ಮಾಡುತ್ತೀರೋ ಅಷ್ಟು ನಿಮಗೆ ಅನುಕೂಲ.
ಪಾರ್ಟ್ ಪೇಮೆಂಟ್: ಬಡ್ಡಿ ಉಳಿಸಲು ಜಾಣ ಹೆಜ್ಜೆ ಇಲ್ಲಿವೆ
ನಿಮ್ಮಲ್ಲಿ ಹೆಚ್ಚುವರಿ ಹಣವಿದ್ದಾಗ ಪಾರ್ಟ್ ಪೇಮೆಂಟ್ ಮಾಡುವುದು ಬಡ್ಡಿಯ ಹೊರೆಯನ್ನು ತಗ್ಗಿಸಲು ಇರುವ ಜಾಣ ಆಯ್ಕೆ.
ಉದಾಹರಣೆಗೆ, ವರ್ಷಕ್ಕೆ 12 EMI ಬದಲಿಗೆ, ಒಂದು ಹೆಚ್ಚುವರಿ EMI ಕಟ್ಟಿದರೆ 20 ವರ್ಷಗಳ ಲೋನ್ 16 ವರ್ಷ 9 ತಿಂಗಳಿಗೆ ಮುಗಿಯಬಹುದು. ಇದರಿಂದ ಸುಮಾರು ₹10 ಲಕ್ಷಕ್ಕೂ ಹೆಚ್ಚು ಬಡ್ಡಿ ಉಳಿತಾಯವಾಗುತ್ತದೆ.
ಇನ್ನೂ ಎರಡು ಹೆಚ್ಚುವರಿ EMI ಕಟ್ಟಿದರೆ (ವರ್ಷಕ್ಕೆ 14 EMI), ಲೋನ್ 14 ವರ್ಷ 5 ತಿಂಗಳಿಗೆ ಮುಗಿದು, ಸುಮಾರು ₹17 ಲಕ್ಷ ಬಡ್ಡಿ ಉಳಿಯುತ್ತದೆ.
ಈ ರೀತಿ ಉಪಾಯದಿಂದ ಪಾವತಿಸುವುದರಿಂದ ಸಾಲದ ಅವಧಿ ಮತ್ತು ಬಡ್ಡಿ ಎರಡೂ ಕಡಿಮೆಯಾಗುತ್ತವೆ.
ಪ್ರೀ-ಪೇಮೆಂಟ್‌ಗೆ ದಂಡವಿಲ್ಲ: RBI ನಿಯಮ ಇಲ್ಲಿದೆ!
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ನೀಡಿದ ಕಟ್ಟುನಿಟ್ಟಿನ ಸೂಚನೆಗಳ ಪ್ರಕಾರ, ಹೋಮ್ ಲೋನ್‌ಗೆ ಪ್ರೀ-ಪೇಮೆಂಟ್ (ಸಾಲದ ಅವಧಿಗಿಂತ ಮುಂಚಿತವಾಗಿ ಪೂರ್ತಿ ಹಣ ಪಾವತಿಸುವುದು) ಅಥವಾ ಪಾರ್ಟ್ ಪೇಮೆಂಟ್ ಮಾಡಿದರೆ, ಬ್ಯಾಂಕ್‌ಗಳು ಯಾವುದೇ ದಂಡವನ್ನು ವಿಧಿಸುವಂತಿಲ್ಲ.
ಇದು ಫ್ಲೋಟಿಂಗ್ ಬಡ್ಡಿದರದ ಹೋಮ್ ಲೋನ್‌ಗಳಿಗೆ ಅನ್ವಯಿಸುತ್ತದೆ.
ನೀವು ಬೇಕಿದ್ದರೆ ಆನ್‌ಲೈನ್‌ನಲ್ಲಿ ಅಥವಾ ಬ್ಯಾಂಕ್‌ಗೆ ಭೇಟಿ ನೀಡಿ ಹೆಚ್ಚುವರಿ ಕಂತುಗಳನ್ನು ಕಟ್ಟಬಹುದು.
ನಿಮ್ಮ ಪಾವತಿಯ ನಂತರ ಒಟ್ಟು ಬಾಕಿ ಉಳಿದಿರುವ ಲೋನ್ ಮೊತ್ತ ಕಡಿಮೆಯಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ.
ಹೋಮ್ ಲೋನ್ ಇನ್ಶೂರೆನ್ಸ್ ಬೇಡ, ಟರ್ಮ್ ಇನ್ಶೂರೆನ್ಸ್ ಮಾಡಿಸಿ
ಬ್ಯಾಂಕುಗಳು ಹೋಮ್ ಲೋನ್ ಜೊತೆಗೆ ಇನ್ಶೂರೆನ್ಸ್ ತೆಗೆದುಕೊಳ್ಳಲು ಒತ್ತಾಯಿಸಬಹುದು, ಆದರೆ ಇದು ಕಡ್ಡಾಯವಲ್ಲ.
ನಿಮ್ಮ ಲೋನ್ ಮೊತ್ತಕ್ಕೆ ಇನ್ಶೂರೆನ್ಸ್ ಪ್ರೀಮಿಯಂ ಸೇರಿಸಿ, ಒಟ್ಟು ಲೋನ್ ಮೊತ್ತವನ್ನು ಹೆಚ್ಚಿಸುವುದರಿಂದ 20 ವರ್ಷಗಳ ಕಾಲ ಅದರ ಬಡ್ಡಿ ನೀವೇ ಕಟ್ಟಬೇಕಾಗುತ್ತದೆ.
ಹೋಮ್ ಲೋನ್ ಇನ್ಶೂರೆನ್ಸ್ ನಿಮಗೆ ಹೆಚ್ಚಿನ ಲಾಭ ನೀಡುವುದಿಲ್ಲ, ಏಕೆಂದರೆ ಲೋನ್ ಮುಗಿದ ಕೂಡಲೇ ಅದರ ಕವರೇಜ್ ನಿಲ್ಲುತ್ತದೆ ಸರ್. ಬದಲಿಗೆ, ಟರ್ಮ್ ಇನ್ಶೂರೆನ್ಸ್ ತೆಗೆದುಕೊಳ್ಳಿ. ಒಂದು ಕೋಟಿ ರೂ. ಟರ್ಮ್ ಇನ್ಶೂರೆನ್ಸ್ ಇದ್ದರೆ, ನಿಮಗೆ ಏನಾದರೂ ಆದರೆ ನಿಮ್ಮ ಕುಟುಂಬಕ್ಕೆ ಆ ಹಣ ಸಿಗುತ್ತದೆ. ಅದನ್ನು ಹೋಮ್ ಲೋನ್ ಕಟ್ಟಲೂ ಬಳಸಬಹುದು, ಉಳಿದ ಹಣ ಕುಟುಂಬದ ಅಗತ್ಯಕ್ಕೂ ನೆರವಾಗುತ್ತದೆ.
ಸಿಬಿಲ್ ಸ್ಕೋರ್: ಉತ್ತಮ ಬಡ್ಡಿದರಕ್ಕೆ ಕೀಲಿ ಕೈ ಇದೇ ನೋಡಿ
ಉತ್ತಮ ಸಿಬಿಲ್ ಸ್ಕೋರ್ (ಕ್ರೆಡಿಟ್ ಸ್ಕೋರ್) ಹೊಂದಿದ್ದರೆ ನಿಮಗೆ ಕಡಿಮೆ ಬಡ್ಡಿದರದಲ್ಲಿ ಹೋಮ್ ಲೋನ್ ಸಿಗುವ ಸಾಧ್ಯತೆ ಹೆಚ್ಚು. ಹೆಚ್ಚಿನ ಜನ ಸಿಬಿಲ್ ಸ್ಕೋರ್ ಗಮನ ಕೊಡುವುದೀಲ್ಲ.
ಸಾಲಗಳನ್ನು ಅಥವಾ ಕ್ರೆಡಿಟ್ ಕಾರ್ಡ್ EMI ಗಳನ್ನು ಸರಿಯಾಗಿ ಕಟ್ಟದೆ ಹೋದರೆ ಸಿಬಿಲ್ ಸ್ಕೋರ್ ಕಡಿಮೆಯಾಗುತ್ತದೆ. 825-850 ರ ಆಸುಪಾಸಿನ ಉತ್ತಮ ಸಿಬಿಲ್ ಸ್ಕೋರ್ ಇದ್ದರೆ 7.5%-8% ಬಡ್ಡಿದರದಲ್ಲಿ ಲೋನ್ ಪಡೆಯಬಹುದು.
ಸಿಬಿಲ್ ಸ್ಕೋರ್ ಕಡಿಮೆ ಇದ್ದರೆ ಬ್ಯಾಂಕುಗಳು ನಿಮ್ಮನ್ನು ಟ್ರಸ್ಟ್ ಮಾಡೋದಿಲ್ಲ (ಉಂಟರ್ಸ್ಟೆಡ್) ಎಂದು ಪರಿಗಣಿಸಿ ಬಡ್ಡಿದರವನ್ನು 9% ಕ್ಕಿಂತ ಹೆಚ್ಚಿಗೆ ಇಡಬಹುದು, ಇದರಿಂದ ಲಕ್ಷಾಂತರ ರೂ. ಹೆಚ್ಚು ಬಡ್ಡಿ ಕಟ್ಟಬೇಕಾಗಬಹುದು.
ಕಡಿಮೆ ಸಿಬಿಲ್ ಸ್ಕೋರ್ ಇದ್ದರೆ ಏನು ಮಾಡಬೇಕು?
ಹೋಮ್ ಲೋನ್‌ಗೆ ಅರ್ಜಿ ಸಲ್ಲಿಸುವ ಮುನ್ನ ನಿಮ್ಮ ಕ್ರೆಡಿಟ್ ಸ್ಕೋರ್ ಪರಿಶೀಲಿಸುವುದು ಕಡ್ಡಾಯ. ನಿಮ್ಮ ಸಿಬಿಲ್ ಸ್ಕೋರ್ 750ಕ್ಕಿಂತ ಕಡಿಮೆಯಿದ್ದರೆ, ಅದನ್ನು ಸರಿಪಡಿಸಿಕೊಳ್ಳಲು ಕೆಲವು ಆಪ್‌ಗಳು ಮತ್ತು ಪ್ಲಾಟ್‌ಫಾರ್ಮ್‌ಗಳು ಲಭ್ಯವಿವೆ.
ನಿಮ್ಮ ಸಿಬಿಲ್ ರಿಪೋರ್ಟ್‌ನಲ್ಲಿ ಏನಾದರೂ ತಪ್ಪುಗಳಿದ್ದರೆ ಅಥವಾ ಅದನ್ನು ಹೇಗೆ ಸುಧಾರಿಸಬೇಕು ಎಂಬುದಕ್ಕೆ ಈ ಆಪ್‌ಗಳು ಸಹಾಯ ನೀಡುತ್ತವೆ. ಸಿಬಿಲ್ ಸ್ಕೋರ್ ಅನ್ನು ಮೊದಲು ಸುಧಾರಿಸಿಕೊಂಡು ನಂತರ ಲೋನ್‌ಗೆ ಅರ್ಜಿ ಸಲ್ಲಿಸುವುದು ಯಾವಾಗಲೂ ಬುದ್ಧಿವಂತಿಕೆಯ ಕೆಲಸ.
EMI ಹೆಚ್ಚಿಸಬೇಕಾ? ಲೋನ್ ಅವಧಿ ವಿಸ್ತರಿಸಬೇಕಾ?
ಆರ್ಥಿಕ ಪರಿಸ್ಥಿತಿ ಚೆನ್ನಾಗಿದ್ದರೆ ಯಾವಾಗಲೂ EMI ಮೊತ್ತವನ್ನು ಹೆಚ್ಚು ಮಾಡಿಕೊಳ್ಳುವುದು ಉತ್ತಮ. ಲೋನ್ ಅವಧಿಯನ್ನು (ಟೆನ್ಯೂರ್) ವಿಸ್ತರಿಸಿದರೆ ಬಡ್ಡಿ ಭಾರ ಹೆಚ್ಚಾಗುತ್ತದೆ.
ಉದಾಹರಣೆಗೆ, RBI ರೆಪೋ ರೇಟ್ ಹೆಚ್ಚಿಸಿದಾಗ ಬ್ಯಾಂಕುಗಳು ಬಡ್ಡಿದರವನ್ನು ಹೆಚ್ಚಿಸುತ್ತವೆ. ಆಗ ಅವರು ನಿಮಗೆ EMI ಹೆಚ್ಚಿಸುವುದೋ ಅಥವಾ ಅವಧಿಯನ್ನು ವಿಸ್ತರಿಸುವುದೋ ಎಂಬ ಆಯ್ಕೆ ನೀಡುತ್ತಾರೆ.
ಇಂತಹ ಸಂದರ್ಭದಲ್ಲಿ, EMI ಹೆಚ್ಚಿಸಿಕೊಳ್ಳುವುದು ಉತ್ತಮ.
ಇದರಿಂದ ಒಟ್ಟು ಕಟ್ಟುವ ಬಡ್ಡಿ ಕಡಿಮೆ ಆಗುತ್ತದೆ ಮತ್ತು ಸಾಲ ಬೇಗ ಮುಕ್ತಾಯವಾಗುತ್ತದೆ. ಬ್ಯಾಂಕ್‌ಗಳು ಉದ್ದಾರವಾಗುವ ಬದಲು ನೀವೇ ಉದ್ದಾರ ಆಗಿಬಿಡಿ ಇದು ಮುಖ್ಯ.
ರೆಪೋ ರೇಟ್ ಇಳಿಕೆಯ ಲಾಭ ಪಡೆಯುವುದು ಹೇಗೆ?
RBI ರೆಪೋ ರೇಟ್ ಕಡಿಮೆ ಮಾಡಿದಾಗ, ರೆಪೋ ಆಧಾರಿತ ಹೋಮ್ ಲೋನ್ ಪಡೆದವರಿಗೆ ಅದರ ಲಾಭ ಸಿಗಬೇಕು. ಒಂದರಿಂದ ಮೂರು ತಿಂಗಳೊಳಗೆ ಬ್ಯಾಂಕುಗಳು ಈ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಬೇಕು ಎಂದು RBI ಸೂಚನೆ ನೀಡಿದೆ. ಆದರೆ ಕೆಲವೊಮ್ಮೆ ಬ್ಯಾಂಕುಗಳು ಈ ಬಡ್ಡಿದರವನ್ನು ತಗ್ಗಿಸುವುದಿಲ್ಲ. ಇದನ್ನು ಗಮನಿಸದೆ ಹೋದರೆ ಅನಗತ್ಯವಾಗಿ ಲಕ್ಷಾಂತರ ರೂ. ಬಡ್ಡಿಯನ್ನು ನೀವೇ ಕಟ್ಟಬೇಕಾಗುತ್ತದೆ.
ನಿಮ್ಮ ಬಡ್ಡಿದರವನ್ನು ಕಡಿಮೆ ಮಾಡಲು ಬ್ಯಾಂಕ್‌ಗೆ ಹೇಗೆ ಅರ್ಜಿ ಹಾಕಬೇಕು?
ಯಾರನ್ನು ಸಂಪರ್ಕಿಸಬೇಕು ಎಂದು ಗೊತ್ತಿಲ್ಲದಿದ್ದರೆ ಮುಂದೆ ತಿಳಿಸಿರುವ AI ಆಧಾರಿತ ಪ್ಲಾಟ್‌ಫಾರ್ಮ್ ಸಹಾಯ ಮಾಡಬಹುದು.
ಉಲ್ಕಾ (Ulka) ಪ್ಲಾಟ್‌ಫಾರ್ಮ್‌ನಿಂದ ಬಡ್ಡಿ ಇಳಿಕೆ
ರೆಪೋ ರೇಟ್ ಇಳಿಕೆಯ ಲಾಭ ಸಿಗದಿದ್ದಾಗ ಬ್ಯಾಂಕ್‌ಗಳನ್ನು ಹೇಗೆ ಸಂಪರ್ಕಿಸಬೇಕು, ಪತ್ರ ಬರೆಯುವುದು ಹೇಗೆ ಎಂಬ ಗೊಂದಲ ಅನೇಕರಿಗಿದೆ.
‘ಉಲ್ಕಾ’ ಎಂಬ AI ಪ್ಲಾಟ್‌ಫಾರ್ಮ್ ಇಂತಹ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಇದು ನಿಮ್ಮ ಬ್ಯಾಂಕಿನ ಟೆಂಪ್ಲೇಟ್‌ಗಳಿಗೆ ಅನುಗುಣವಾಗಿ ಇಮೇಲ್ ಡ್ರಾಫ್ಟ್ ಮಾಡಲು ಸಹಾಯ ಮಾಡುತ್ತದೆ, ಯಾರಿಗೆ ಕಳುಹಿಸಬೇಕು, ಹೇಗೆ ಫಾಲೋ ಅಪ್ ಮಾಡಬೇಕು ಎಂದು ಮಾರ್ಗದರ್ಶನ ನೀಡುತ್ತದೆ.
ಉದಾಹರಣೆಗೆ, ಒಬ್ಬ ಗ್ರಾಹಕರು ಈ ಪ್ಲಾಟ್‌ಫಾರ್ಮ್ ಬಳಸಿ ಬ್ಯಾಂಕ್‌ಗೆ ಮೇಲ್ ಮಾಡಿದಾಗ, 8.45% ಇದ್ದ ಬಡ್ಡಿದರ 7.70% ಗೆ ಇಳಿದಿದ್ದು, ಕೇವಲ 2 ಗಂಟೆಗಳಲ್ಲಿ ಬ್ಯಾಂಕ್ ಇದನ್ನು ಖಚಿತಪಡಿಸಿದೆ.
ಇದರಿಂದ ಲಕ್ಷಾಂತರ ರೂ. ನಿಮಗೆ ಉಳಿತಾಯವಾಗಿದೆ.
ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ (ಪೋರ್ಟಿಂಗ್)
ನಿಮ್ಮ ಸಿಮ್ ಕಾರ್ಡ್ ಪೋರ್ಟ್ ಮಾಡುವಂತೆ ಹೋಮ್ ಲೋನ್ ಸಹ ಪೋರ್ಟ್ ಮಾಡಬಹುದು. ನೀವು ಕರೆಂಟ್ ಇರುವ ಬ್ಯಾಂಕ್ ನಿಮಗೆ ಕಡಿಮೆ ಬಡ್ಡಿದರ ನೀಡಲು ಒಪ್ಪದಿದ್ದರೆ, ಕಡಿಮೆ ಬಡ್ಡಿದರ ನೀಡುವ ಬೇರೆ ಬ್ಯಾಂಕ್‌ಗೆ ನಿಮ್ಮ ಹೋಮ್ ಲೋನ್ ಅನ್ನು ವರ್ಗಾಯಿಸಬಹುದು.
ಇದನ್ನು ‘ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್’ ಎನ್ನುತ್ತಾರೆ. ಆದರೆ ಹೊಸ ಬ್ಯಾಂಕ್‌ಗೆ ವರ್ಗಾಯಿಸುವಾಗ ಪ್ರೊಸೆಸಿಂಗ್ ಫೀ, ಲೀಗಲ್ ಫೀ ಮುಂತಾದ ಶುಲ್ಕಗಳು ಇರುತ್ತವೆ. ಈ ಎಲ್ಲಾ ಲೆಕ್ಕಾಚಾರಗಳನ್ನು ಪರಿಗಣಿಸಿ, ನಿಮಗೆ ಲಾಭವಾಗುತ್ತದೆಯೇ ಎಂದು ಖಚಿತಪಡಿಸಿಕೊಂಡು ಲೋನ್ ಟ್ರಾನ್ಸ್‌ಫರ್ ಮಾಡಿ. ಇದು ಬಡ್ಡಿದರ ಕಡಿಮೆ ಮಾಡಲು ಪರಿಣಾಮಕಾರಿ ಅಸ್ತ್ರ.
ಗುಪ್ತ ಶುಲ್ಕಗಳು ಮತ್ತು ಮೂಲ ದಾಖಲೆಗಳು
- ಪ್ರೊಸೆಸಿಂಗ್ ಫೀ, ಲೀಗಲ್ ಫೀ, ಡಾಕ್ಯುಮೆಂಟೇಶನ್ ಶುಲ್ಕಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಿರಿ. ಫ್ಲೋಟಿಂಗ್ ಬಡ್ಡಿದರದ ಲೋನ್‌ಗಳಿಗೆ ಪ್ರೀ-ಕ್ಲೋಸರ್ ಶುಲ್ಕಗಳು ಇರುವುದಿಲ್ಲ.
- ಯಾವುದೇ ಒಪ್ಪಂದಕ್ಕೆ ಸಹಿ ಹಾಕುವ ಮುನ್ನ, ಪ್ರತಿಯೊಂದು ಡಾಕ್ಯುಮೆಂಟ್ ಅನ್ನು ಓದಿ. ಬ್ಯಾಂಕ್ ಎಕ್ಸಿಕ್ಯುಟಿವ್‌ರಿಂದ ಎಲ್ಲಾ ವಿವರಣೆಯನ್ನು ಇಮೇಲ್ ಮೂಲಕ ಪಡೆಯಿರಿ.
- ಹೋಮ್ ಲೋನ್ ತೆಗೆದುಕೊಂಡಾಗ ನಾಮಿನಿ ಹೆಸರನ್ನು ಕಡ್ಡಾಯವಾಗಿ ಬರೆಯಿರಿ. ಸಾಲಗಾರರಿಗೆ ಏನಾದರೂ ಆದರೆ ಕುಟುಂಬಕ್ಕೆ ಅನುಕೂಲವಾಗುತ್ತದೆ.
- ಸಾಲ ಮಾಡುವಾಗ ಬ್ಯಾಂಕ್‌ಗೆ ನೀಡಿರುವ ಎಲ್ಲಾ ಮೂಲ ದಾಖಲೆಗಳ (ಮದರ್ ಡೀಡ್, ಸೇಲ್ ಡೀಡ್) ಅಕ್ನಾಲೆಜ್ಮೆಂಟ್ ಪಟ್ಟಿಯನ್ನು ಪಡೆಯಿರಿ. ಸಾಲ ತೀರಿಸಿದ ನಂತರ ಅವುಗಳನ್ನು ಬ್ಯಾಂಕ್‌ನಿಂದ ಮರಳಿ ಪಡೆಯಲು ಇದು ಅಗತ್ಯ.
ಇದನ್ನು ಓದಿ:
ಹಣದುಬ್ಬರದ ಆತಂಕದಲ್ಲಿ ಸುರಕ್ಷಿತ ಹೂಡಿಕೆ ಹೇಗೆ? – ಸರ್ಕಾರಿ ಯೋಜನೆಯಲ್ಲಿ ₹90,000 ಬಡ್ಡಿ ಗಳಿಸಿ..!
EMI ಹೆಸರಿನಲ್ಲಿ ನಿಮ್ಮ ಜೇಬಿಗೆ ಕನ್ನ: ‘No ಕಾಸ್ಟ್ EMI’ ಅಸಲಿ ಕಥೆ ಏನು?