ನಮ್ಮ ದೇಶವನ್ನು ಈಗಿರುವ ಸಂಕಷ್ಟ ಪರಿಸ್ಥಿತಿಯಿಂದ ನಾವು ಹೊರಗೆ ತರಬೇಕು. ಇದು ಒಬ್ಬರಿಂದ ಸಾಧ್ಯವಲ್ಲದ ಕೆಲಸ ಈ ಕೆಲಸ ಸಾಧಿಸಲು ದೇಶದ ಪ್ರತಿ ಒಬ್ಬ ಪ್ರಜೆಯೂ ಇದಕ್ಕೆ ಕೆಲಸ ಮಾಡಬೇಕು ಎಂದು ಮೋದಿ ಅವರು ಭಾಷಣದಲ್ಲಿ ಹೇಳಿದ್ದಾರೆ.
ಪೆಟ್ರೋಲ್ ಡೀಸೆಲ್ ಬೆಲೆ ಏನು ಈಗಿನ ಯುದ್ಧದ ಪರಿಸ್ಥಿತಿಯಲ್ಲಿ ಬಹಳಷ್ಟು ಬೆಲೆ ಏರಿಕೆಯಾಗಿದೆ ಆದ್ದರಿಂದ ಮೋದಿಯವರು ಸಾಫ್ಟ್ವೇರ್ ಕಂಪನಿಗಳಿಗೆ ವರ್ಕ್ ಫ್ರಮ್ Home ನೀಡುವಂತೆ ಮನವಿ ಮಾಡಿದ್ದಾರೆ.
ಒಂದು ವರ್ಷದ ಕಾಲ ಯಾವುದೇ ರೀತಿಯ ಚಿನ್ನವನ್ನು ಖರೀದಿ ಮಾಡಲು ಹೋಗಬೇಡಿ ಎಂದು ಕೂಡ ಮೋದಿಯವರು ಭಾಷಣದ ಮೂಲಕ ತಿಳಿಸಿದ್ದಾರೆ.
ಮೋದಿಯವರು ಹೇಳಿದ 7 ಸೂತ್ರಗಳು ಇಲ್ಲಿದೆ
- ಮನೆಯಿಂದಲೇ ಕೆಲಸ ಮಾಡಿ. ಕಂಪನಿಗೆ ನಿತ್ಯ ಹೋಗುವುದನ್ನು ಕಡಿಮೆ ಮಾಡಿ ಎಂದು ಮೋದಿ ಅವರು ಹೇಳಿದ್ದರು.
- ಸಾಧ್ಯವಾದಷ್ಟು ಈ ಒಂದು ವರುಷಗಳ ಕಾಲ ಚಿನ್ನವನ್ನು ಖರೀದಿ ಮಾಡಲು ಹೋಗಬೇಡಿ ಎಂದು ಮೋದಿಯವರು ತಿಳಿಸಿದ್ದಾರೆ.
- ಆದಷ್ಟು ಪೆಟ್ರೋಲ್ ಹಾಗೂ ಡೀಸೆಲ್ ಬಳಕೆ ಮಾಡುವುದನ್ನು ಕಡಿಮೆ ಮಾಡಿ ಮೆಟ್ರೋ ಹಾಗು ಪಬ್ಲಿಕ್ ವಾಹನಗಳನ್ನು ಉಪಯೋಗಿಸಬೇಕು ಎಂದು ಕೂಡ ತಿಳಿಸಿದ್ದಾರೆ.
- ಪದಾರ್ಥ ತಯಾರು ಮಾಡಲು ಅಡುಗೆ ಎಣ್ಣೆ ಬಳಸುವುದನ್ನು ಕಡಿಮೆ ಮಾಡಿ ಎಂದು ಹೇಳಿದ್ದಾರೆ.
- ರೈತರಿಗೆ ಕೂಡ ಒಂದು ಮನವಿ ಮಾಡಿದ್ದಾರೆ. ಅದೇನೆಂದರೆ ಕೆಮಿಕಲ್ ಫರ್ಟಿಲೈಜರ್ ಬಳಸುವದನ್ನು ಕಡಿಮೆ ಮಾಡಿ ಹಾಗೂ ನ್ಯಾಚುರಲ್ ಫಾರ್ಮಿನ್ ಮಾಡಿ ಎಂದು ತಿಳಿಸಿದ್ದಾರೆ.
- ಹೊರದೇಶಗಳಿಂದ ವಸ್ತುಗಳನ್ನು ತರಿಸುವುದು ಕಮ್ಮಿ ಮಾಡಿ ಎಂದು ಹೇಳಿದ್ದಾರೆ.
- ಒಂದು ವರುಷದ ಕಾಲ ಹೊರದೇಶಕ್ಕೆ ಹೋಗುವುದನ್ನು ನಿಲ್ಲಿಸಬೇಕು ಎಂದು ಹೇಳಿದ್ದಾರೆ.
ಈ ಒಂದು ಸೂತ್ರಗಳನ್ನು ಕೇಳಿ ಜನರು ಏನು ಹೇಳಿದ್ದಾರೆ
ನಯವಂಚಕತೆ ಅಥವಾ ರಾಜಕೀಯ ಉದ್ದೇಶ: ವಿರೋಧ ಪಕ್ಷದ (ಕಾಂಗ್ರೆಸ್) ನಾಯಕರ ಪ್ರಕಾರ, ಬೆಲೆ ಏರಿಕೆಯನ್ನು ಒಂದೇ ಬಾರಿಗೆ ಹೊರೆಯಾಗಿ ಹೇರುವುದಕ್ಕಿಂತ, ಸ್ವಲ್ಪ ಸ್ವಲ್ಪವೇ ಹಂತ ಹಂತವಾಗಿ (ವಾರಕ್ಕೆ 50 ರೂಪಾಯಿಗಳಂತೆ) ಹೆಚ್ಚಿಸಬಹುದಿತ್ತು. ಇಷ್ಟು ದಿನ ಬೆಲೆ ಏರಿಸದೆ ಈಗ ಏಕಾಏಕಿ ಏರಿಸುತ್ತಿರುವುದು ಸರ್ಕಾರದ ವೈಫಲ್ಯ ಮತ್ತು ರಾಜಕೀಯ ಪ್ರೇರಿತ ಎಂದು ಅವರು ಟೀಕಿಸಿದ್ದಾರೆ.
ಅನುಷ್ಠಾನದ ಕೊರತೆ: ದೇಶದ ಪ್ರಧಾನಿಯವರು ಇಂಧನ ಉಳಿತಾಯದಂತಹ ಮಿತವ್ಯಯದ ಕ್ರಮಗಳನ್ನು ಜನರಿಗೆ ಸಲಹೆ ನೀಡುವಾಗ, ಚಾರಿಟಿ ಬಿಗಿನ್ಸ್ ಅಟ್ ಹೋಮ್ (ಸೇವೆಯು ಮನೆಯಿಂದಲೇ ಪ್ರಾರಂಭವಾಗಬೇಕು) ಎಂಬಂತೆ, ಆಡಳಿತ ಪಕ್ಷದ ನಾಯಕರು ಮತ್ತು ಶಾಸಕರು ಕೂಡ ಸಾರ್ವಜನಿಕ ಸಾರಿಗೆಯನ್ನು ಬಳಸುವ ಮೂಲಕ ಸರಳತೆಯನ್ನು ಮೊದಲು ಪಾಲಿಸಬೇಕೆಂದು ಆಗ್ರಹಿಸಲಾಗಿದೆ.
ಅನಗತ್ಯ ಖರ್ಚುಗಳ ಕಡಿತಕ್ಕೆ ಆಗ್ರಹ: ಕಾಂಗ್ರೆಸ್ ಪಕ್ಷವು ಸರ್ಕಾರದ ಆರ್ಥಿಕ ನಿರ್ವಹಣೆಯನ್ನು ಪ್ರಶ್ನಿಸಿ, ಪ್ರಧಾನಿಯವರು ತಮ್ಮ ದುಬಾರಿ ಉಡುಪುಗಳ ಬದಲಿಗೆ ಸರಳ ಉಡುಪು ಧರಿಸುವುದು, ವಿದೇಶಿ ಪ್ರವಾಸಗಳನ್ನು ನಿಲ್ಲಿಸುವುದು, ಮಂತ್ರಿಗಳು ವೈಮಾನಿಕ ಪ್ರಯಾಣದ ಬದಲು ರಸ್ತೆಯ ಮೂಲಕ ಸಂಚರಿಸುವುದು ಮತ್ತು ಅದ್ದೂರಿ ಮದುವೆಗಳನ್ನು ನಿಯಂತ್ರಿಸುವಂತಹ ಕ್ರಮಗಳನ್ನು ಕೈಗೊಳ್ಳಬೇಕೆಂದು ಎಂಟು ಸಲಹೆಗಳನ್ನು ನೀಡಿದೆ.
ಇದನ್ನೂ ಓದಿ:
Basavaraj Kempawad: ಬೆಳಗಾವಿ ಯುವಕನ ಅದ್ಭುತ ಸಾಧನೆ, ದೇಶಕ್ಕೆ ಪ್ರಥಮ, ಕರುನಾಡಿಗೆ ಕಿರೀಟ!
DRDO TBRL Paid Internship 2026: ಇಂಜಿನಿಯರಿಂಗ್ ಸ್ಟೂಡೆಂಟ್ಸ್ ಗೆ ಸುವರ್ಣಾವಕಾಶ!