ಇವತ್ತಿನ ದಿನಗಳಲ್ಲಿ ನಮ್ಮ ಮಕ್ಕಳಿಗೊಂದು ಒಳ್ಳೆಯ ಶಿಕ್ಷಣ ಕೊಡಿಸೋದು ತುಂಬಾ ದೊಡ್ಡ ಚಾಲೆಂಜ್ ಆಗಿದೆ, ಅಲ್ವಾ? ಸ್ಕೂಲ್ ಫೀಸ್, ಕಾಲೇಜ್ ಫೀಸ್, ಬುಕ್ಸ್, ಲ್ಯಾಪ್ಟಾಪ್ ಅಂತೆಲ್ಲಾ ಖರ್ಚು ಜಾಸ್ತಿ ಹೆಚ್ಚಾಗ್ತಾನೆ ಇರುತ್ತೆ.
ಅದರಲ್ಲೂ ಮಧ್ಯಮ ವರ್ಗದ ಹಾಗೂ ಬಡ ಕುಟುಂಬಗಳಿಗೆ ಇದು ಒಂದು ದೊಡ್ಡ ತಲೆನೋವು ಆಗಿದೆ. ಈ ನಮ್ಮ ಸಮಸ್ಯೆಗೆ ಕೇಂದ್ರ ಸರ್ಕಾರ ಒಂದು ಒಳ್ಳೆಯ ಪರಿಹಾರ ನಮಗೆ ತಂದಿದೆ.
ಪಿಎಂ YASASVI ಸ್ಕಾಲರ್‌ಶಿಪ್ ಯೋಜನೆ ಮೂಲಕ ವಿದ್ಯಾರ್ಥಿಗಳಿಗೆ ₹3 ಲಕ್ಷದವರೆಗೆ ಆರ್ಥಿಕ ನೆರವು ಸಿಗುತ್ತೆ, ಅದೂ ಯಾವುದೇ ಪರೀಕ್ಷೆ ಇಲ್ಲದೆ! ಈ ಬಗ್ಗೆ ಕಂಪ್ಲೀಟ್ ಡೀಟೇಲ್ಸ್ ಈ ಬ್ಲಾಗ್‌ನಲ್ಲಿ ತಿಳಿದುಕೊಳೋಣ.
PM YASASVI ಸ್ಕಾಲರ್‌ಶಿಪ್ ಯೋಜನೆ ಅಂದರೆ?
ಪಿಎಂ YASASVI ಅಂದ್ರೆ ‘ಯಂಗ್ ಅಚೀವರ್ ಸ್ಕಾಲರ್‌ಶಿಪ್ ಅವಾರ್ಡ್ ಸ್ಕೀಮ್ ಫಾರ್ ವೈಬ್ರೆಂಟ್ ಇಂಡಿಯಾ‘.
ಇದು ಕೇಂದ್ರ ಸರ್ಕಾರ ನಡೆಸುವ ಒಂದು ಅದ್ಭುತ ವಿದ್ಯಾರ್ಥಿವೇತನ ಯೋಜನೆ ಆಗಿದೆ.
ಬಡ ಮತ್ತು ಹಿಂದುಳಿದ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಸಿಗಬೇಕು ಅನ್ನೋದು ಈ ಯೋಜನೆಯ ಮುಖ್ಯ ಉದ್ದೇಶ ಆಗಿದೆ.
ಯಾವುದೇ ಆರ್ಥಿಕ ಅಡಚಣೆ ಇಲ್ಲದೆ ಮಕ್ಕಳು ವಿದ್ಯಾಭ್ಯಾಸ ಮಾಡಬೇಕು, ಅವರು ದೊಡ್ಡ ಕನಸು ಕಾಣಬೇಕು ಅಂತ ಸರ್ಕಾರ ಈ ಯೋಜನೆಯನ್ನ ದೇಶಕೆ ಪರಿಚಯಿಸಿದೆ.
ಇದರಿಂದ ನಮ್ಮ ವಿದ್ಯಾರ್ಥಿಗಳಿಗೆ ಭವಿಷ್ಯದ ಬಾಗಿಲು ತೆರೆಯಲಿದೆ.
ಯಾರಿಗೆ ಸಿಗುತ್ತೆ ಈ ಸ್ಕಾಲರ್‌ಶಿಪ್ ಅವಕಾಶ?
ಈ ಪಿಎಂ YASASVI ಸ್ಕಾಲರ್‌ಶಿಪ್‌ಗೆ ಎಲ್ಲ ವಿದ್ಯಾರ್ಥಿಗಳು ಅರ್ಹರಾಗಿರೋದಿಲ್ಲ. ಒಂದಷ್ಟು ಎಲಿಜಿಬಿಲಿಟಿ ಕ್ರೈಟೀರಿಯಾ ಸರ್ಕಾರ ಇದಕೆ ರಚನೆ ಮಾಡಿದೆ.
ಮುಖ್ಯವಾಗಿ, ಇದು OBC (ಇತರ ಹಿಂದುಳಿದ ವರ್ಗ), EBC (ಆರ್ಥಿಕವಾಗಿ ಹಿಂದುಳಿದ ವರ್ಗ) ಮತ್ತು DNT (ಅಲೆಮಾರಿ ಸಮುದಾಯ) ವಿದ್ಯಾರ್ಥಿಗಳಿಗೆ ಮೀಸಲಾಗಿದೆ ವಿದ್ಯಾರ್ಥಿಗಳೇ.
ಕುಟುಂಬದ ವಾರ್ಷಿಕ ಆದಾಯ ₹2.5 ಲಕ್ಷದ ಒಳಗೆ ಇರಬೇಕು.
ಜೊತೆಗೆ, 9ನೇ ತರಗತಿ ಅಥವಾ 11ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಇದಕ್ಕೆ ಅರ್ಜಿ ಸಲ್ಲಿಸಬಹುದು.
ಈ ಕಂಡೀಶನ್ಸ್‌ಗೆ ನೀವು ಎಲಿಜಿಬುಲ್ ಆದ್ರೆ, ಖಂಡಿತ ಅರ್ಜಿ ಹಾಕಿ. ಇಲವಾದರೆ ನಿಮ್ಮ ಅರ್ಜಿ ರಿಜೆಕ್ಟ್ ಹಾಗುತದೆ.
ವಿದ್ಯಾರ್ಥಿಗಳಿಗೆ ಏನೆಲ್ಲಾ ಆರ್ಥಿಕ ಸಹಾಯಗಳು ಸಿಗುತ್ತವೆ?
ಈ ಸ್ಕಾಲರ್‌ಶಿಪ್‌ನಲ್ಲಿ ಸಿಗುವ ಲಾಭಗಳು ಕೇಳಿದ್ರೆ ಖಂಡಿತ ಖುಷಿ ಪಡುತ್ತೀರಾ. ಮೊದಲನೆಯದಾಗಿ ನೋಡೋದಾದ್ರೆ, ನಿಮ್ಮ ಟ್ಯೂಷನ್ ಫೀಸ್‌ಗೆ ವರ್ಷಕ್ಕೆ ₹75,000 ವರೆಗೆ ಸಹಾಯ ಸಿಗುತ್ತೆ.
ಹೌದು, ಇದು ದೊಡ್ಡ ಅಮೌಂಟ್ ಅಲ್ವಾ?
ಇದರ ಜೊತೆಗೆ, ವಿದ್ಯಾರ್ಥಿಗಳಿಗೆ ಒಂದು ಹೊಸ ಲ್ಯಾಪ್ಟಾಪ್ ಖರೀದಿಸೋದಕ್ಕೆ ₹45,000 ವರೆಗೂ ಸರ್ಕಾರದಿಂದ ಫೈನಾನ್ಶಿಯಲ್ ಸಪೋರ್ಟ್ ಸಿಗುತ್ತೆ.
ಇನ್ನು, ನಿಮ್ಮ ದೈನಂದಿನ (ಲಿವಿಂಗ್ ಎಕ್ಸ್‌ಪೆನ್ಸಸ್) ಅಂದರೆ ತಿಂಗಳ ಖರ್ಚುಗಳಿಗೂ ಕೂಡ ಹಣ ಸರ್ಕಾರ ನೀಡುತ್ತೆ.
ಲ್ಯಾಪ್ಟಾಪ್, ಲಿವಿಂಗ್ ಹಾಗೂ ಬುಕ್ಸ್ ಇದರ ಖರ್ಚು ಯಾವರೀತಿ ಸರ್ಕಾರ ನೋಡಿಕೊಳ್ಳುತ್ತೆ:
ಸ್ಕಾಲರ್‌ಶಿಪ್ ಹಣದಲ್ಲಿ ಬರೀ ಟ್ಯೂಷನ್ ಫೀಸ್ ಅಷ್ಟೇ ಅಲ್ಲ.
ನಿಮ್ಮ ಲಿವಿಂಗ್ ಎಕ್ಸ್‌ಪೆನ್ಸಸ್‌ಗೆ ತಿಂಗಳಿಗೆ ₹3,000 ಸಿಗುತ್ತೆ, ಅಂದರೆ ವರ್ಷಕ್ಕೆ ₹36,000. ಇದು ನಿಮ್ಮ ಹಾಸ್ಟೆಲ್ ಅಥವಾ ಬೇರೆ, ಬೇರೆ ವೈಯಕ್ತಿಕ ಖರ್ಚುಗಳಿಗೆ ಸಹಾಯ ಆಗುತ್ತೆ. (ತಿಂಡಿ, ಟೀ, ಕಾಫಿ)
ಜೊತೆಗೆ, ಪುಸ್ತಕಗಳ ಖರೀದಿಗಾಗಿ ವರ್ಷಕ್ಕೆ ₹5,000 ಸಿಗಲಿದೆ.
ಒಂದು ವೇಳೆ ನೀವು ಪೈಲಟ್ ಟ್ರೈನಿಂಗ್‌ನಂತಹ ವಿಶೇಷ ಕೋರ್ಸ್‌ಗಳಿಗೆ ಸೇರಿದ್ದರೆ, ಅದಕ್ಕೆ ₹3.72 ಲಕ್ಷದವರೆಗೆ ಸಹಾಯ ಹಣ ಸಿಗುತ್ತೆ. ಒಟ್ಟಾರೆ, ವರ್ಷಕ್ಕೆ ₹3 ಲಕ್ಷಕ್ಕೂ ಹೆಚ್ಚು ಬೆನಿಫಿಟ್ ಪಡೆಯಬಹುದು ವಿದ್ಯಾರ್ಥಿಗಳೇ.
ಪರೀಕ್ಷೆ ಇಲ್ಲ, ವಿದ್ಯಾರ್ಥಿಗಳ ಮೆರಿಟ್ ಆಧಾರಿತ ಆಯ್ಕೆ
ಮೊದಲು ಈ ಯೋಜನೆಗೆ ಪರೀಕ್ಷೆ ಇತ್ತು. ಆದರೆ ಈಗ ಒಂದು ಗುಡ್ ನ್ಯೂಸ್ ಅದು ಏನೆಂದರೆ, ಪರೀಕ್ಷೆ ಇಲದೆ! ನಿಮ್ಮ ಹಿಂದಿನ ತರಗತಿಯ ಅಂಕಗಳ ಆಧಾರದ ಮೇಲೆ ಮೆರಿಟ್ ಲಿಸ್ಟ್ ಮಾಡಿ ಆಯ್ಕೆ ಮಾಡ್ತಾರೆ.
ಉದಾಹರಣೆಗೆ ಹೇಳಬೇಕೆಂದರೆ:
ನೀವು 9ನೇ ತರಗತಿ ಅಲ್ಲಿ ವಿದ್ಯಾಭ್ಯಾಸ ಮಾಡುತಿದ್ದರೆ, 8ನೇ ಕ್ಲಾಸ್ ಮಾರ್ಕ್ಸ್ ನೋಡ್ತಾರೆ. 11ನೇ ತರಗತಿಯ ವಿದ್ಯಾರ್ಥಿಗಳಾಗಿದ್ರೆ, 10ನೇ ತರಗತಿಯ (ಎಸ್.ಎಸ್.ಎಲ್.ಸಿ) ಅಂಕಗಳನ್ನ ಪರಿಗಣಿಸಲಾಗುತ್ತೆ.
ಹಾಗಾಗಿ, ನಿಮ್ಮ ಅಂಕಗಳು ಚೆನ್ನಾಗಿದ್ರೆ, ಪರೀಕ್ಷೆ ಟೆನ್ಷನ್ ಇಲ್ಲದೆ ಸ್ಕಾಲರ್‌ಶಿಪ್ ಪಡೆಯೋಕೆ ಒಳ್ಳೆಯ ಚಾನ್ಸ್ ಇದೆ.
ಕೊನೆಯ ದಿನಾಂಕ ಮತ್ತು ಅರ್ಜಿ ಸಲ್ಲಿಸುವ ಸಮಯ
ಪಿಎಂ ಯಶಸ್ವಿ ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸಲು ಕೆಲವು ಪ್ರಮುಖ ದಿನಾಂಕ. ಸಾಮಾನ್ಯವಾಗಿ, ಅರ್ಜಿ ಸಲ್ಲಿಕೆ ಪ್ರಕ್ರಿಯೆ ಜೂನ್ 2026ರಲ್ಲಿ ಶುರುವಾಗುತ್ತೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಸ್ಟ್ 2026 ಆಗಿರುತ್ತೆ ವಿದ್ಯಾರ್ಥಿಗಳೇ.
ನೀವು ಸಲ್ಲಿಸಿರುವ ಅರ್ಜಿ ಪರಿಶೀಲನೆ ಸೆಪ್ಟೆಂಬರ್‌ನಲ್ಲಿ ನಡೆಯುವ ನಿರೀಕ್ಷೆ ಇದೆ ಅಂತ ಹೇಳಬಹುದು. ಕೊನೆ ದಿನಾಂಕದವರೆಗೆ ಕಾಯಬೇಡಿ, ಆದಷ್ಟು ಬೇಗ ಅಪ್ಲೈ ಮಾಡೋದು ಒಳೆಯದು. ಬೇಗ ಅಪ್ಲಿಕೇಶನ್ ಹಾಕಿದರೆ.
ಇದರ ಜೊತೆಗೆ ನಿಮಗೆ ಸ್ಕಾಲರ್‌ಶಿಪ್ ಬೇಗ ಸಿಗುತ್ತೆ.
ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳು
ಅರ್ಜಿ ಸಲ್ಲಿಸುವ ಮೊದಲು ಕೆಲವೊಂದು ಇಂಪಾರ್ಟೆಂಟ್ ಡಾಕ್ಯುಮೆಂಟ್ಸ್ ರೆಡಿ ಮಾಡ್ಕೊಳ್ಳೋದು ಮುಖ್ಯ ವಿದ್ಯಾರ್ಥಿಗಳೇ.
ದಾಖಲೆಗಳ ಲಿಸ್ಟ್ ಇದೆ:
- ಆಧಾರ್ ಕಾರ್ಡ್
- ಹಿಂದಿನ ತರಗತಿಯ ಮಾರ್ಕ್ಸ್ ಕಾರ್ಡ್
- ಪಾಸ್‌ಪೋರ್ಟ್ ಸೈಜ್ ಫೋಟೋ
- ಜಾತಿ ಪ್ರಮಾಣಪತ್ರ (OBC/EBC/DNT)
- ಆದಾಯ ಪ್ರಮಾಣಪತ್ರ (₹2.5 ಲಕ್ಷದ ಒಳಗಡೆ)
- ಬ್ಯಾಂಕ್ ಪಾಸ್ ಬುಕ್ (ನಿಮ್ಮ ಹೆಸರಿನಲ್ಲಿರಬೇಕು).
ಈ ಎಲ್ಲಾ ಡಾಕ್ಯುಮೆಂಟ್ಸ್ ಸರಿಯಾಗಿವೆಯೇ ಅಂತ ಚೆಕ್ ಮಾಡಿಕೊಂಡು, ಆನ್‌ಲೈನ್‌ನಲ್ಲಿ ಅಪ್ಲೋಡ್ ಮಾಡಬೇಕಾಗುತ್ತೆ.
ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಹಾಕುವುದು ಹೇಗೆ?
ಪಿಎಂ YASASVI ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸೋದು ಬಹಳ ಸಿಂಪಲ್. ಅಧಿಕೃತ ವೆಬ್‌ಸೈಟ್‌ಗೆ ಹೋಗಿ, ಅಲ್ಲಿ ‘ನ್ಯೂ ರಿಜಿಸ್ಟ್ರೇಷನ್’ ಅಂತ ಆಪ್ಷನ್ ಇರುತ್ತೆ. ಅದರ ಮೇಲೆ ಕ್ಲಿಕ್ ಮಾಡಿ.
Apply Now – scholarships.gov.in
ನಿಮ್ಮ ವೈಯಕ್ತಿಕ ಮಾಹಿತಿ, ಶೈಕ್ಷಣಿಕ ವಿವರಗಳು, ತಂದೆ-ತಾಯಿ ಹೆಸರು, ಸ್ಕೂಲ್ ವಿವರಗಳು – ಹೀಗೆ ಕೇಳಿರುವ ಎಲ್ಲಾ ಡೀಟೇಲ್ಸ್ ಅನ್ನ ಭರ್ತಿ ಮಾಡಿ. ನಂತರ, ಬೇಕಾಗಿರುವ ಎಲ್ಲಾ ಡಾಕ್ಯುಮೆಂಟ್ಸ್ ಅಪ್ಲೋಡ್ ಮಾಡಿ.
ಯಾವುದೇ ತಪ್ಪು ಮಾಹಿತಿ ಕೊಡಬೇಡಿ, ಇಲ್ಲ ಅಂದ್ರೆ ನಿಮ್ಮ ಅರ್ಜಿ ರಿಜೆಕ್ಟ್ ಆಗುವ ಚಾನ್ಸ್ ಹೆಚ್ಚು ಇದೆ. ಒಮ್ಮೆ ಸಬ್ಮಿಟ್ ಮಾಡಿದ ಮೇಲೆ ತಿದ್ದುಪಡಿ ಮಾಡೋಕೆ ಆಗಲ್ಲ, ಅದರಿಂದ ಚೆಕ್ ಮಾಡಿ ಸುಭ್ಮಿತ್ ಮಾಡೋದು ಒಳೆಯದು.
ಅರ್ಜಿ ಸಲ್ಲಿಸುವಾಗ ಎಚ್ಚರ ಇರಲಿ ವಿದ್ಯಾರ್ಥಿಗಳೇ !
ಅರ್ಜಿ ಸಲ್ಲಿಸುವಾಗ ಕೆಲವು ವಿಷಯಗಳ ಬಗ್ಗೆ ಗಮನವಿರಲಿ. ನಿಮ್ಮ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಅಕೌಂಟ್ NPCI (National Payments Corporation of India) ಗೆ ಲಿಂಕ್ ಆಗಿರಬೇಕು.
ಎಲ್ಲಾ ಡಾಕ್ಯುಮೆಂಟ್‌ಗಳಲ್ಲಿ ನಿಮ್ಮ ಹೆಸರು ಒಂದೇ ತರ ಇರಬೇಕು, ಸ್ಪೆಲ್ಲಿಂಗ್ ಮಿಸ್ಟೇಕ್ ಇರಬಾರದು ಒಂದು ವೇಳೆ ಇದರೆ ರಿಜೆಕ್ಟ್ ಹಾಗುತ್ತೆ. ನಿಮ್ಮದೇ ಮೊಬೈಲ್ ನಂಬರ್ ಬಳಸಿ. ತಪ್ಪು ಮಾಹಿತಿ ಕೊಟ್ಟರೆ ಅಪ್ಲಿಕೇಶನ್ ರಿಜೆಕ್ಟ್ ಆಗುತ್ತೆ.
ಅರ್ಜಿಯನ್ನ ಸರಿಯಾಗಿ ಪರಿಶೀಲಿಸಿ, ನಂತರವೇ ಸಬ್ಮಿಟ್ ಮಾಡಿ. ಈ ಯೋಜನೆ ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ಲ್ಯಾಪ್ಟಾಪ್ ಹಾಗೂ ಭವಿಷ್ಯದ ಭದ್ರತೆ ನೀಡುವ ದೊಡ್ಡ ಅವಕಾಶ ನಿಮ್ಮದಾಗಿಸಿಕೊಳ್ಳಿ.
FAQ
ಯಾವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು?
OBC, EBC, DNT ವರ್ಗದ 9 ಮತ್ತು 11ನೇ ತರಗತಿ ವಿದ್ಯಾರ್ಥಿಗಳು.
ಯೋಜನೆಯಲ್ಲಿ ಎಷ್ಟು ಸ್ಕಾಲರ್‌ಶಿಪ್ ಸಿಗುತ್ತೆ?
ವರ್ಷಕ್ಕೆ ₹3 ಲಕ್ಷದವರೆಗೆ (ನಿಮ್ಮ ಎಲಿಜಿಬಿಲಿಟಿ ಮೇಲೆ).
ಸ್ಕಾಲರ್ಷಿಪ್ ಪಡೆಯಲು ಪರೀಕ್ಷೆ ಇದೆಯಾ?
ಇಲ್ಲ, ಮೆರಿಟ್ ಆಧಾರಿತ ಆಯ್ಕೆ.
ಲ್ಯಾಪ್ಟಾಪ್ ಸಿಗುತ್ತಾ?
ಹೌದು, ₹45,000 ವರೆಗೆ ಸಹಾಯ.
ಅರ್ಜಿ ಯಾವರೀತಿ ಸಲ್ಲಿಸಬೇಕು?
ಆನ್‌ಲೈನ್ ಮೂಲಕ, ಅಧಿಕೃತ ವೆಬ್‌ಸೈಟ್‌ನಲ್ಲಿ.
ಇದನ್ನು ಓದಿ:
ಯುವನಿಧಿ ಯೋಜನೆ: ಸಚಿವ ಶರಣ್ ಪ್ರಕಾಶ್ ಪಾಟೀಲ್ ಏನ್ ಹೇಳ್ತಾರೆ?
PGCET 2026: MBA, MCA ಎಕ್ಸಾಮ್ ದಿನಾಂಕ ಮುಂದೂಡಿಕೆ! ಹೊಸ ಅಪ್ಡೇಟ್ KEA ಇಂದ