PGCET ವಿದ್ಯಾರ್ಥಿಗಳಿಗೆ KEA (ಕರ್ನಾಟಕ ಎಕ್ಸಾಮಿನೇಷನ್ ಅಥಾರಿಟಿ) ಇಂದ ಬಂದಿರುವ ಒಂದು ಬಿಗ್ ಅಪ್ಡೇಟ್ ಬಗ್ಗೆ ನಿಮಗೆ ಮಾಹಿತಿ ನೀಡೋಕೆ ಬಂದಿದ್ದೀವಿ. ನೀವೆಲ್ಲಾ ಎದುರು ನೋಡುತ್ತಿದ್ದ PGCET 2026 MBA ಮತ್ತು MCA ಎಂಟ್ರನ್ಸ್ ಎಕ್ಸಾಮ್ಗಳ ದಿನಾಂಕದಲ್ಲಿ ಬದಲಾವಣೆಯಾಗಿದೆ.
ಈ ಅಪ್ಡೇಟ್ ಬಗ್ಗೆ KEA ಅವರು ತಮ್ಮ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ನಲ್ಲಿ ಪೋಸ್ಟ್ ಮಾಡಿದ್ದಾರೆ.
MBA ಮತ್ತು MCA ಪರೀಕ್ಷೆಗಳ ಹೊಸ ದಿನಾಂಕ ಏನು?
PGCET 2026 MBA ಹಾಗೂ MCA ಪ್ರವೇಶ ಪರೀಕ್ಷೆಗಳು, ಮೊದಲು ಮೇ 24 ರಂದು ನಡೆಯಬೇಕಿತ್ತು.
ಆದರೆ, KEA ಇಂದ ಬಂದಿರುವ ಹೊಸ ಅಪ್ಡೇಟ್ ಪ್ರಕಾರ, ಈ ಎಕ್ಸಾಮ್ಗಳನ್ನು ಈಗ ಮುಂದೂಡಲಾಗಿದೆ.
ವಿದ್ಯಾರ್ಥಿಗಳು ಈಗ ಹೊಸ ದಿನಾಂಕವನ್ನು ನೋಟ್ ಮಾಡಿಕೊಳ್ಳಬೇಕು.
ನಿಮ್ಮ MBA ಮತ್ತು MCA ಎಕ್ಸಾಮ್ ಈಗ ಜೂನ್ 14 ರಂದು ನಡೆಯಲಿದೆ. ಈ ಬದಲಾವಣೆ ನಿಮಗೆ ಸ್ವಲ್ಪ ಹೆಚ್ಚು ಸಮಯ ಸಿಗುವಂತೆ ಮಾಡಿದೆ. ಈ ಬಗ್ಗೆ ಸರಿಯಾಗಿ ಮಾಹಿತಿ ತಿಳಿದುಕೊಂಡು ಪ್ರಿಪೇರ್ ಆಗಿ.
ಪರೀಕ್ಷಾ ದಿನಾಂಕ ಬದಲಾವಣೆಗೆ ಕಾರಣ ಏನು?
ಪರೀಕ್ಷಾ ದಿನಾಂಕ ಬದಲಾವಣೆಗೆ ಮುಖ್ಯ ಕಾರಣ ಅಂದ್ರೆ, ಅದೇ ದಿನ UPSC ಎಕ್ಸಾಮ್ ಕೂಡ ಶೆಡ್ಯೂಲ್ ಆಗಿತ್ತು.
ಮೇ 24 ರಂದು ನಡೆಯಬೇಕಿದ್ದ PGCET ಪರೀಕ್ಷೆ ಹಾಗೂ ಯುಪಿಎಸ್ಸಿ ಪರೀಕ್ಷೆ ಒಂದೇ ದಿನ ಬರುತ್ತಿದ್ದರಿಂದ, ಸಾಕಷ್ಟು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿತ್ತು.
ಇದನ್ನು ಮನಗಂಡ KEA, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಇದರಿಂದ ಯಾವ ವಿದ್ಯಾರ್ಥಿಗೂ ಒಂದೇ ದಿನ ಎರಡು ಪ್ರಮುಖ ಎಕ್ಸಾಮ್ ಬರೆಯುವ ಅನಿವಾರ್ಯತೆ ಇರೋಲ್ಲ.
M.Tech, M.E., ಮತ್ತು DCET ಪರೀಕ್ಷೆಗಳ ಬಗ್ಗೆ ಸ್ಪಷ್ಟತೆ
MBA ಮತ್ತು MCA ಪರೀಕ್ಷೆಗಳ ದಿನಾಂಕ ಬದಲಾಗಿದ್ರೂ, M.Tech, M.E., ಹಾಗು DCET ಎಕ್ಸಾಮ್ಗಳ ಬಗ್ಗೆ ಯಾವುದೇ ಬದಲಾವಣೆ ಇಲ್ಲ ಅಂತ KEA ಸ್ಪಷ್ಟಪಡಿಸಿದೆ. ಈ ಪರೀಕ್ಷೆಗಳು ಮೊದಲೇ ಘೋಷಿಸಿದಂತೆ ಮೇ 23 ರಂದೇ ನಡೆಯಲಿವೆ.
M.Tech, M.E., ಮತ್ತು DCET ವಿದ್ಯಾರ್ಥಿಗಳು ತಮ್ಮ ಮೊದಲೇ ನಿಗದಿತ ಶೆಡ್ಯೂಲ್ ಪ್ರಕಾರವೇ ಪ್ರಿಪೇರ್ ಆಗಬೇಕು.
ಅವರಿಗೆ ಎಕ್ಸ್ಟ್ರಾ ಟೈಮ್ ಸಿಕ್ಕಿಲ್ಲ, ಹಾಗಾಗಿ ಈಗಿರುವ ಟೈಮ್ನಲ್ಲಿ ಗಂಭೀರವಾಗಿ ಓದಿಕೊಳ್ಳೋದು ಬಹಳ ಮುಖ್ಯ.
KEA ಅಧಿಕೃತ ಪ್ರಕಟಣೆ – ಟ್ವಿಟ್ಟರ್ ನಲ್ಲಿ ಮಾಹಿತಿ:
#PGCET-2026: ಮೇ 24ರಂದು ನಡೆಯಬೇಕಿದ್ದ #MBA, #MCA ಪ್ರವೇಶ ಪರೀಕ್ಷೆಯನ್ನು ಜೂನ್ 14ಕ್ಕೆ ಮುಂದೂಡಲಾಗಿದೆ.
— ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA (@KEA_karnataka) May 14, 2026
ಮೇ 24 ರಂದು #UPSC ಪರೀಕ್ಷೆ ಇರುವ ಕಾರಣಕ್ಕೆ ಈ ಬದಲಾವಣೆ ಮಾಡಲಾಗಿದೆ.
ಈ ಹಿಂದೆ ಪ್ರಕಟಿಸಿದಂತೆ ಮೇ 23ರಂದು #M.Tech/ME ಹಾಗೂ #DCET-26 ಪರೀಕ್ಷೆಗಳು ನಡೆಯಲಿವೆ.
– ಹೆಚ್.ಪ್ರಸನ್ನ ಐಎಎಸ್
ಕಾರ್ಯನಿರ್ವಾಹಕ ನಿರ್ದೇಶಕರು…
ಈ ಎಲ್ಲಾ ಮಾಹಿತಿ KEA ಯ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ನಲ್ಲಿ ಲಭ್ಯವಿದೆ. KEA ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿರುವ ಶ್ರೀ ಹೆಚ್. ಪ್ರಸನ್ನ ಸರ್ ಅವರೇ ಈ ಬಗ್ಗೆ ಟ್ವೀಟ್ ಮಾಡಿ ತಿಳಿಸಿದ್ದಾರೆ.
ಈ ಮಾಹಿತಿ ಅಥೆಂಟಿಕ್ ಆಗಿದ್ದು, ವಿದ್ಯಾರ್ಥಿಗಳು ಯಾವುದೇ ಗೊಂದಲಕ್ಕೀಡಾಗಬೇಕಿಲ್ಲ.
ಯಾವಾಗಲೂ ಅಧಿಕೃತ ಮೂಲಗಳಿಂದ ಬಂದ ಮಾಹಿತಿ ಮಾತ್ರ ನಂಬಿ. ಯಾವುದೇ ಫೇಕ್ ನ್ಯೂಸ್ ಗಳಿಗೆ ಕಿವಿಗೊಡದೆ, KEA ವೆಬ್ಸೈಟ್ ಅಥವಾ ಅವರ ಸೋಶಿಯಲ್ ಮೀಡಿಯಾ ಪೇಜ್ಗಳನ್ನು ಫಾಲೋ ಮಾಡಿ.
ಪ್ರಮುಖ ದಿನಾಂಕಗಳ ಜ್ಞಾಪನೆ: ಪರೀಕ್ಷೆಗೆ ಸಿದ್ಧರಾಗಿ!
- PGCET 2026 MBA ಮತ್ತು MCA ಎಕ್ಸಾಮ್: ಜೂನ್ 14, 2026.
- PGCET 2026 M.Tech, M.E., ಮತ್ತು DCET ಎಕ್ಸಾಮ್: ಮೇ 23, 2026.
PGCET 2026 ಪರೀಕ್ಷೆಗಳಿಗೆ ಸಂಬಂಧಿಸಿದಂತೆ KEA ಮಹತ್ವದ ಬದಲಾವಣೆಯನ್ನು ಮಾಡಿದೆ. MBA ಮತ್ತು MCA ವಿದ್ಯಾರ್ಥಿಗಳಿಗೆ ಈಗ ಇನ್ನಷ್ಟು ತಯಾರಿ ನಡೆಸಲು ಅವಕಾಶ ಸಿಕ್ಕಿದೆ.
M.Tech, M.E., ಮತ್ತು DCET ವಿದ್ಯಾರ್ಥಿಗಳು ತಮ್ಮ ಮೊದಲಿನ ಶೆಡ್ಯೂಲ್ ಪ್ರಕಾರವೇ ಪ್ರಿಪೇರ್ ಆಗಬೇಕು. ಎಲ್ಲಾ ವಿದ್ಯಾರ್ಥಿಗಳಿಗೆ ಬೆಲಗಾವಿ ವಾಯ್ಸ್ ಕಡೆಯಿಂದ ಪರೀಕ್ಷೆಗೆ ಶುಭಾಶಯಗಳು.
ಉತ್ತಮವಾಗಿ ಪ್ರದರ್ಶನ ನೀಡಿ, ನಿಮ್ಮ ಕನಸುಗಳ ಕಾಲೇಜು ಸೇರಿಕೊಳ್ಳಿ.
ಇದನ್ನು ಓದಿ:
PGCET 2026: ಅಡ್ಮಿಟ್ ಕಾರ್ಡ್ ಸಿಕ್ತ? ಎಕ್ಸಾಮ್ ಬಗ್ಗೆ ಫುಲ್ ಡೀಟೇಲ್ಸ್!