ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆ ನಿಮಗೆಲ್ಲ ಗೊತ್ತಿದೆ. ಪ್ರತಿ ತಿಂಗಳು ಮಹಿಳೆಯರ ಬ್ಯಾಂಕ್ ಖಾತೆಗೆ ₹2000 ಹಾಕಿ ಅವರ ಆರ್ಥಿಕತೆಗೆ ಸಪೋರ್ಟ್ ಕೊಡಬೇಕು ಅನ್ನೋದು ಈ ಯೋಜನೆಯ ಮುಖ್ಯ ಗುರಿ.
ಆದ್ರೆ, ಇತ್ತೀಚೆಗೆ ಏನಾಗಿದೆ ಅಂದರೆ ಈ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಪಟ್ಟಂತೆ ಒಂದು ಶಾಕಿಂಗ್ ಸುದ್ದಿ ಬಂದಿದೆ.
ಕಳೆದ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಗೃಹಲಕ್ಷ್ಮಿ ಹಣ ಈವರೆಗೂ ಮಹಿಳೆಯರಿಗೆ ಬಿಡುಗಡೆಯಾಗಿಲ್ಲ ಅಂತ ಅನೇಕ ಮಹಿಳೆಯರು ಕೇಳುತ್ತಿದ್ದಾರೆ. ಇದನ್ನ ಪ್ರಶ್ನಿಸಿ ಹೈಕೋರ್ಟ್ಗೆ ಮಹಿಳೆಯರು ಪಿಐಎಲ್ ಅರ್ಜಿ ಸಲ್ಲಿಕೆಯಾಗಿದ್ದು, ನಮ್ಮ ರಾಜ್ಯ ಸರ್ಕಾರಕ್ಕೆ ಈಗ ಒಂದು ನೋಟೀಸ್ ಕೂಡ ಬಂದಿದೆ.
ಮಹಿಳೆಯರಿಂದ ಅರ್ಜಿ ಸಲ್ಲಿಕೆ ಮತ್ತು ಸರ್ಕಾರಕ್ಕೆ ಹೈಕೋರ್ಟ್ ನೋಟೀಸ್
ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಪ್ರತಿ ಮನೆಯ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು 2000 ರೂಪಾಯಿ ನೀಡಲಾಗುತ್ತೆ. ಆದ್ರೆ, 2026ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಎರಡು ಕಂತಿನ ಹಣವನ್ನು ಸರ್ಕಾರ ಇನ್ನೂ ಬಿಡುಗಡೆ ಮಾಡಿಲ್ಲ. ಸುಮಾರು ಎರಡು ತಿಂಗಳಿಂದ ಈ ಹಣ ಮಹಿಳೆಯರಿಗೆ ತಲುಪಿಲ್ಲ.
ಈ ವಿಳಂಬದಿಂದ ಬೇಸತ್ತ ಸಾರ್ವಜನಿಕರು ಹೈಕೋರ್ಟ್ ಮೊರೆ ಹೋಗಿದ್ದಾರೆ.
ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಕೆಯಾದ ನಂತರ, ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟೀಸ್ ಜಾರಿ ಮಾಡಿದೆ. ಹಣ ಯಾವಾಗ ಬಿಡುಗಡೆ ಮಾಡ್ತೀರಾ ಅಂತ ಸರ್ಕಾರಕ್ಕೆ ಹೈಕೋರ್ಟ್ ಪ್ರಶ್ನಿಸಿದೆ.
ಅರ್ಜಿದಾರರು ಮತ್ತು ಅವರ ಬೇಡಿಕೆಗಳು ಏನು
ಬೆಂಗಳೂರಿನ ಬಸವೇಶ್ವರ ನಗರದ ನಿವಾಸಿ ಆರ್. ಗಂಗಾ ಮತ್ತು ನಂದಿನಿ ಲೇಔಟ್ನ ಜೆ.ಡಿ. ಪವಿತ್ರ ಎನ್ನುವವರು ಈ ಮಹತ್ವದ ಪಿಐಎಲ್ ಅರ್ಜಿಯನ್ನ ಹೈಕೋರ್ಟ್ಗೆ ಸಲ್ಲಿಸಿದ್ದಾರೆ.
ದುರ್ಬಲ ವರ್ಗದ ಮಹಿಳೆಯರಿಗೆ ಹಣ ಸಕಾಲಕ್ಕೆ ತಲುಪದೆ ಇದ್ದಾಗ, ಅವರಿಗೆ ಆರ್ಥಿಕವಾಗಿ ತುಂಬಾ ತೊಂದರೆ ಆಗುತ್ತೆ ಅನ್ನೋದು ಅವರ ಮುಖ್ಯ ವಾದ.
ಸರ್ಕಾರ ಕೂಡಲೇ ಬಾಕಿ ಉಳಿಸಿಕೊಂಡಿರುವ ಹಣವನ್ನು ಬಿಡುಗಡೆ ಮಾಡಬೇಕು ಮತ್ತು ಈ ವಿಷಯದಲ್ಲಿ ಸ್ಪಷ್ಟ ನಿರ್ದೇಶನ ನೀಡಬೇಕು ಅಂತ ಅರ್ಜಿದಾರರು ಹೈಕೋರ್ಟ್ಗೆ ಮನವಿ ಮಾಡಿದ್ದಾರೆ. ಇದು ಲಕ್ಷಾಂತರ ಮಹಿಳೆಯರ ಭರವಸೆಯಾಗಿ ಬಂದಿದೆ.
ಬಾಕಿ ಉಳಿದುಕೊಂಡಿರುವ ಬೃಹತ್ ಮೊತ್ತ ಯಾವಾಗ ಜಮಾ?
ಸದ್ಯದ ಮಾಹಿತಿ ಪ್ರಕಾರ, ಸರ್ಕಾರ ಒಟ್ಟು ಎರಡು ತಿಂಗಳ ಗೃಹಲಕ್ಷ್ಮಿ ಹಣವನ್ನ ಬಾಕಿ ಉಳಿಸಿಕೊಂಡಿದೆ.
ಅಂದಾಜು 5,000 ಕೋಟಿ ರೂಪಾಯಿಗಳಿಗೂ ಹೆಚ್ಚು ಹಣವನ್ನು ಈವರೆಗೂ ಬಿಡುಗಡೆ ಮಾಡಿಲ್ಲ ಅನ್ನೋದು ಪಿಐಎಲ್ನಲ್ಲಿ ಸ್ಪಷ್ಟವಾಗಿ ನಮೂದಾಗಿದೆ.
ಇಷ್ಟೊಂದು ದೊಡ್ಡ ಮೊತ್ತದ ಹಣವನ್ನು ಕಡುಬಡತನದಲ್ಲಿರುವ ಮಹಿಳೆಯರಿಗೆ ನೀಡಬೇಕಾಗಿದೆ. ಸರ್ಕಾರವೇ ಯೋಜನೆ ಬಿಡುಗಡೆ ಮಾಡಿ ಹಣ ನೀಡಿಲ್ಲ ಅಂದ್ರೆ ಏನ್ ಅರ್ಥ? ಈ ಹಣ ಸರಿಯಾದ ಟೈಮ್ನಲ್ಲಿ ಸಿಕ್ಕಿದ್ರೆ, ಅವರು ತಮ್ಮ ದೈನಂದಿನ ಅವಶ್ಯಕತೆಗಳನ್ನ ಪೂರೈಸಿಕೊಳ್ಳಲು ಅನುಕೂಲವಾಗುತ್ತೆ.
ಈ ಹಣ ಎಲ್ಲಿ ಹೋಯ್ತು, ಯಾಕೆ ವಿಳಂಬವಾಯಿತು ಅನ್ನೋ ಪ್ರಶ್ನೆ ಈಗ ರಾಜ್ಯದಲ್ಲಿ ಉದ್ಭವಿಸಿದೆ.
ಬಜೆಟ್ ಹಂಚಿಕೆಯ ಸವಾಲು ಏನಿದೆ?
ಸರ್ಕಾರ ಗೃಹಲಕ್ಷ್ಮಿ ಯೋಜನೆಗಾಗಿ ತಮ್ಮ ಬಜೆಟ್ನಲ್ಲಿ ಹಣವನ್ನು ಹಂಚಿಕೆ ಮಾಡಿದೆ. ಅಲೋಕೇಶನ್ ಆಗಿ ಕೂಡ ಈ ಹಣ ಬಿಡುಗಡೆಯಾಗಿಲ್ಲ ಅನ್ನೋದು ಆಶ್ಚರ್ಯ ಸಂಗತಿ.
ಬಜೆಟ್ನಲ್ಲಿ ಹಣ ಮೀಸಲಿಟ್ಟ ನಂತರವೂ ಅದನ್ನು ಫಲಾನುಭವಿಗಳಿಗೆ ತಲುಪಿಸದೇ ಇರುವುದು ಸರ್ಕಾರದ ನಿರ್ಲಕ್ಷ್ಯಕ್ಕೆ ಕಾರಣವಾಗುತ್ತೆ ಅಂತ ಅರ್ಜಿದಾರರು ಆರೋಪಿಸಿದ್ದಾರೆ.
ದುರ್ಬಲ ವರ್ಗದ ಮಹಿಳೆಯರು ಈ ಹಣಕ್ಕಾಗಿ ತುಂಬಾ ಆಸೆಯಿಂದ ಕಾಯ್ತಾ ಇರ್ತಾರೆ. ಇಂತಹ ಸಂದರ್ಭದಲ್ಲಿ ಹಣ ಬಿಡುಗಡೆ ಮಾಡದೇ ಇರೋದು ಅವರಿಗೆ ಮತ್ತಷ್ಟು ಕಷ್ಟವನ್ನ ಉಂಟುಮಾಡಿದೆ.
ಸರ್ಕಾರದ ಉತ್ತರಕ್ಕಾಗಿ ಕಾಯುತ್ತಿರುವ ಹೈಕೋರ್ಟ್
ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ನೋಟೀಸ್ ಕೊಟ್ಟು ಉತ್ತರ ನೀಡಲು ಸೂಚಿಸಿದೆ.
ಹಣ ಬಿಡುಗಡೆ ಮಾಡದಿರಲು ಕಾರಣ ಏನು?
ಯಾವಾಗ ಈ ಬಾಕಿ ಹಣವನ್ನು ಬಿಡುಗಡೆ ಮಾಡಲಾಗುತ್ತೆ?
ಅನ್ನೋ ಪ್ರಶ್ನೆಗಳಿಗೆ ರಾಜ್ಯ ಸರ್ಕಾರ ಸ್ಪಷ್ಟ ಉತ್ತರ ಕೊಡಬೇಕಾಗಿದೆ.
ಮುಂದಿನ ವಿಚಾರಣೆಯಲ್ಲಿ ಸರ್ಕಾರ ಏನು ಸಮರ್ಥನೆ ಕೊಡುತ್ತೆ ಅಂತ ನೋಡಬೇಕು. ಹೈಕೋರ್ಟ್ ಸರ್ಕಾರಕ್ಕೆ ಯಾವುದೇ ಕಾರಣಕ್ಕೂ ಸುಳ್ಳು ಸಮರ್ಥನೆ ಒಪ್ಪಿಕೊಳ್ಳಲ್ಲ ಅಂತ ಸಾರ್ವಜನಿಕರು ನಿರೀಕ್ಷಿಸಿದ್ದಾರೆ.
ಇದು ಮೊದಲ ಬಾರಿಯಲ್ಲ, ಅಧಿವೇಶನದಲ್ಲೂ ಚರ್ಚೆ
ಗೃಹಲಕ್ಷ್ಮಿ ಹಣ ಬಿಡುಗಡೆ ವಿಳಂಬದ ಬಗ್ಗೆ ಹೈಕೋರ್ಟ್ಗೆ ಅರ್ಜಿ ಸಲ್ಲಿಕೆಯಾಗಿದ್ದು ಮೊದಲ ಬಾರಿಯಲ್ಲ. ಕಳೆದ ವರ್ಷ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲೂ ಈ ವಿಷಯ ಸಾಕಷ್ಟು ಚರ್ಚೆಗೆ ಒಳಗಾಗಿತ್ತು.
ಶಾಸಕ ಮಹಂತೇಶ್ ಸಿಂಗಿನಕಾಯಿ ಅವರು ಈ ಬಗ್ಗೆ ಸರ್ಕಾರದ ಗಮನ ಸೆಳೆದಿದ್ದರು. ಹಣ ಎಲ್ಲಿ ಹೋಯ್ತು, ಯಾಕೆ ವಿಳಂಬವಾಗುತ್ತಿದೆ ಅಂತ ಪ್ರಶ್ನಿಸಿದ್ದರು. ಇಷ್ಟೆಲ್ಲಾ ಚರ್ಚೆಗಳು ಆಗಿದ್ದರೂ ಕೂಡ ಸಮಸ್ಯೆ ಇನ್ನೂ ಬಗೆಹರಿದಿಲ್ಲ ಅನ್ನೋದು ಮಹಿಳೆಯರನ್ನ ಕಳವಳಕ್ಕೆ ದೂಡಿದೆ.
ಬಿಡುಗಡೆ ಆಗಬೇಕಾದಂತಹ ಹಣ ಎಲ್ಲಿ ಹೋಗುತಿದೆ?
ಫಲಾನುಭವಿಗಳು ಮತ್ತು ಅವರ ಹಕ್ಕು ರಾಜ್ಯದಲ್ಲಿ ಒಟ್ಟು 1 ಕೋಟಿ 26 ಲಕ್ಷ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಾಗಿದ್ದಾರೆ.
ಇವರೆಲ್ಲರೂ ಪ್ರತಿ ತಿಂಗಳು ಸರ್ಕಾರ ನೀಡುವ 2000 ರೂಪಾಯಿಗಳಿಗಾಗಿ ಕಾಯ್ತಾ ಇರ್ತಾರೆ.
ಯಾವುದೇ ಸರಿಯಾದ ಕಾರಣವಿಲ್ಲದೆ, ಕಾನೂನುಬದ್ಧ ಸಮರ್ಥನೆ ಇಲ್ಲದೆ (lawful justification) ಈ ಹಣವನ್ನು ತಡೆಹಿಡಿಯಲಾಗಿದೆ ಅಂತ ಅರ್ಜಿಯಲ್ಲಿ ತಿಳಿಸಲಾಗಿದೆ.
ಎರಡು ಕಂತಿನ ಹಣವನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಅನ್ನೋದು ಅರ್ಜಿದಾರರ ಮುಖ್ಯ ಬೇಡಿಕೆ. ಈ ಹಣ ಮಹಿಳೆಯರ ಮೂಲಭೂತ ಹಕ್ಕುಗಳಲ್ಲಿ ಒಂದಾಗಿದೆ ಅಂತ ಕೆಲವರು ಹೇಳಿದರೆ.
ಮುಂದೆ ಏನಾಗಬಹುದು ಇಲ್ಲಿದೆ ಉತ್ತರ?
ಈಗಾಗಲೇ ಹೈಕೋರ್ಟ್ ಸರ್ಕಾರಕ್ಕೆ ನೋಟೀಸ್ ಕೊಟ್ಟಿದ್ದು, ಮುಂದಿನ ವಿಚಾರಣೆಯಲ್ಲಿ ಸರ್ಕಾರ ತನ್ನ ಉತ್ತರವನ್ನು ಸಲ್ಲಿಸಬೇಕಾಗುತ್ತೆ.
ಹೈಕೋರ್ಟ್ ಸರ್ಕಾರಕ್ಕೆ ಹಣ ಬಿಡುಗಡೆಗೆ ನಿರ್ದೇಶನ ನೀಡುತ್ತಾ, ಅಥವಾ ಸರ್ಕಾರ ವಿಳಂಬಕ್ಕೆ ಕರಣ ನೀಡುತ್ತಾ ಅಂತ ಕಾದು ನೋಡಬೇಕಿದೆ.
ಲಕ್ಷಾಂತರ ಮಹಿಳೆಯರ ಭವಿಷ್ಯದ ಪ್ರಶ್ನೆಯಾಗಿರುವ ಈ ವಿಷಯದಲ್ಲಿ ಹೈಕೋರ್ಟ್ ಒಂದು ದಿಟ್ಟ ನಿರ್ಧಾರ ತೆಗೆದುಕೊಳ್ಳುತ್ತೆ ಅಂತ ಎಲ್ಲರೂ ನಿರೀಕ್ಷಿಸಿದ್ದಾರೆ.
ಸರ್ಕಾರ ಬೇಗನೆ ಈ ಸಮಸ್ಯೆಯನ್ನ ಬಗೆಹರಿಸುತ್ತೆ ಅಂತ ಮಹಿಳೆಯರು ಭರವಸೆ ಇಟ್ಟುಕೊಂಡಿದ್ದಾರೆ.
ಇದನ್ನು ಓದಿ:
PM YASASVI ಸ್ಕಾಲರ್ಶಿಪ್ 2026: ಪರೀಕ್ಷೆ ಇಲ್ಲದೆ ₹3 ಲಕ್ಷ ಪಡೆಯುವುದು ಈಗ ಸುಲಭ