ಗೃಹಲಕ್ಷ್ಮಿ, ಗೃಹಜ್ಯೋತಿ ಹೊಸ ಅರ್ಜಿ: ₹2000, ಉಚಿತ ವಿದ್ಯುತ್ ಪಡೆಯಲು ಹೊಸ ರೂಲ್ಸ್!

ಕರ್ನಾಟಕದಲ್ಲಿ ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಯೋಜನೆಗಳು ಎಷ್ಟೋ ಕುಟುಂಬಗಳಿಗೆ ದೊಡ್ಡ ಆಶಾಕಿರಣ ಆಗಿವೆ. ಸರ್ಕಾರ ಮಹಿಳೆಯರ ಸಬಲೀಕರಣಕ್ಕೆ ಮತ್ತೆ ಜನರ ಬದುಕಿಗೆ ಸಪೋರ್ಟ್ ಕೊಡೋಕೆ ಈ ಯೋಜನೆಗಳನ್ನ ಜಾರಿಗೆ ತಂದಿತ್ತು. ಆದ್ರೆ, ಈಗ ಈ ಸೌಲಭ್ಯಗಳನ್ನ ಪಡೆಯೋಕೆ ಸರ್ಕಾರ ಹೊಸ ಅರ್ಜಿ ಸಲ್ಲಿಕೆಗೆ ಕರೆ ಕೊಟ್ಟಿದೆ. ಇದರಿಂದ, ಮೊದಲೇ ಅರ್ಜಿ ಹಾಕಿದ್ದವರಿಗೂ ಸ್ವಲ್ಪ ಗೊಂದಲ ಶುರುವಾಗಿದೆ. ಏನಿದು ಹೊಸ ಅರ್ಜಿ? ಯಾರಿಗೆ ಅಪ್ಲೈ ಮಾಡೋದು ಕಡ್ಡಾಯ? ಯಾವ ದಾಖಲೆಗಳು ಬೇಕು? ಅಂತ ಎಲ್ಲ ಮಾಹಿತಿ ನಾವ್ ಇಲ್ಲಿ ಡೀಟೇಲ್ ಆಗಿ ಹೇಳ್ತೀವಿ.

ಹೊಸ ಅರ್ಜಿ ಯಾಕೆ ಕಡ್ಡಾಯ?

ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಯೋಜನೆಗಳ ಅಡಿಯಲ್ಲಿ ₹2000 ಹಣ ಹಾಗೂ ಉಚಿತ ವಿದ್ಯುತ್ ಪಡೆಯಲು ಹೊಸದಾಗಿ ಅರ್ಜಿ ಸಲ್ಲಿಕೆ ಮಾಡೋದು ಕಡ್ಡಾಯ ಅಂತ ಸರ್ಕಾರ ಹೇಳಿದೆ. ಒಂದು ವೇಳೆ ನೀವು ಈಗ ಹೊಸ ಅರ್ಜಿಯನ್ನ ಸಲ್ಲಿಸದಿದ್ರೆ, ನೀವು ಈ ಯೋಜನೆಗಳ ಫಲಾನುಭವಿಗಳಾಗೋದಿಲ್ಲ. ಇದನ್ನ ಸರ್ಕಾರ ‘ಮರು ಅರ್ಜಿ ಸಲ್ಲಿಕೆ’ ಅಂತಾನೂ ಕರೆಯುತ್ತಿದೆ. ಮುಖ್ಯವಾಗಿ, ಅನಗತ್ಯವಾಗಿ ಸರ್ಕಾರಿ ಹಣ ಪೋಲಾಗುವುದನ್ನ ತಪ್ಪಿಸೋಕೆ ಈ ನಿರ್ಧಾರ ತಗೊಂಡಿದ್ದೇವೆ ಅಂತ ಸರ್ಕಾರ ಸ್ಪಷ್ಟಪಡಿಸಿದೆ. ಸೋ, ಬೆನಿಫಿಟ್ ಬೇಕಂದ್ರೆ ಮತ್ತೆ ಅಪ್ಲೈ ಮಾಡ್ಲೇಬೇಕು.

ಗೃಹಲಕ್ಷ್ಮಿ ಯೋಜನೆಗೆ ಯಾರು ಅರ್ಹರು?

  • ಅಂತ್ಯೋದಯ, ಬಿಪಿಎಲ್ ಅಥವಾ ಎಪಿಎಲ್ ಕಾರ್ಡ್ ನಲ್ಲಿ ‘ಮನೆ ಯಜಮಾನಿ’ ಅಂತ ಮಹಿಳೆ ಹೆಸರು ಇರಬೇಕು.
  • ಯಜಮಾನಿ ಅಥವಾ ಅವರ ಪತಿ ಆದಾಯ ತೆರಿಗೆ ಪಾವತಿದಾರರಾಗಿರಬಾರದು.
  • ಯಜಮಾನಿ ಅಥವಾ ಅವರ ಪತಿ ಜಿಎಸ್‌ಟಿ ಪಾವತಿದಾರರೂ ಆಗಿರಬಾರದು.

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು?

  • ಮನೆ ಯಜಮಾನಿಯ ಆಧಾರ್ ಕಾರ್ಡ್ ಪ್ರತಿ.
  • ಆಧಾರ್ ಜೋಡಣೆಯಾಗಿರುವ ಬ್ಯಾಂಕ್ ಪಾಸ್‌ಬುಕ್. (ಇಲ್ಲ ಅಂದ್ರೆ, ಬ್ಯಾಂಕ್‌ನಲ್ಲಿ ಲಿಂಕ್ ಮಾಡ್ಸಿ.)
  • ಯಜಮಾನಿಯ ಹೆಸರಿನಲ್ಲಿರುವ ರೇಷನ್ ಕಾರ್ಡ್ ಪ್ರತಿ.

ಅರ್ಜಿ ಸಲ್ಲಿಕೆ ಎಲ್ಲಿ ಮತ್ತು ಹೇಗೆ?

  • ಸೇವಾ ಸಿಂಧು ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ (ಮೊಬೈಲ್ ನಂಬರ್ ಬಳಸಿ ರಿಜಿಸ್ಟ್ರೇಶನ್ ಮಾಡ್ಕೋಬೇಕು).
  • ನಿಮ್ಮ ಹತ್ತಿರದ ಗ್ರಾಮ ಒನ್, ಬೆಂಗಳೂರು ಒನ್, ಕರ್ನಾಟಕ ಒನ್ ಕೇಂದ್ರಗಳಲ್ಲಿ.
  • ನಾಡಕಚೇರಿಗಳಲ್ಲೂ ಕೂಡ ನೋಂದಣಿಗೆ ಅವಕಾಶ ಇರುತ್ತೆ.

ಸರ್ಕಾರ ಗುರುತಿನ ಚೀಟಿ ವಿತರಣೆ ಏಕೆ?

ರಾಜ್ಯ ಸರ್ಕಾರ ಈಗ ಗೃಹಜ್ಯೋತಿ ಮತ್ತು ಗೃಹಲಕ್ಷ್ಮಿ ಯೋಜನೆಗಳ ಫಲಾನುಭವಿಗಳ ಪರಿಷ್ಕರಣೆಗೆ ಮುಂದಾಗಿದೆ. ಇದ್ರಿಂದ ಅನಗತ್ಯವಾಗಿ ಹಣ ಪೋಲಾಗುವುದನ್ನ ತಪ್ಪಿಸೋಕೆ ಸಾಧ್ಯ ಆಗುತ್ತೆ ಅಂತ ಹೇಳಿದೆ. ಅರ್ಹ ಫಲಾನುಭವಿಗಳಿಗೆ ಗುರುತಿನ ಚೀಟಿ ವಿತರಣೆ ಮಾಡೋಕೆ ಸರ್ಕಾರ ಪ್ಲಾನ್ ಮಾಡ್ಕೊಂಡಿದೆ.

ಯಾರಿಗೆ ನಿಜವಾಗ್ಲೂ ಈ ಸೌಲಭ್ಯ ಬೇಕು ಅಂತ ಐಡೆಂಟಿಫೈ ಮಾಡಿ, ಅವರಿಗೆ ಮಾತ್ರ ಬೆನಿಫಿಟ್ಸ್ ಸಿಗಬೇಕು ಅನ್ನೋದು ಸರ್ಕಾರದ ಉದ್ದೇಶ. ಇದರಿಂದ, ಯೋಜನೆಯ ಪಾರದರ್ಶಕತೆ ಹೆಚ್ಚುತ್ತೆ ಅಂತಾನೂ ಸರ್ಕಾರ ಹೇಳಿದೆ.

ಆದ್ರೆ, ಜನಕ್ಕೆ ಈ ಹೊಸ ರೂಲ್ಸ್ ಬೇಕಾಗಿರಲಿಲ್ಲ.

ಸಾರ್ವಜನಿಕರ ಅಸಮಾಧಾನ ಮತ್ತು ಗೊಂದಲ

ಸರ್ಕಾರದ ಈ ಹೊಸ ನಿರ್ಧಾರಕ್ಕೆ ಸಾರ್ವಜನಿಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅನೇಕ ಫಲಾನುಭವಿಗಳು ಈಗಾಗಲೇ ಒಮ್ಮೆ ಅರ್ಜಿ ಹಾಕಿ, ತಿಂಗಳುಗಟ್ಟಲೆ ಕಾದಿದ್ರು. ಈಗ ಮತ್ತೆ ಅರ್ಜಿ ಹಾಕೋದು ಒಂದು ದೊಡ್ಡ ತಲೆನೋವು ಅಂತ ಅವ್ರೆಲ್ಲ ಹೇಳ್ತಿದ್ದಾರೆ. ‘ಇದೇನು ವರ್ಷಪೂರ್ತಿ ಅಪ್ಲಿಕೇಶನ್ ಹಾಕ್ತಾನೆ ಇರಬೇಕಾ?’ ಅಂತ ಪ್ರಶ್ನಿಸುತ್ತಿದ್ದಾರೆ. ಕೆಲವರಿಗೆ ಅರ್ಜಿ ಹಾಕೋಕೆ ಪರದಾಡಬೇಕಾದ ಪರಿಸ್ಥಿತಿ ಬಂದಿದೆ. ‘ಈಗಾಗಲೇ ಸಿಕ್ಕಿರೋ ದುಡ್ಡನ್ನ ಕೊಡಿ, ಹೊಸದಾಗಿ ಯಾಕೆ ಈ ಗೊಂದಲ?’ ಅಂತ ಜನರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಇದು ಸಾರ್ವಜನಿಕರಿಗೆ ಅನಗತ್ಯ ತೊಂದರೆ ಕೊಡುತ್ತೆ ಅಂತ ಬೆಂಗಳೂರು ಜನ ಹೇಳ್ತಿದ್ದಾರೆ.

ಮತ್ತೆ ಮತ್ತೆ ಅರ್ಜಿ ಸಲ್ಲಿಕೆಯಿಂದ ಆಗೋ ಸಮಸ್ಯೆಗಳು

ಜನರ ಪ್ರಕಾರ, ಮತ್ತೆ ಮತ್ತೆ ಅರ್ಜಿ ಸಲ್ಲಿಕೆ ಅಂತ ಸರ್ಕಾರ ಹೇಳಿದ್ರೆ, ಅದ್ರಿಂದ ಆಗೋ ಸಮಸ್ಯೆಗಳು ಜಾಸ್ತಿ. ಮೂರು ವರ್ಷ ಮುಗಿದ ಮೇಲೆ ಇನ್ನೇನು ಎರಡು ವರ್ಷಕ್ಕೆ ಮತ್ತೆ ಅಪ್ಲಿಕೇಶನ್ ಪ್ರೋಸೆಸ್ ಮಾಡ್ಬೇಕು ಅಂದ್ರೆ, ಅದಕ್ಕೆ ದುಡ್ಡು ಖರ್ಚಾಗುತ್ತೆ, ಸಮಯ ವ್ಯರ್ಥ ಆಗುತ್ತೆ. ‘ವೋಟ್ ಹಾಕಿದ್ದು ಎಲ್ಲರಿಗೂ, ಕೊಡೋದು ಎಲ್ಲರಿಗೂ ಅಂದ್ಮೇಲೆ, ಯಾಕೆ ಈ ತರ ಹಿಂಸೆ?’ ಅಂತ ಕೇಳ್ತಿದ್ದಾರೆ. ಮೊದಲು ಸಲೀಸಾಗಿ ಕೊಡ್ತೀವಿ ಅಂದ್ಬಿಟ್ಟು ಈಗ ಮತ್ತೆ ತೊಂದರೆ ಕೊಡೋಕೆ ಹೊರಟಿದ್ದಾರೆ. ಬೇಡ ಬೇಡ ಅಂದರೂ, ಸುಮ್ಮನೆ ಎಲ್ಲಾ ಗಜಿಬಿಜಿ ಮಾಡ್ತಿದ್ದಾರೆ ಅಂತ ಜನ ಬೇಸರ ವ್ಯಕ್ತಪಡಿಸ್ತಿದ್ದಾರೆ.

“ನಮಗೇನು ಬೇಕಾಗಿರಲಿಲ್ಲ ಈ ಹೊಸ ರೂಲ್ಸ್” – ಜನರ ಅಳಲು

ಅನೇಕ ಫಲಾನುಭವಿಗಳು ‘ಈ ಹೊಸ ರೂಲ್ಸ್ ನಮಗೆ ಬೇಕಾಗಿರಲಿಲ್ಲ’ ಅಂತ ನೇರವಾಗಿ ಹೇಳ್ತಿದ್ದಾರೆ. ‘ಆಲ್ರೆಡಿ ನಾವು ಆಧಾರ್ ಕಾರ್ಡ್, ರೇಷನ್ ಕಾರ್ಡ್ ಎಲ್ಲಾ ಕೊಟ್ಟಿದ್ದೀವಿ, ಎಲ್ಲಾ ಮಾಡ್ಸಿದ್ದೀವಿ.

ಮತ್ತೆ ಯಾಕೆ ಈಗ ಹೊಸದಾಗಿ?’ ಅಂತ ಜನರು ಸರ್ಕಾರದ ನಿರ್ಧಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಿಎಂ ಬದಲಾದ ತಕ್ಷಣ ರೂಲ್ಸ್ ಬದಲಾಯಿಸೋದು ಸರಿಯಲ್ಲ, ಇದರಿಂದ ಜನರಿಗೆ ತುಂಬಾ ತೊಂದರೆ ಆಗುತ್ತೆ. ಈಗ ಇರೋ ನಿಯಮಗಳನ್ನೇ ಮುಂದುವರಿಸಿಕೊಂಡು ಹೋದ್ರೆ ಸಾಕು, ಸುಮ್ಮನೆ ಗೊಂದಲ ಮಾಡ್ಬೇಡಿ ಅಂತ ಅವರು ಮನವಿ ಮಾಡಿದ್ದಾರೆ. ಇದು ಅನಗತ್ಯ ಅಂತ ಅವರ ಅಭಿಪ್ರಾಯ.

ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗಳು ಜನರಿಗೆ ಅನುಕೂಲ ಆದ್ರೂ, ಈಗಿನ ಹೊಸ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಸಾಕಷ್ಟು ಗೊಂದಲ ಮೂಡಿಸಿದೆ. ಸರ್ಕಾರದ ಉದ್ದೇಶ ಹಣ ಪೋಲಾಗೋದನ್ನ ತಪ್ಪಿಸೋದಿದ್ರೂ, ಫಲಾನುಭವಿಗಳಿಗೆ ಅನಗತ್ಯ ತೊಂದರೆ ಆಗುತ್ತಿದೆ ಅನ್ನೋದು ಸತ್ಯ. ಜನ ಸಾಮಾನ್ಯರು ಈ ಯೋಜನೆಗಳ ಮುಂದುವರಿಕೆ ಜೊತೆ, ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನ ಸರಳಗೊಳಿಸಬೇಕು ಅಂತ ಅಪೇಕ್ಷಿಸ್ತಿದ್ದಾರೆ.

ಸರ್ಕಾರ ಈ ಬಗ್ಗೆ ಜನರಿಂದ ಬರ್ತಿರೋ ಅಭಿಪ್ರಾಯಗಳನ್ನ ಪರಿಗಣಿಸಿ, ಒಂದು ಸರಿಯಾದ ನಿರ್ಧಾರ ತಗೊಂಡ್ರೆ ಒಳ್ಳೆದು. ಇಲ್ಲವಾದ್ರೆ, ಜನರಿಗೆ ಇದರ ಲಾಭ ಸಿಗೋದೇ ಕಷ್ಟ ಆಗಬಹುದು.

ಇದನ್ನು ಓದಿ:

Karnataka Student Free ಬಸ್ ಪಾಸ್: ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು, ಪ್ರಕ್ರಿಯೆ ಹೇಗೆ?

Leave a Comment